ಉಗ್ರರ ಹುಟ್ಟಡಗಿಸೋವರೆಗೂ ಮೋದಿ ಬಿಡೋದಿಲ್ಲ: ಬಿ.ಎಸ್.ಯಡಿಯೂರಪ್ಪ
Recommended Video

ಚಿಕ್ಕಮಗಳೂರು, ಫೆಬ್ರವರಿ 26: ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಹುಟ್ಟಡಗಿಸೋವರೆಗೂ ನರೇಂದ್ರ ಮೋದಿ ಬಿಡೋದಿಲ್ಲ.ನಮ್ಮ 45 ಜನ ಸೈನಿಕರು ಹುತಾತ್ಮರಾಗಿದ್ರು. ಆಗ ಒಂದೊಂದು ತೊಟ್ಟು ರಕ್ತಕ್ಕೂ ಉತ್ತರ ಕೊಡುತ್ತೇನೆ ಎಂದು ಮೋದಿ ಹೇಳಿದ್ರು.ಇದೀಗ ಉಗ್ರರ 5 ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಈ ರೀತಿಯ ಉತ್ತರ ಇಲ್ಲಿಗೆ ಮುಗಿಯೋದಿಲ್ಲ. ಪಾಕಿಸ್ತಾನ ಸರಿಯಾದ ರೀತಿಯಲ್ಲಿ ಉತ್ತರಿಸಬೇಕು. ಇಡೀ ಪ್ರಪಂಚವೇ ಪಾಕ್ ಗೆ ವಿರುದ್ಧ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಮೋದಿ ಪರ ದೇಶದ ಜನ ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಪುಲ್ವಾಮಾ ದಾಳಿಗೆ ಉತ್ತರ ನೀಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ರು. ಹುತಾತ್ಮರಾದ ಕುಟುಂಬದವರ ಕಣ್ಣೀರಿಗೆ ಉತ್ತರ ನೀಡಲಾಗಿದ್ದು, ಉತ್ತರ ಕೊಡುವ ದಿನವೂ ಆರಂಭವಾಗಿದೆ.ಮುಂದಿನ ದಿನಗಳಲ್ಲಿ ಭಯೋತ್ಪಾದಕರಿಗೆ ಇನ್ನು ಕಾದಿದೆ ಎಂದು ಎಚ್ಚರಿಸಿದರು.
ಉಗ್ರರಿಗೆ ರಕ್ಷಣೆ ನೀಡಿರುವ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಲಾಗಿದ್ದು, ಆ ರೀತಿಯ ಕಾರ್ಯಾಚರಣೆ ಆರಂಭವಾಗಿದೆ. ನಮ್ಮೆಲ್ಲ ಸೈನಿಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಶೋಭಾ ತಿಳಿಸಿದರು.












Click it and Unblock the Notifications