ಕಡೂರಿನಲ್ಲಿ ಹಸಿವಿನಿಂದ ಬಳಲಿ ಅಮೃತ ಮಹಲ್ ಹಸು ಸಾವು
ಚಿಕ್ಕಮಗಳೂರು, ಜುಲೈ 24: ಹಸಿವಿನಿಂದ ಬಳಲಿ ಹಸುವೊಂದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಾಸೂರು ಕಾವಲ್ ನಲ್ಲಿ ನಡೆದಿದೆ.
ಕಳೆದ ಆರು ತಿಂಗಳಿನಿಂದ ಇಲ್ಲಿನ ಹಸುಗಳಿಗೆ ಸರಿಯಾಗಿ ಮೇವು ಒದಗಿಸಲಾಗುತ್ತಿಲ್ಲ. ಇರುವ ಒಂದಷ್ಟು ಮೇವು ಎಲ್ಲಾ ಹಸುಗಳಿಗೂ ಸಾಕಾಗುವುದಿಲ್ಲ. ಬರದ ಬೇಗೆಗೆ ಸಿಲುಕಿ ಮೇವು, ನೀರಿಲ್ಲದೇ ಹಸುಗಳು ನಿತ್ರಾಣಗೊಳ್ಳುತ್ತಿವೆ. ಇದೀಗ ನಿತ್ರಾಣಗೊಂಡು ಹಸುವೊಂದು ಸಾವನ್ನಪ್ಪಿದೆ. ಇನ್ನೂ ನೂರಾರು ಅಮೃತ್ ಮಹಲ್ ತಳಿಯ ಹಸುಗಳು ಮೇವಿಲ್ಲದೇ ಹಸಿವಿನಿಂದ ಕಂಗಾಲಾಗಿವೆ.

ಅಮೃತ್ ಮಹಲ್ ಹಸುಗಳ ನಿರ್ವಹಣೆಗೆಂದೇ ಸರ್ಕಾರ ಪ್ರತಿವರ್ಷ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಅದ್ಯಾವುದೂ ಅಗತ್ಯವಿದ್ದವರಿಗೆ ತಲುಪುತ್ತಿಲ್ಲ.












Click it and Unblock the Notifications