ಬಿಜೆಪಿ ಸೇರುತ್ತಾರಾ ಸಿ.ಎಂ. ಇಬ್ರಾಹಿಂ; ಅಂಥದ್ದೇನು ಹೇಳಿದರು?
Recommended Video
ಸಿದ್ದರಾಮಯ್ಯರನ್ನು ತೆಗಳಿದ ಇಬ್ರಾಹಿಂ | IBRAHIM | SIDDARAMAIAH | CONGRESS | ONEINDIA KANNADA
ಚಿಕ್ಕಮಗಳೂರು, ಜನವರಿ 16: "ನಾನು ಯಡಿಯೂರಪ್ಪ ಒಂದಲ್ಲಾ ಒಂದು ದಿನ ಒಂದೇ ಕಡೆ ಸೇರುತ್ತೇವೆ" ಎಂದು ಹೇಳಿ, ಬಿಜೆಪಿ ಸೇರುವ ಅನುಮಾನ ಹುಟ್ಟುಹಾಕಿದ್ದಾರೆ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ.
ಇಂದು ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಸಿದ್ದರಾಮೇಶ್ವರ ಜಯಂತ್ಯೋತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅವರು, ಭಾಷಣದಲ್ಲಿ ಹೀಗೆ ಇಂಥ ಒಂದು ಅನುಮಾನ ಹುಟ್ಟುಹಾಕಿದ್ದಾರೆ.
"ನಾನು, ಯಡಿಯೂರಪ್ಪ ಅವರು ಒಂದೇ ರೈಲಿನಲ್ಲಿ ಪ್ರಯಾಣಿಸೋದು. ಆದರೆ ಅವರ ನಿಲ್ದಾಣ ಬೇರೆ ಅಷ್ಟೆ. ಯಾವಾಗ ಸೇರುತ್ತೇವೊ ಗೊತ್ತಿಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸಮಾರೋಪ ಸಮಾರಂಭದ ವೇದಿಕೆ ಮೇಲೆ ಯಡಿಯೂರಪ್ಪ ಅವರನ್ನು ಹೊಗಳಿ ಅವರು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಸಿದ್ದರಾಮಯ್ಯರನ್ನು ತೆಗಳಿದ್ದಾರೆ.

"ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದರಾಮಯ್ಯಗೆ ಈ ಜಗಳದಲ್ಲಿ ಬೀಳಬೇಡ ಎಂದರೂ ನನ್ನ ಮಾತು ಕೇಳಲಿಲ್ಲ" ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications