ಜರ್ಮನಿಯಲ್ಲಿ ನಡೆಯುವ ವಿಶ್ವ ಜಲದಿನ ಸಮ್ಮೇಳನದಲ್ಲಿ ಭಾರತವನ್ನ ಪ್ರತಿನಿಧಿಸಲಿರೋ ಚಿಕ್ಕಮಗಳೂರಿನ ಕಂಪನಿ
ಜರ್ಮನಿಯ ಹೈಡಲ್ಬರ್ಗದಲ್ಲಿ 3ನೇ ಅಂತಾಷ್ಟ್ರೀಯ ವಿಶ್ವ ಜಲದಿನ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ಚಿಕ್ಕಮಗಳೂರಿನ ರೈನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆ ಆಯ್ಕೆಯಾಗಿದೆ.
ಚಿಕ್ಕಮಗಳೂರು, ಮಾರ್ಚ್, 21: ಮಾರ್ಚ್ 23ರಂದು ವಿಶ್ವ ಜಲದಿನದ ಅಂಗವಾಗಿ, ಜರ್ಮನಿಯ ಹೈಡಲ್ಬರ್ಗದಲ್ಲಿ 3ನೆಯ ಅಂತಾಷ್ಟ್ರೀಯ ವಿಶ್ವ ಜಲದಿನ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ಚಿಕ್ಕಮಗಳೂರಿನ ಹೆಮ್ಮೆಯ ರೈನ್ ವಾಟರ್ ಹಾರ್ವೆಸ್ಟಿಂಗ್ ಸಂಸ್ಥೆ ಆಯ್ಕೆಯಾಗಿದೆ.
ನೀರಿನ ಸಂರಕ್ಷಣೆ, ಗುಣಮಟ್ಟ, ನವೀನ ತಂತ್ರಜ್ಞಾನ ಅಭಿವೃದ್ಧಿ ಮತ್ತು ನೀರಿನ ಬಳಕೆ ಕುರಿತು ವಿಶ್ವ ಜಲದಿನ ಸಮ್ಮೇಳನದಲ್ಲಿ ವಿಚಾರ ಮಂಡನೆ ಮಂಡನೆ ಆಗಲಿದೆ. ಹಾಗೆಯೇ ಈ ಕುರಿತು ಸಂವಾದ, ಚರ್ಚೆಗಳು ಕೂಡ ನಡೆಯಲಿವೆ. ಸಮ್ಮೇಳನದಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿರೇಮಗಳೂರು ಪುಟ್ಟಸ್ವಾಮಿ ತಿಳಿಸಿದರು.

ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಸಂಸ್ಥೆಯ ಸಾಧನೆ
ನಮ್ಮೂರಿನ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಸಂಸ್ಥೆಯು ಮಳೆ ನೀರನ್ನು ಸಂರಕ್ಷಿಸಲು ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವಲ್ಲದೆ ಜಗತ್ತಿನ ಗಮನವನ್ನು ಸೆಳೆದಿದೆ. ಇದೀಗ ಸಂಸ್ಥೆಯ ಪರ, ಭಾರತದ ಪ್ರತಿನಿಧಿಯಾಗಿ ಸಂಸ್ಥೆಯ ನಿರ್ದೇಶಕ ಮನೋಜ್ ಸಾಮವೆಲ್ ಬ್ಯಾಪ್ಟಿಸ್ಟ್ ಭಾಗವಹಿಸಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ವಿವರಿಸಿದರು.
ಮಳೆ ನೀರು ಕೊಯ್ಲು, ಜಾಗತಿಕ ಸನ್ನಿವೇಶ, ಆಧುನಿಕ ಪರಿಹಾರಗಳು ಮತ್ತು ಅದರ ಪರಿಣಾಮಗಳ ಕುರಿತು ಮನೋಜ್ ಸಾಮ್‍ವೆಲ್ ಬ್ಯಾಪ್ಟಿಸ್ಟ್ ವಿಚಾರ ಮಂಡಿಸಲು ಜರ್ಮನಿ ಅವಕಾಶ ಕಲ್ಪಿಸಿದೆ. ಇದು ಬರೀ ಜಿಲ್ಲೆ ಅಲ್ಲದೇ ರಾಜ್ಯಕ್ಕೆ ಮತ್ತು ದೇಶಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು.
ಅಣ್ಣ-ತಂಗಿಯ ಸಾಧನೆ ರಾಷ್ಟ್ರಮಟ್ಟದವರೆಗೂ
ಇದೇ ರೀತಿಯಲ್ಲಿ ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದ ಬ್ಲೆಸ್ಡ ಆಲ್ಪೋನ್ಸ್ ಶಾಲೆಯ ವಿದ್ಯಾರ್ಥಿಗಳಿಬ್ಬರು ಕರಾಟೆ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾ ರಾಷ್ಟ್ರ ಮಟ್ಟಕ್ಕೆ ತಲುಪಿ ಗಮನ ಸೆಳೆದಿದ್ದರು. ಯುಕ್ತ ಪ್ರಸಾದ್ ಮತ್ತು ನಿಖಿಲ್ ಪ್ರಸಾದ್ ಎನ್ನುವ ಇಬ್ಬರು ಅಣ್ಣತಂಗಿಯರು ಕರಾಟೆ ಕ್ರೀಡೆಯಲ್ಲಿ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ತಲುಪಿದ ಪ್ರತಿಭಾನ್ವಿತರಾಗಿದ್ದಾರೆ.
4ನೇ ತರಗತಿಯಲ್ಲಿ ಓದುತ್ತಿರುವ ಗ್ರಾಮೀಣ ಕ್ರೀಡಾಪಟು ಯುಕ್ತ ಪ್ರಸಾದ್ 12ನೇ ವಯಸ್ಸಿನಲ್ಲಿಯೇ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾಳೆ. ಈ ಮೂಲಕ ಚಾಂಪಿಯನ್ ಟ್ರೋಪಿ, ಚಿನ್ನ ಸೇರಿದಂತೆ ಹಲವು ಪದಕಗಳನ್ನು ತನ್ನದಾಗಿಸಿಕೊಂಡು ದೇವಸೂಗೂರು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
ಕಟಾ ವಿಭಾಗದಲ್ಲಿ ಏಳು ಚಿನ್ನದ ಪದಕ ಹಾಗೂ ಕುಮಟೆ ವಿಭಾಗದಲ್ಲಿ 6 ಚಿನ್ನದ ಪದಕ, ಒಂದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಳು. ಬಾಲಕಿಯರ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚಾಂಪಿಯನ್‌ಶಿಪ್ ರನ್ನರ್ ಆಫ್ ಪ್ರಶಸ್ತಿ ಪಡೆದದು ಗಮನ ಸೆಳೆದಿದ್ದಾಳೆ.
ಎಲೆ ಮರೆಕಾಯಿಯಂತೆ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆಗೆ ತಾಲೂಕು ಮತ್ತು ಜಿಲ್ಲಾಡಳಿತ ಪ್ರೋತ್ಸಾಹಿಸಿದೆ. ಹೀಗೆ ಗ್ರಾಮೀಣ ಕ್ರೀಡಾಪಟುವಿಗೆ ತುಂಬಬೇಕು ಎಂಬುದು ಪ್ರತಿಯೊಬ್ಬರ ಅಶಯವಾಗಿದೆ. ಇನ್ನು ಅದೇ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ನಿಖಿಲ್ ಪ್ರಸಾಸ್ ಕೂಡ ಕರಾಟೆ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದಾನೆ. ತರಬೇತುದಾರ ಶಿವು ಅವರಿಂದ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಗ್ರಾಮದ ಯುವಕರಿಗೆ ಮಾದರಿಯಾಗಿದ್ದಾನೆ.
ಕಟಾ ಹಾಗೂ ಕುಮಟೆ ವಿಭಾಗದಲ್ಲಿ 6 ಚಿನ್ನದ ಪದಕ, 6 ಬೆಳ್ಳಿಯ ಪದಕ ಮತ್ತು 2 ಕಂಚಿನ ಪದಕವನ್ನು ಪಡೆದಿದ್ದಾನೆ. ಅಲ್ಲದೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚಾಂಪಿಯನ್ ಶಿಪ್ ರನ್ನರ್ ಆಫ್ ಪ್ರಶಸ್ತಿ ಪಡೆದಿದ್ದನು.












Click it and Unblock the Notifications