• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಮುನ್ನ ಎಚ್ಚವಿರಲಿ; ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಕಿಡಿ

By ಚಿಕ್ಕಮಗಳೂರ ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್‌, 29: ಆರ್.ಎಸ್.ಎಸ್. ಬ್ಯಾನ್ ಮಾಡುವಂತೆ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಆರ್‌ಎಸ್ಎಸ್ ಬ್ಯಾನ್ ಮಾಡುವುದು ಎಂದರೆ, ಏನೆಂದು ತಿಳಿದುಕೊಂಡಿದ್ದಾರೆ. ಮಾತನಾಡುವ ಮುನ್ನ ಎಚ್ಚರಿಕೆ ವಹಿಸಿ ಮಾತನಾಡಿ. 1925ನೇ ಇಸವಿಯಿಂದಲೂ ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆ ಆಗಿದೆ. ಬಾಹ್ಯ ಅಕ್ರಮಣ ಮತ್ತು ಪ್ರಕೃತಿ ವಿಕೋಪಗಳು ಆದಾಗ ದೇಶದ ಜೊತೆ ನಿಂತಿದ್ದು ಆರ್‌ಎಸ್ಎಸ್. ಆರ್‌ಎಸ್ಎಸ್ ಸ್ವಯಂ ಸೇವಕನೇ ದೇಶದ ಪ್ರಧಾನಿ ಆಗಿದ್ದಾರೆ. ನಿಷೇಧ ಮಾಡಲು ಒಂದು ಕಾರಣ ಬೇಕಲ್ಲವಾ?," ಎಂದು ಪ್ರಶ್ನಿಸುವುದರ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರು; ರಸ್ತೆಯಿಲ್ಲದೆ ನರಕಯಾತನೆ; ವೃದ್ಧೆಯನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಣೆಚಿಕ್ಕಮಗಳೂರು; ರಸ್ತೆಯಿಲ್ಲದೆ ನರಕಯಾತನೆ; ವೃದ್ಧೆಯನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಣೆ

ಜೆಡುಎಸ್‌, ಕಾಂಗ್ರೆಸ್‌ಗೆ ಸಿಟಿ ರವಿ ಟಾಂಗ್‌
"ದೇಶಭಕ್ತಿ ಹಾಗೂ ದೇಶದ್ರೋಹ ಇವೆರಡರ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವಾ? ಅಲ್ಪಸಂಖ್ಯಾತರ ವೋಟಿಗೆ ಆಸೆ ಪಟ್ಟು ದೇಶದ್ರೋಹದ ಕೆಲಸಕ್ಕೆ ಕಾಂಗ್ರೆಸ್‌, ಜೆಡಿಎಸ್ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ. ಬದುಕು, ಜೀವನ, ಅಧಿಕಾರಕ್ಕಿಂತ ದೇಶ ದೊಡ್ಡದು. ಆದರೆ ಅವರಿಗೆ ದೇಶ ಹಾಳಾದರೂ ಪರವಾಗಿಲ್ಲ, ಅಧಿಕಾರ ಬೇಕು. ದೇಶದ್ರೋಹಿಗಳ ಜೊತೆ ಸೇರಿ ದೇಶಪ್ರೇಮಿಗಳನ್ನು ಅವಮಾನಿಸಿದರೆ ನೀವೂ ಉಳಿಯಲ್ಲ. ದೇಶದ್ರೋಹ ಮಾಡುವರನ್ನು ಹೊರ ಹಾಕಬೇಕು. ಅವರನ್ನು ಬ್ಯಾನ್ ಮಾಡಬೇಕು. ದೇಶಪ್ರೇಮಿಗಳನ್ನು ಹೊರ ಹಾಕಿದರೆ ದೇಶವನ್ನು ಉಳಿಸಿಕೊಳ್ಳುವವರು ಯಾರು?," ಎಂದು ಪ್ರಶ್ನಿಸುವುದರ ಮೂಲಕ ಕಿಡಿಕಾರಿದ್ದಾರೆ.

ನಾನು ಒಬ್ಬ ಆರ್‌ಎಸ್‌ಎಸ್ ಕಾರ್ಯಕರ್ತ
ನಾನು ಒಬ್ಬ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದೇನೆ. ದೇಶಭಕ್ತರನ್ನು ಬ್ಯಾನ್ ಮಾಡಿದರೆ, ದೇಶ ಉಳಿಸಿಕೊಳ್ಳುವವರು ಯಾರು? "ಇವರು ಜಾತಿ ಮಾಡುವವರು, ಅಧಿಕಾರಕ್ಕೆ ರಾಜಕಾರಣ ಮಾಡುವವರು, ತನಗೆ, ತನ್ನ ಮೊಮ್ಮಕ್ಕಳಿಗೆ ಅಧಿಕಾರ ಇರಬೇಕು ಎನ್ನುವರು. ಇವರು ದೇಶ ಉಳಿಸುತ್ತಾರಾ?" ಎಂದು ಹರಿಹಾಯ್ದಿದ್ದಾರೆ.

Be careful before talking about RSS; CT Ravi warn to Siddaramaiah

ಪೊಲಿಟಿಕಲ್‌ ಸರ್ಟಿಫಿಕೇಟ್ ಲೆಕ್ಕಚಾರದ ಕಾಳಗ
"ಹಫ್ತಾ ಗ್ಯಾಂಗ್‌ನ ನಾಯಕರೆಲ್ಲಾ ಪೊಲಿಟಿಕಲ್ ಲೇಬಲ್ ಅಂಟಿಸಿಕೊಂಡರೆ ಲೀಡರ್ ಆಗುವುದಕ್ಕೆ ಸಾಧ್ಯವಿಲ್ಲ. ಹರಿಪ್ರಸಾದ್ ಒಂದು ಕಾಲದಲ್ಲಿ ಹಫ್ತಾ ವಸೂಲಿ ಗ್ಯಾಂಗ್‌ನಲ್ಲಿದ್ದವರು. ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ." ಲೂಟಿ ರವಿ ಮೊದಲು ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಹರಿಪ್ರಸಾದ್ ನನಗೆ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ. ನಾನು ಏನೆಂದು ಚಿಕ್ಕಮಗಳೂರು ಜನರಿಗೆ ಗೊತ್ತಿದೆ. ಅದಕ್ಕೆ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಈವರೆಗೆ ಕಾರ್ಪೋರೇಷನ್‌ನಿಂದ ಪಾರ್ಲಿಮೆಂಟ್‌ವರೆಗೂ ಒಂದೇ ಒಂದು ಚುನಾವಣೆ ಗೆಲ್ಲುವುದಕ್ಕೆ ಆಗಿಲ್ಲ. ಹರಿಪ್ರಸಾದ್ ರೀತಿಯಲ್ಲಿ ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನೂ ಅಲ್ಲ," ಎಂದು ಲೇವಡಿ ಮಾಡಿದ್ದಾರೆ.

ಸಿ. ಟಿ. ರವಿ
Know all about
ಸಿ. ಟಿ. ರವಿ
English summary
CT Ravi lashed out in Chikkamagaluru against former CM Siddaramaiah has asked for RSS ban. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X