ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ
Recommended Video

ಚಿಕ್ಕಮಗಳೂರು, ಜನವರಿ 16 : 'ಬಿ.ಎಸ್.ಯಡಿಯೂರಪ್ಪಗೆ 77 ವರ್ಷವಾಗಿದೆ. ಆದರೂ ಇನ್ನೂ ಬುದ್ಧಿ ಬಂದಿಲ್ಲ. ಸಿಎಂ ಆಗೋ ಆಸೆ ಅವರಿಗೆ ಇನ್ನೂ ಹೋಗಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬುಧವಾರ ಚಿಕ್ಕಮಗಳೂರಿನ ಬೀರೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಬಿಜೆಪಿಯವರು ಅತ್ಯಂತ ಮಾನಗೆಟ್ಟವರು ಹಾಗೂ ಲಜ್ಜೆಗೆಟ್ಟವರು. ಬಿಜೆಪಿಯವರಗೆ ಮಾನ ಮಯಾರ್ದೆ ಇಲ್ಲ. ಮಾಧ್ಯಮದವರಿಗೆ ಸುಳ್ಳು ಹೇಳುತ್ತಿದ್ದಾರೆ' ಎಂದರು.

'ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಜನರು ಅವರಿಗೊಂದು ಮ್ಯಾನ್ ಡೇಟ್ ಕೊಟ್ಟಿದ್ದಾರೆ .ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು. ಬಿಜೆಪಿಯವರಿಗೆ ಅಧಿಕಾರ ಮಾಡಿ ಅಂತ ತೀರ್ಪು ಕೊಟ್ಟಿಲ್ಲ' ಎಂದು ಹೇಳಿದರು.
'ಕಳೆದ ಆರು ತಿಂಗಳಿಂದ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪಗೆ ವಯಸ್ಸಾಗಿದೆ ಹೊರತು ಬುದ್ಧಿ ಬಂದಿಲ್ಲ. 77 ವರ್ಷ ವಯಸ್ಸಾಗಿದೆ ಬುದ್ಧಿ ಮಾತ್ರ ಬೆಳೆದಿಲ್ಲ, ಇನ್ನೂ ಸಿಎಂ ಆಗಬೇಕೆಂದು ವಾಮಮಾರ್ಗ ಹಿಡಿದಿದ್ದಾರೆ' ಎಂದು ಸಿದ್ದರಾಮಯ್ಯ ಆರೋಪಿಸಿದರು.
'ಶಾಸಕರಿಗೆ ಕೋಟ್ಯಾಂತರ ರೂಪಾಯಿ ಆಫರ್ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ. ಇಂತಹ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಬಿಜೆಪಿಯವರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ' ಎಂದರು.
'ಹರಿಯಾಣದಲ್ಲಿ ಎಲ್ಲರನ್ನೂ ಕೂಡಿಟ್ಟು ಕೊಂಡಿದ್ದಾರೆ. ಸಂಕ್ರಾಂತಿ ಗಿಫ್ಟ್ ಕೊಡ್ತೀವಿ, ಯುಗಾದಿ ಗಿಫ್ಟ್ ಕೊಡ್ತೀನಿ ಅಂತ ಬರೀ ಸುಳ್ಳು ಹೇಳುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications