• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಟ್ಟುಹಬ್ಬಕ್ಕೆ ಆನ್ ಲೈನ್ ಮೂಲಕ ಋಷ್ಯಶೃಂಗೇಶ್ವರನ ದರ್ಶನ ಪಡೆದ ಡಿಕೆಶಿ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಮೇ 15: ಇಂದು ತಮ್ಮ ಹುಟ್ಟುಹಬ್ಬವಾದ ಕಾರಣ ತಮ್ಮ ಆರಾಧ್ಯ ದೈವ, ಶೃಂಗೇರಿಯ ಋಷ್ಯಶೃಂಗನ ದರ್ಶನವನ್ನು ಆನ್ ಲೈನ್ ಮೂಲಕವೇ ಪಡೆದರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್.

ಡಿಕೆಶಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಋಷ್ಯಶೃಂಗೇಶ್ವರನಿಗೆ 101 ಕಾಯಿ ಒಡೆಯುವ ಮೂಲಕ ಕೊರೊನಾ ಮಹಾಮಾರಿ ಆದಷ್ಟು ಬೇಗ ನಿಯಂತ್ರಣವಾಗಲಿ ಎಂದು ಪ್ರಾರ್ಥಿಸಲಾಯಿತು. ತಾಲೂಕಿನ ಕಿಗ್ಗಾ ಗ್ರಾಮದ ಋಷ್ಯಶೃಂಗೇಶ್ವರ ದೇವಾಲಯದ ಎದುರು ಕರ್ನಾಟಕ ಕಾಂಗ್ರೆಸ್ ಕಿಸಾನ್ ಸೆಲ್ ನ ಅಧ್ಯಕ್ಷ ಸಚೀನ್ ಮೀಗಾ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಪ್ರವೇಶ ಇಲ್ಲದ ಕಾರಣ ಆನ್ ಲೈನ್ ಮೂಲಕವೇ ಡಿ.ಕೆ.ಶಿವಕುಮಾರ್ ತನ್ನ ಆರಾಧ್ಯ ದೈವದ ಮೊರೆ ಹೋಗಿದ್ದಾರೆ. ಆನ್ ಲೈನ್ ನಲ್ಲಿ ಪೂಜೆಯ ಸೇವೆಯನ್ನು ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಳಿದೆಲ್ಲ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ನೆರವೆರಿಸಿದ್ದಾರೆ.

ದೂರದಿಂದಲೇ ಹಾರೈಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ!

ಡಿ.ಕೆ ಶಿವಕುಮಾರ್ ಹಲವು ಬಾರಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಳೆದ ಬಾರಿ ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ರಾಜ್ಯದಲ್ಲಿ ಮಳೆಯಾಗದಿದ್ದಾಗ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು.

ಮೈಸೂರಿನಲ್ಲೂ ರಕ್ತದಾನದ ಮೂಲಕ ಹುಟ್ಟಹಬ್ಬ ಆಚರಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ಆಚರಿಸಿದ್ದಾರೆ ಡಿಕೆಶಿ ಅಭಿಮಾನಿಗಳು. ಮೈಸೂರಿನ ಸುಯೋಗ್ ಆಸ್ಪತ್ರೆಯಲ್ಲಿ 59 ಮಂದಿ ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕಾಗಿ ರಕ್ತದಾನ ಮಾಡಿದರು. ಕೊರೊನಾ ಲಾಕ್ ಡೌನ್ ನಿಂದ ಜನ ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ ಸಂಭ್ರಮಾಚರಣೆ ಬೇಡ ಎಂದು ಡಿಕೆಶಿ ಅಭಿಮಾನಿಗಳಿಗೆ ತಿಳಿಸಿದ್ದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾ ಡಾ. ಬಿ.ಜೆ. ವಿಜಯ್ ಕುಮಾರ್, ಶ್ರೀನಾಥ್ ಬಾಬು, ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಡಾ. ಎಸ್.ಪಿ. ಯೋಗಣ್ಣ ಇದ್ದರು.

English summary
Dk Shivakumar took online darshan of sringeri rushyasringeshwara on behalf of his birthday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X