ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾನ ಮಾಡದೆ ಪ್ರವಾಸ ಹೋದವರಿಗೆ ಸೂಕ್ತ 'ಸನ್ಮಾನ'

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 18: ಮತದಾನ ಮಾಡಲೆಂದು ಸರ್ಕಾರ ನೀಡಿದ ರಜೆಯನ್ನು ಮೋಜಿಗೆ ಬಳಸಿದ ಬೆಂಗಳೂರಿಗರಿಗೆ ಚಿಕ್ಕಮಗಳೂರು ಪ್ರಜ್ಞಾವಂತ ನಾಗರೀಕರು ಸರಿಯಾದ ನೀತಿ ಪಾಠ ಕಲಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮತದಾನದಂದು ದೊರೆತ ರಜೆಯನ್ನು ಮೋಜಿಗೆ ಬಳಸಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿಗರಿಗೆ ಅಲ್ಲಿನ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು 'ಸನ್ಮಾನ' ಮಾಡಿ, ಮತದಾನದ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ.

ಕರ್ನಾಟಕ ಲೋಕ ಸಮರ LIVE: ಮೊದಲ ಹಂತದ ಮತದಾನ ಶಾಂತಿಯುತ ಕರ್ನಾಟಕ ಲೋಕ ಸಮರ LIVE: ಮೊದಲ ಹಂತದ ಮತದಾನ ಶಾಂತಿಯುತ

ಚಿಕ್ಕಮಂಗಳೂರಿನತ್ತ ಬರುವ ವಾಹನಗಳನ್ನೆಲ್ಲಾ ತಪಾಸಣೆ ಮಾಡಿದ ಸಂಘದ ಸದಸ್ಯರು ಬೆರಳಿನಲ್ಲಿ ಶಾಯಿ ಇಲ್ಲದವರನ್ನು ಕೆಳಗೆ ಇಳಿಸಿ ಅವರಿಗೆ ಮತದಾನದ ಅರಿವು ಮೂಡಿಸಿ, ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ, ಕೈಗೆ ಗುಲಾಬಿ ನೀಡಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯ ನಕಲುಗಳ ಹಾರವನ್ನು ಹಾಕಿ ಕಳುಹಿಸುತ್ತಿದ್ದಾರೆ.

Chikkamagaluru people gave lesson to people who missed voting

ಇಂದು ಇವರ ಕೈಗೆ ಸಿಕ್ಕಿದ ಬೆಂಗಳೂರಿನ ಶಿವಾಜಿನಗರದ ಯುವಕರಿಗೆ ಹೀಗೆ ವ್ಯಂಗ್ಯ ಸನ್ಮಾನ ಮಾಡಿ ಬುದ್ಧಿ ಹೇಳಿದ್ದಾರೆ. ವಿಶೇಷವೆಂದರೆ ಇವರ ಕೈಗೆ ಇಂದು ಮತದಾನ ಮಾಡದೆ ಸಿಕ್ಕಿಬಿದ್ದ ಎಲ್ಲರೂ ವಿದ್ಯಾವಂತರು.

ಬೆಂಗಳೂರು ನಗರದಲ್ಲಿ ಈ ವರೆಗೆ ಅತಿ ಕಡಿಮೆ ಮತದಾನ ಬೆಂಗಳೂರು ನಗರದಲ್ಲಿ ಈ ವರೆಗೆ ಅತಿ ಕಡಿಮೆ ಮತದಾನ

ಮತ್ತೊಂದು ಆಘಾತಕಾರಿ ವಿಷಯವೆಂದರೆ ಇವರ ಕೈಗೆ ದೊರಕಿದ ಬಹುತೇಕ ಬೇಜವಾಬ್ದಾರಿ ಯುಕವರಿಗೆ, ಯುವತಿಯರಿಗೆ ಇಂದು ಚುನಾವಣೆ ಇದೆಯೆಂಬ ವಿಷಯವೂ ಗೊತ್ತಿರಲಿಲ್ಲವಂತೆ.

English summary
Chikkamagaluru people gave lesson to people who miss voting deliberately and came to Chikkamagaluru for jolly trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X