ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಕಾಡುಕೋಣ ಸಾವು
ಚಿಕ್ಕಮಗಳೂರು, ಜೂನ್ 26: ಕಂಬದಿಂದ ಜೋತುಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಡುಕೋಣವೊಂದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸ್ರಿಕಟ್ಟೆಯಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಕಾಡುಕೋಣ ಸಾವನ್ನಪ್ಪಿರುವ ಸಂಗತಿ ತಿಳಿದುಬಂದಿದೆ. ಒಂದೂವರೆ ತಿಂಗಳ ಹಿಂದೆಯೂ ಇದೇ ರೀತಿ ವಿದ್ಯುತ್ ತಂತಿ ತಗುಲಿ ಕಾಡೆಮ್ಮೆಯೊಂದು ಸಾವನ್ನಪ್ಪಿತ್ತು.

ಪದೇ ಪದೇ ಈ ರೀತಿ ಅನಾಹುತಗಳು ಸಂಭವಿಸುತ್ತಿದ್ದರೂ ಮೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಲೈನ್ ಗಳನ್ನು ದುರಸ್ತಿಗೊಳಿಸಿ ಜನರ ಹಾಗೂ ಪ್ರಾಣಿಗಳನ್ನು ರಕ್ಷಿಸಿ ಎಂದು ಸ್ಥಳೀಯರು ಆಗ್ರಹಿಸಿದರು.












Click it and Unblock the Notifications