ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿ ನೇಮಕ, ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬೈರತಿ ಬಸವರಾಜು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 16: ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ರಾಜ್ಯ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಬೈರತಿ ಈಗಾಗಲೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆಎಸ್ ಈಶ್ವರಪ್ಪ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಹಾಗೆಯೆ ಉಳಿದಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಹಾನಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೈರತಿ ಬಸವರಾಜುರನ್ನು ಪರಿಶೀಲನೆ ಹಾಗೂ ಪರಿಹಾರ ನೋಡಿಕೊಳ್ಳುವುದಕ್ಕಾಗಿ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಶನಿವಾರ ಸರಕಾರ ಆದೇಶಿಸಿದೆ.

ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ: ಮಳೆ ಪರಿಹಾರ ಕಾರ್ಯಕ್ಕೆ ಸೂಚನೆಜಿಲ್ಲಾಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ: ಮಳೆ ಪರಿಹಾರ ಕಾರ್ಯಕ್ಕೆ ಸೂಚನೆ

ಕಳೆದ ಐದು ತಿಂಗಳಿನಿಂದ ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲದೆ ಪ್ರವಾಹ ಪರಿಸ್ಥಿತಿ ಉಂಟಾದರೂ ಮಲೆನಾಡಿಗರ ಗೋಳು ಕೇಳುವವರಿರಲಿಲ್ಲ. ಕೆಲವು ಜನಪ್ರತಿನಿಧಿಗಳು ಬಂದರೂ ಕಲವೇ ಸ್ಥಳಗಳಿಗೆ ಭೇಟಿ ನೀಡಿ ಹೊರಡುತ್ತಿದ್ದರು, ಇನ್ನೂ ವಾರದ ಹಿಂದೆ ಹೊಳೆಯಲ್ಲಿ ಕೊಚ್ಚಿ ಹೋದ ಹೊಸಪೇಟೆ ಬಾಲಕಿ ಮನೆಗೆ ಯಾರೊಬ್ಬರು ತೆರಳದೇ ಇದ್ದದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

Byrathi Basavaraj Appointed as In Charge Minister of Chikkamagaluru District

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಬೈರತಿ ಭೇಟಿ
ಜಿಲ್ಲಾ ಉಸ್ತುವಾರಿಯಾಗಿ ನೇಮಕವಾಗುತ್ತಿದ್ದಂತೆ ಸಚಿವ ಬೈರತಿ ಬಸವರಾಜು ಚಿಕ್ಕಮಗಳೂರಿನಳಕ್ಕೆ ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದರು. ಅರೆನೂರಿನಲ್ಲಿ ಭೂಕುಸಿತವಾಗಿದ್ದ ಕಾಫಿ ತೋಟ ನೋಡಲು ತೆರಳಿದ್ದ ಸಂದರ್ಭದಲ್ಲಿ ಮಣ್ಣು ಕುಸಿದಿದ್ದ ಸ್ಥಳದಲ್ಲಿ ಕಾಲಿಟ್ಟು ಸಚಿವರು ಹೊರಬರಲಾರದೆ ಪರದಾಡಿದ ಘಟನೆ ನಡೆಯಿತು. ಕೊನೆಗೆ ಸ್ಥಳೀಯರ ನೆರವಿನಿಂದ ಕಷ್ಟ ಪಟ್ಟು ಹೊರಬಂದರು.

ಕೊಟ್ಟಿಗೆ ಹಾರದಲ್ಲಿ ಮನೆ ಕುಸಿತ
ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಸಮೀಪದ ಅಜಾದ್‌ ನಗರದಲ್ಲಿ ಮನೆಯೊಂದು ಕುಸಿದ್ದು, ಬಡಕುಟುಂಬವೊಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅಜಾದ್ ನಗದ ಲೀಲಾ ಎಂಬುವವರು ತಮ್ಮ ನಾಲ್ಕು ಮಕ್ಕಳೊಂದಿಗೆ ಬಿರುಕುಬಿಟ್ಟಿರು ಮನೆಯ ಪಕ್ಕದಲ್ಲಿ ಟಾರ್ಪಲ್ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಮಳೆ ಹೀಗೆ ಮುಂದುವರಿದರೆ ಆಶ್ರಯ ಕಳೆದುಕೊಳ್ಳುವ ಭೀತಿಯಲ್ಲೇ ಕುಟುಂಬ ಜೀವನ ಸಾಗಿಸುತ್ತಿದ್ದಾರೆ.

Byrathi Basavaraj Appointed as In Charge Minister of Chikkamagaluru District

50 ಸಾವಿರ ನೆರವು ನೀಡಿದ ಸಚಿವ

ಇನ್ನು ಶನಿವಾರವಷ್ಟೇ ಜಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದ ಬೈರತಿ ಬಸವರಾಜು ಟಾರ್ಪಲ್‌ ಕಟ್ಟಿಕೊಂಡು ವಾಸಿಸುತ್ತಿರುವ ಲೀಲಾ ಮನೆಗೆ ಭೇಟಿ ನೀಡಿ, ಅವರ ಕಣ್ಣೀರಿನ ಕಥೆ ಕೇಳಿ ಸ್ಥಳದಲ್ಲೇ 50 ಸಾವಿರ ರೂಪಾಯಿ ನೆರವು ನೀಡಿದರು.

English summary
Karnataka government Minister of Urban Development Byrathi Basavaraj was appointed as District Incharge minister of Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X