ಪಕ್ಷ ಉಳಿವಿಗಾಗಿ ಶೃಂಗೇರಿ ಶಾರದೆ ಮೊರೆ ಹೋದ ಮಾಜಿ ಪ್ರಧಾನಿ
ಚಿಕ್ಕಮಗಳೂರು, ಜನವರಿ 16: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶಾರದಾ ಕ್ಷೇತ್ರ ಶೃಂಗೇರಿಗೆ ಆಗಮಿಸಿದ್ದಾರೆ. ಹೋಮ ಹವನಗಳಲ್ಲಿ ಪಾಲ್ಗೊಳ್ಳಲಿರುವ ದೇವೇಗೌಡರು ಇಂದಿನಿಂದ ಜನವರಿ 21 ರವರೆಗೆ ಶೃಂಗೇರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯದ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದು, ಎಚ್.ಡಿ.ದೇವೇಗೌಡ ಅವರಿಗೆ ಪತ್ನಿ ಚನ್ನಮ್ಮ ಸಾಥ್ ನೀಡಲಿದ್ದಾರೆ.
ಇಂದಿನಿಂದ 6 ದಿನ ಶೃಂಗೇರಿಯಲ್ಲಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಪಕ್ಷದ ಬಲವರ್ಧನೆಗಾಗಿ ವಿಶೇಷ ಪೂಜೆ, ಐದು ದಿನಗಳ ಕಾಲ ನಡೆಯಲಿರುವ ಚಂಡಿಕಾ ಯಾಗದಲ್ಲಿ ಭಾಗಿಯಾಗಲಿದ್ದಾರೆ.

ಮಂಗಳವಾರ ಪೂರ್ಣಾಹುತಿಗೆ ಎಚ್.ಡಿ.ಡಿ ಕುಟುಂಬ ಭಾಗಿಯಾಗುವ ಸಾಧ್ಯತೆ ಇದೆ. ದೇವೇಗೌಡ ದಂಪತಿ ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳ ಆರ್ಶೀವಾದ ಪಡೆದರು.












Click it and Unblock the Notifications