ಕಾಂಗ್ರೆಸ್‌ನವರಿಗೆ ಮಾಡಲು ಕೆಲಸವಿಲ್ಲ, ಚಡ್ಡಿ ಸುಟ್ಕೊಂಡು ಇರಲಿ: ಸಿಟಿ ರವಿ ಕಿಡಿ
ಚಿಕ್ಕಮಗಳೂರು, ಜೂನ್, 6 : "ಕಾಂಗ್ರೆಸ್‌ನವರು ಚಡ್ಡಿ ಸುಟ್ಟುಕೊಂಡು ಇರಲಿ. ನಮ್ಮ ಹಳೇ ಚಡ್ಡಿಗಳು ಇವೆ. ಅವನ್ನೂ ಕೊಡುತ್ತೇವೆ ಸುಟ್ಟುಕೊಂಡೇ ಇರಲಿ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವ್ಯಂಗ್ಯವಾಡಿದರು.
ಭಾನುವಾರ ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಸಿ. ಟಿ. ರವಿ, "ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ 399 ಸ್ಥಾನಗಳಲ್ಲಿ 382 ಸ್ಥಾನಗಳಲ್ಲಿ ಡೆಪಾಸಿಟ್ ಕಳೆದುಕೊಂಡಿದೆ. ಹೀಗೆ ಮಾಡಿದರೇ ಕರ್ನಾಟಕದಲ್ಲೂ ಡೆಪಾಸಿಟ್ ನಷ್ಟವಾಗುತ್ತದೆ?" ಎಂದು ತಿಳಿಸಿದರು
"ದುರಾಂಕಾರದ ರಾಜಕರಣ, ಓಲೈಕೆ ರಾಜಕಾರಣವನ್ನು ಕರ್ನಾಟಕದ ಜನತೆ ಒಪ್ಪುವುದಿಲ್ಲ. ಇಷ್ಟೆಲ್ಲಾ ವೀರಾವೇಶದಲ್ಲಿ ಮಾತನಾಡುವ ಅವರು, ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದಾಗ ಸಿದ್ಧರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ತುಟಿ ಬಿಚ್ಚಲಿಲ್ಲ. ಇದಕ್ಕೆ ಕಾರಣ ಬೆಂಕಿ ಹಾಕಿದವರೆಲ್ಲ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಬ್ರದರ್ಸ್. ಅದಕ್ಕಾಗಿ ಅವರ ಬಾಯಿ ಬಂದ್ ಆಗಿತ್ತು. ಡಿಜೆಹಳ್ಳಿ, ಕೆಜೆಹಳ್ಳಿಯಲ್ಲಿ ನಡೆದಂತೆ ಇಡೀ ರಾಜ್ಯದಲ್ಲಿ ಮಾಡಲು ಹೊರಟಿದ್ದಾರೆ" ಎಂದರು.

ಕಾಂಗ್ರೆಸ್ ಸರ್ವನಾಶ
"ಕಾಂಗ್ರೆಸ್ ನಾಯಕರ ಹುನ್ನಾರ ನೋಡಿದರೇ ಒಳ್ಳೆಯದು. ಯಾವುದು ಇವರಿಗೆ ಬೇಡ. ಮತಾಂಧತೆಯನ್ನು ಬೆಳೆಸುವುದು ಇವರ ಗುರಿಯಂತೆ ಕಾಣುತ್ತಿದೆ. ಮತಾಂಧತೆಗೆ ಕುಮ್ಮಕ್ಕು ನೀಡಿದ್ದರಿಂದ ದೇಶ ವಿಭಜನೆಯಾಯ್ತು, ಕಾಂಗ್ರೆಸ್‌ನವರು ಮತಾಂಧರಿಗೆ ಮತ್ತೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಸರ್ವನಾಶವೂ ಆಗುತ್ತದೆ" ಎಂದು ಸಿ. ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯರಿಗೆ ಏನು ಅಧಿಕಾರವಿದೆ
ಬಿಪಿಯವರಿಗೆ ಕೋಮು ನಶೆ ಏರಿಕೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ. ಟಿ. ರವಿ, "ಹೆಡ್ಗೆವಾರ್ ಕಂಡರೇ ಇವರಿಗ್ಯಾಕೆ ಸಂಕಟ. ಭಾರತ್ ಮಾತಾಕೀ ಜೈ ಎನ್ನುವ ಶಿಕ್ಷಣವನ್ನು ಹೆಡ್ಗೆವಾರ್ ಕಲಿಸಿದರು. ಭಾರತಕ್ಕೆ ಬಾಂಬ್ ಹಾಕುವುದಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ಧರಾಮಯ್ಯ ಅವರಿಗೆ ಬಹಳ ಬೇಕಾದವರು, ಅದಕ್ಕೆ ಅವರಿಗೆ ಭಾರತ್ ಮಾತಾ ಕೀ ಜೈ ಎಂದರೇ ಉರಿಯುತ್ತದೆ ಎಂದು ಟೀಕಿಸಿದರು. ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ ಬೇಡವೋ ಅನ್ನುವುದನ್ನು ಕೇಳಲು ಸಿದ್ಧರಾಮಯ್ಯ ಯಾರು?. ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನಿಸಿದೆ, ಸರ್ಕಾರ ಒಪ್ಪಿಗೆ ನೀಡಿದೆ. ಮಧ್ಯದಲ್ಲಿ ನಂದು ಎಲ್ಲಿಡಲಿ ಅಂತಾ ಕೇಳೋಕೆ ಇವರು ಯಾರು?" ಎಂದು ಸಿ. ಟಿ. ರವಿ ಪ್ರಶ್ನಿಸಿದರು.

ಅಂಬೇಡ್ಕರ್ ಭಾರತ ರತ್ನ ಕೊಡಿಸಿದ್ದು ಬಿಜೆಪಿ
"ಪಠ್ಯಪುಸ್ತಕ ಬ್ರಹ್ಮಶ್ರೀ ನಾರಾಯಣ, ಬಸವಣ್ಣ, ಕುವೆಂಪು, ಅಂಬೇಡ್ಕರ್ ವಿಚಾರಧಾರೆ ಗಳನ್ನು ಕೈಬಿಟ್ಟಿಲ್ಲ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಹೆಜ್ಜೆ ಹೆಜ್ಜೆಗೂ ತುಳಿಯುವ ಕೆಲಸ ಮಾಡಿ, ಇಂದು ನಾಟಕ ಮಾಡುತ್ತಿದ್ದಾರೆ. ನಾವು ಗೌರವ ಕೊಡಬೇಕು, ಕೊಟ್ಟಿದ್ದೇವೆ. ಅಂಬೇಡ್ಕರ್ ಬಗ್ಗೆ ನಮಗಿರೋ ಅಭಿಮಾನಕ್ಕೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ. ಇದೇ ಚಡ್ಡಿ, ಸಂಘಿ ನರೇಂದ್ರ ಮೋದಿಯವರೇ ಅಂಬೇಡ್ಕರ್ ಹುಟ್ಟೂರನ್ನು ಅಭಿವೃದ್ಧಿ ಮಾಡಿದ್ದು. ಭೀಮ್ ಆಪ್ ತಂದಿದ್ದು. ಒಂದಲ್ಲ ಎರಡು ಬಾರಿ ಅನಕ್ಷರಸ್ಥ ವ್ಯಕ್ತಿಯನ್ನು ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದು ಇದೇ ಕಾಂಗ್ರೆಸ್. ಇಂದು ಅಂಬೇಡ್ಕರ್ ಬಗ್ಗೆ ನಮಗೆ ಹೇಳುತ್ತಾರೆ" ಎಂದು ಸಿ. ಟಿ. ರವಿ ಲೇವಡಿ ಮಾಡಿದ್ದಾರೆ.
"ಜವಾಹಾರ್‌ಲಾಲ್ ನೆಹರು ಭಾರತರತ್ನವನ್ನ ತಮಗೆ ತಾವೇ ಕೊಟ್ಕೊಂಡಿದ್ದರು. ಆದರೆ, ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ಕೊಡಲಿಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡುವಂತೆ ಶಿಫಾರಸ್ಸು ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ. ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್ ಪಾರ್ಟಿಯೂ ಅಲ್ಲ. ಇಂಥವರು ಅಂಬೇಡ್ಕರ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ" ಎಂದು ಸಿ. ಟಿ. ರವಿ ಕಾಂಗ್ರೆಸ್ ನಾಯಕರಿಗೆ ಮಾತಿನ ಪಂಚ್ ಕೊಟ್ಟಿದ್ದಾರೆ.

ಚಡ್ಡಿ ಸುಟ್ಟರೆ ಡಿಕೆಶಿ-ಸಿದ್ದರಾಮತ್ತ ಭಸ್ಮ
ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಚಡ್ಡಿ ಸುಡುವ ಅಭಿಯಾನ ಮಾಡುತ್ತೇವೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, "ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡರೆ ಸಂಸ್ಕೃತಿ ಏನೆಂಬುದು ತಿಳಿಯುತ್ತದೆ. ಆದರೆ ಚಡ್ಡಿ ಸುಡುವ ಕೆಲಸಕ್ಕೆ ಕೈ ಹಾಕಿದರೆ, ಸಿದ್ದರಾಮಯ್ಯರಿಗೆ ಭಸ್ಮ ಆಗುತ್ತಾರೆ. ಕಾಂಗ್ರೆಸ್‌ಗೆ ಭಸ್ಮಾಸುರನಿಗೆ ಆದ ಗತಿಯಾಗುತ್ತದೆ" ಎಂದು ಎಚ್ಚರಿಸಿದರು.












Click it and Unblock the Notifications