ನಿಗಮ ಮಂಡಳಿ ಸ್ಥಾನ ಅಲಂಕರಿಸುವುದಿಲ್ಲ: ಬಿಎಸ್ವೈ ಗೆ ಬಿಜೆಪಿ ಶಾಸಕ ಪತ್ರ
ಚಿಕ್ಕಮಗಳೂರು, ಆಗಸ್ಟ್ 27: ತಮಗೆ ನೀಡಿರುವ ನಿಗಮ ಮಂಡಳಿ ಸ್ಥಾನವನ್ನು ಅಲಂಕರಿಸುವುದಿಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
Recommended Video
ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಎಂ.ಸಿ.ಎ ನಿಗಮ ಅಧ್ಯಕ್ಷ ಸ್ಥಾನ ಅಲಂಕರಿಸುವುದಿಲ್ಲ, ಅನ್ಯತಾ ಭಾವಿಸಬೇಡಿ, ಉಳಿದ 3 ವರ್ಷ ತಮ್ಮ ನಾಯಕತ್ವದ ಬಿಜೆಪಿ ಆಡಳಿತವೇ ನನಗೆ ಅತಿ ಮುಖ್ಯ ಎಂಬ ಮಾತು ಹೇಳಿದ್ದಾರೆ.
ನಿಗಮ ಮಂಡಳಿ ಸ್ಥಾನ ನನಗೆ ಬೇಡ, ಎಸ್ಸಿ ಬಲಗೈ ಸಮುದಾಯದ ಮೂವರು ಶಾಸಕರುಗಳಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಿ ಎಂಬುದನ್ನು ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ 2023ರ ಚುನಾವಣೆಗೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರಲ್ಲಿ 229 ಕೊರೊನಾ ಪ್ರಕರಣ ದೃಢ
ಕಾಫಿನಾಡು ಚಿಕ್ಕಮಗಳೂರಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಇದೇ ಮೊದಲ ಬಾರಿಗೆ 229 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3477ಕ್ಕೆ ಏರಿಕೆಯಾಗಿದೆ.
ಚಿಕ್ಕಮಗಳೂರು 83, ಕಡೂರು 65, ತರೀಕೆರೆ 50, ಮೂಡಿಗೆರೆ 12, ಎನ್.ಆರ್ ಪುರ 03, ಶೃಂಗೇರಿ 10, ಕೊಪ್ಪದಲ್ಲಿ 06 ಪ್ರಕರಣ ದೃಢಗೊಂಡಿವೆ. ಇಂದು 65 ಜನ ಕೊರೊನಾ ವೈರಸ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 61 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು 1154 ಸಕ್ರಿಯ ಕೊರೊನಾ ಪ್ರಕರಣಗಳಿವೆ.












Click it and Unblock the Notifications