Get Updates
Get notified of breaking news, exclusive insights, and must-see stories!

ಸರ್ಕಾರಿ ನೌಕರನ ಮೇಲೆ ಹಲ್ಲೆ; ಕೊಪ್ಪ ಕಾಂಗ್ರೆಸ್ ಮುಖಂಡನ ಮೇಲೆ ಆರೋಪ

ಚಿಕ್ಕಮಗಳೂರು, ಫೆಬ್ರವರಿ 12: ಕೊಪ್ಪ ಪಟ್ಟಣ ಪಂಚಾಯತಿಯ ಸಮುದಾಯ ಸಮನ್ವಯ ಅಧಿಕಾರಿ ಸುಬ್ಬಣ್ಣ‌ ಎಂಬುವವರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕೊಪ್ಪ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

ಸುಬ್ಬಣ್ಣ‌ ಎಂಬುವವರ ಮೇಲೆ ಖಾಸಗಿ ಲಾಡ್ಜ್‌ನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪವಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ಕೊಪ್ಪ ಪಟ್ಟಣ ಠಾಣೆಯಲ್ಲಿ ದೂರು ನೀಡಲಾಗಿದೆ.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಎಂಬುವವರ ಮೇಲೆ ಸುಬ್ಬಣ್ಣ ದೂರು ನೀಡಿದ್ದಾರೆ. ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ.

Chikkamagaluru Assault On Government Employee In Koppa

ಜೆ.ಎಂ.ಜೆ ಲಾಡ್ಜ್‌ನ ಕೊಠಡಿಯೊಂದರಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ. ಈ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಬಸವರಾಜ್ ಹಾಗೂ ಸಿಬ್ಬಂದಿ ಕಿಶೋರ್ ಸಹ ಇದ್ದರು. ಅವರಿಬ್ಬರು ಸುಮ್ಮನೆ ನಿಂತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಿನಾಂಕ 8/2/2021ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುಬ್ಬಣ್ಣ ಕಚೇರಿಯಲ್ಲಿದ್ದರು. ಆಗ ಕರೆ ಮಾಡಿದ್ದ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಬಸವರಾಜ್ ಬಸ್ ನಿಲ್ದಾಣದ ಸಮೀಪದ ಹಣ್ಣಿನ ಅಂಗಡಿ ಬಳಿ ಬರಲು ಹೇಳಿದ್ದರು. ಅಲ್ಲಿಗೆ ಹೋದಾಗ ಜೆ. ಎಂ. ಜೆ ಲಾಡ್ಜ್‌ಗೆ ಬನ್ನಿ ಕೆಲವು ವಿಚಾರ ಮಾತನಾಡಬೇಕು ಎಂದು ಹೇಳಿದ್ದರು.

11.30ರ ಸುಮಾರಿಗೆ ಲಾಡ್ಜ್‌ಗೆ ಹೋದಾಗ ಸುಧೀರ್ ಕುಮಾರ್ ಮುರೊಳ್ಳಿ, ಶ್ರೀನಿವಾಸ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಅಲ್ಲಿದ್ದರು. ನಾನು ರೂಂನೊಳಕ್ಕೆ ಹೋದಾಗ ನನ್ನ ಮೊಬೈಲ್ ಕಸಿದುಕೊಂಡರು ಎಂದು ಸುಬ್ಬಣ್ಣ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಸುಧೀರ್ ಕುಮಾರ್ ನನ್ನ ಎಡಕೆನ್ನೆಗೆ ಹೊಡೆದರು, ನಾನು ಕುಸಿದು ಬಿದ್ದಾಗ ಶ್ರೀನಿವಾಸ ಶೆಟ್ಟಿ, ಪ್ರಸನ್ನ ಶೆಟ್ಟಿ ನನ್ನನ್ನು ಮೇಲೆತ್ತಿ ಬೆನ್ನು ಮತ್ತು ಎದೆಗೆ ಗುದ್ದಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನನಗೆ ನ್ಯಾಯ ದೊರಕಿಸ ಕೊಡಬೇಕೆಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+