ಮೂಡಿಗೆರೆಯ ಬಿಳಗುಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಚಿಕ್ಕಮಗಳೂರು, ಜೂನ್ 28: ಮೂಡಿಗೆರೆಯ ಬಿಳಗುಳ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಿಳಗುಳ ಗ್ರಾಮದಲ್ಲಿ ಡಿಎಫ್ ಓ ಕುಮಾರ್ ಅವರ ಮನೆ ಮುಂದೆಯೇ ಚಿರತೆ ಕಾಣಿಸಿಕೊಂಡಿದೆ. ಡಿಎಫ್ ಓ ಮನೆ ಹಾಗೂ ವಿಜಯ ಬ್ಯಾಂಕ್ ಮುಂಭಾಗ ಚಿರತೆ ಓಡಾಡಿದ್ದು, ಅದರ ಹೆಜ್ಜೆ ಗುರುತುಗಳು ಪತ್ತೆ ಆಗಿವೆ.

ಬೆಳಗಿನ ಜಾವ ಚಿರತೆ ಓಡಾಟ ನಡೆಸಿರುವುದಾಗಿ ತಿಳಿದುಬಂದಿದೆ. ಹತ್ತು ದಿನದ ಹಿಂದೆ ಕೂಡ ಇದೇ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗೆ ಜನವಸತಿ ಪ್ರದೇಶದಲ್ಲೇ ಮತ್ತೆ ಮತ್ತೆ ಚಿರತೆ ಓಡಾಡುತ್ತಿರುವುದರಿಂದ ಮೂಡಿಗೆರೆ ಪಟ್ಟಣ, ಬಿಳಗುಳ ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯ ಹೇರಿದ್ದಾರೆ.












Click it and Unblock the Notifications