ಚಿಕ್ಕಮಗಳೂರಿನಲ್ಲಿ ಹೊತ್ತಿ ಉರಿದ 3 ಮನೆಗಳು: ಮಹಿಳೆಯರ ದಿಟ್ಟತನದಿಂದ ಉಳಿದ ಎರಡು ಜೀವಗಳು
ಚಿಕ್ಕಮಗಳೂರು, ನೆವೆಂಬರ್, 02: ಆಕಸ್ಮಿಕವಾಗಿ 3 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹೊತ್ತಿ ಉರಿಯುವಾಗಲೇ ಮಹಿಳೆಯರು ಒಳ ಹೋಗಿ ಇಬ್ಬರನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗುಮ್ಮನಹಳ್ಳಿ ಸಮೀಪದ ಭೋವಿ ಕಾಲೋನಿಯಲ್ಲಿ ನಡೆದಿದೆ.
ಮನೆ ಹೊತ್ತಿ ಉರಿಯುವಾಗ ಹೆಣ್ಣು ಮಕ್ಕಳು ಒಳ ಹೋಗಿ ಮನೆಯಲಿದ್ದ ಇಬ್ಬರ ಜೀವ ಉಳಿಸಿ, ಇಬ್ಬರನ್ನು ರಕ್ಷಿಸಿದ್ದಾರೆ. ಊರಿನ ಗಂಡಸರೆಲ್ಲಾ ಗ್ರಾಮದಲ್ಲಿ ಸಾವನ್ನಪ್ಪಿದ್ದವರ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಶಶಿ, ಕಲ್ಲೇಶ್, ಹನುಮಂತ ಎಂಬುವರಿಗೆ ಸೇರಿದ್ದ ಮನೆಯ ಮೇಲೆ ಬೆಂಕಿ ಬಿದ್ದಿದೆ. ಈ ವೇಳೆ ಮನೆಗೆ ಬೆಂಕಿ ಬಿದ್ದಾಗ ಕಲ್ಲೇಶ್ ಮನೆಯಲ್ಲಿ 6 ವರ್ಷದ ಮಗು ಮಲಗಿತ್ತು. ಮತ್ತು ಹನುಮಂತ ಎಂಬುವವರು ಮದ್ಯ ಸೇವಿಸಿ ಮನೆಯಲ್ಲಿ ಮಲಗಿದ್ದರು. ಇವರಿಬ್ಬರನ್ನು ಮಹಿಳೆಯರು ರಕ್ಷಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅಂತ್ಯ ಸಂಸ್ಕಾರವನ್ನು ಅರ್ಧಕ್ಕೆ ಬಿಟ್ಟು ಹಳ್ಳಿಗರು ವಾಪಾಸ್ ಘಟನಾ ಸ್ಥಳಕ್ಕೆ ಬಂದಿದ್ದಾರೆ.
ಊರಲ್ಲಿ ಗಂಡಸರಿಲ್ಲ, ಮನೆಗಳಿಗೆ ಬೆಂಕಿ ಬಿದ್ದಿದೆ ಎಂದು ಮಹಿಳೆಯರೇ ಒಳಹೋಗಿ ಎರಡು ಜೀವಗಳನ್ನು ರಕ್ಷಣೆ ಮಾಡಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿಯಾಗಿದೆ. ಬೆಂಕಿ ಬಿದ್ದ ಪರಿಣಾಮ ಶಶಿ, ಕಲ್ಲೇಶ್ ಮನೆ ಸಂಪೂರ್ಣ ಹಾನಿಯಾಗಿದ್ದು, ಹನುಮಂತನ ಮನೆ ಭಾಗಶಃ ಹಾನಿಯಾಗಿದೆ. ಎಲ್ಲರೂ ಕೂಲಿ ಮಾಡಿಕೊಂಡು ಗುಡಿಸಲಲ್ಲಿ ವಾಸವಿದ್ದವರು. ಆದ್ದರಿಂದ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಒಬ್ಬರಿಗೆ ಗಂಭೀರ ಗಾಯ
ಸಿಲಿಂಡರ್ ಸ್ಫೋಟಗೊಂಡು 8 ಮನೆಗಳು ಭಸ್ಮವಾಗಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಅನಂತಪುರದ ಬಳಿ ಇತ್ತೀಚೆಗಷ್ಟೇ ನಡೆದಿತ್ತು. ಇನ್ನು ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿತ್ತು.
ಸಿಲಿಂಡರ್ ಸ್ಪೋಟದ ತೀವ್ರತೆಗೆ 8 ಶೀಟ್ ಮನೆಗಳು ಭಸ್ಮವಾಗಿದ್ದು, ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಸ್ಥಳೀಯರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನದಿಸುವ ಕಾರ್ಯವನ್ನು ಮಾಡಿದ್ದರು.
ಬೆಂಗಳೂರಿನ ವಿನಾಯಕ ಸಿನೆಮಾ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದ್ದು, ಚಾಮರಾಜಪೇಟೆ ಆನಂದಪುರ ಬಳಿ 8 ಮನೆಗಳ ಶೀಟ್‌ಗಳು ಬೆಂಕಿಯಲ್ಲಿ ಭಸ್ಮವಾಗಿದ್ದವು. ಈ ಅವಘಡದಲ್ಲಿ ಗೋಧಾಮು ಸೇರಿದಂತೆ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದ್ದು, ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕನ್ನಡ ನ್ಯೂಸ್ ವರದಿ ಮಾಡಿತ್ತು.
ವಿನಾಯಕ ಸಿನಿಮಾ ಥಿಯೇಟರ್ ಎದುರುಗಡೆ ಇರುವ ಗೋದಾಮಿಗೆ ಬೆಂಕಿ ತಲುಗಿದ ಹಿನ್ನೆಲೆ ಸಿಲಿಂಡರ್‌ಗಳು ಬ್ಲಾಸ್ಟ್ ಆಗಿರಬಹುದು ಎಂದು ಶಂಕಿಸಲಾಗಿತ್ತು. ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳ ಗೋದಾಮಿಗೆ ಬೆಂಕಿ ತಗುಲಿದ್ದು, ಬೆಂಕಿ ತಗಲುತ್ತಿದ್ದಂತೆ ಅದರ ಪಕ್ಕದಲ್ಲಿರುವ ಸುಮಾರು 8 ಶೀಟ್ ಮನೆಗಳಿಗೂ ಬೆಂಕಿ ಆವರಿಸಿದೆ ಎನ್ನಲಾಗಿದ್ದು, ಘಟನೆಗೆ ಪ್ರಮುಖವಾದ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿತ್ತು.












Click it and Unblock the Notifications