• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಸಿ, ಎಸ್ ಪಿ ವ್ಯಾನ್ ತಡೆದು ದುರ್ಗದಹಳ್ಳಿ ಗ್ರಾಮಸ್ಥರ ಆಕ್ರೋಶ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಆಗಸ್ಟ್ 12: ಮಲೆನಾಡಿನಲ್ಲಿ ಇಂದು ಮಳೆ ಅಬ್ಬರ ಕಡಿಮೆಯಾಗಿದೆ. ಕಳೆದ ಆರೇಳು ದಿನಗಳಿಂದ ಮಳೆ, ಪ್ರವಾಹ, ಗುಡ್ಡ ಕುಸಿತದಿಂದ ಜನ ಜರ್ಝರಿತರಾಗಿದ್ದು, ಆತಂಕ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಆದರೆ ಇಷ್ಟೆಲ್ಲಾ ಆಗಿ ವಾರ ಕಳೆದರೂ ಗ್ರಾಮದ ಕಡೆ ಅಧಿಕಾರಿಗಳು ತಲೆ ಹಾಕಲಿಲ್ಲ. ಇದರಿಂದ ಬೇಸತ್ತು ದುರ್ಗದಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ, ಎಸ್ ಪಿ ವ್ಯಾನನ್ನು ಅಡ್ಡಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗಳ ಮದುವೆಗೆ ಕೂಡಿಟ್ಟಿದ್ದ 50 ಲಕ್ಷ ಪ್ರವಾಹ ಸಂತ್ರಸ್ತರಿಗೆ ಕೊಟ್ಟ ವೈದ್ಯೆ?

ಒಂದು ವಾರದಿಂದ ಗ್ರಾಮದಲ್ಲೇ ಸಿಲುಕಿಕೊಂಡಿದ್ದ ಜನರು, ಗುಡ್ಡ ಕುಸಿತಗೊಂಡ ರಸ್ತೆಯಲ್ಲಿ ಮಳೆ ನಡುವೆಯೇ ಐದಾರು ಕಿಲೋ ಮೀಟರ್ ನಡೆದುಕೊಂಡು ಬಂದು ದುರ್ಗದಹಳ್ಳಿ ಪರಿಹಾರ ಕೇಂದ್ರ ತಲುಪಿದ್ದಾರೆ.

ಈ ಸಮಯದಲ್ಲಿ, ಅಲ್ಲಿಗೆ ಬಂದಿದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಎಸ್ ಪಿ ಅರುಣ್ ಪಾಂಡೆಯವರ ವ್ಯಾನನ್ನು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Durgadahalli villagers outrage by stopping dc and sp van. weeks after the landslide also dc didnt visited village. so villages stopped the car of dc and expressed their anger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X