ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್: ಫೋಟೋ, ರೀಲ್ಸ್ ಬಂದ್‌, ಹೊಸ ನಿಯಮಗಳು ಇಲ್ಲಿದೆ

ಚಿಕ್ಕಮಗಳೂರು, ಆಗಸ್ಟ್‌ 05: ಇತಿಹಾಸ ಪ್ರಸಿದ್ಧ ದೇವೀರಮ್ಮ ದೇಗುಲದಲ್ಲಿ ಡ್ರೆಸ್ ಕೋಡ್ ಆದೇಶ ಜಾರಿಗೊಳಿಸಲಾಗಿದೆ. ದೇವೀರಮ್ಮನ ದೇಗುಲಕ್ಕೆ ಆಗಮಿಸುವ ಭಕ್ತರು ಉಡುಗೆಯಲ್ಲಿ ಆಗಮಿಸಲು ಧಾರ್ಮಿಕದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.

ಇತ್ತೀಚೆಗೆ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಅಳವಡಿಸಬೇಕೆಂಬ ಕೂಗು ಎದ್ದಿರುವ ಬೆನ್ನಲ್ಲೇ ಇದೀಗ ಚಿಕ್ಕಮಗಳೂರು ತಾಲೂಕಿನ ಐತಿಹಾಸಿಕ ಪ್ರಸಿದ್ದ ಬಿಂಡಿಗ ದೇವೀರಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಅಳವಡಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.

A Dress Code Order Has Been Enforced At The Deviramma Temple

ಇನ್ನು ಮುಂದೆ ಪಾಶ್ಚಾತ್ಯ ಉಡುಪುಗಳಾದ ಸ್ಕರ್ಟ್, ಮಿಡಿ, ಸ್ಲೀವ್‌ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಸೂಚಿಸಲಾಗಿದೆ. ಡ್ರೆಸ್ ಕೋಡ್ ಅಷ್ಟೇ ಅಲ್ಲದ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಬಳಸುವುದು ನಿಷೇಧಿಸಿದೆ.

ಪ್ರತಿವರ್ಷ ದೀಪಾವಳಿ ಹಬ್ಬದ ವೇಳೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮಕ್ಕಳಿಂದ ಮುದುಕರವರೆಗೂ ಮಧ್ಯರಾತ್ರಿಯಿಂದಲೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ. ಇದುವರೆಗೆ ಡ್ರೆಸ್ ಕೋಡ್ ಇಲ್ಲದ್ದರಿಂದ ಪಾಶ್ಚಾತ್ಯ ಉಡುಪುಗಳು ಧರಿಸಿ ಯುವಕ ಯುವತಿಯರು ಬರುತ್ತಿದ್ದರು. ಇನ್ನು ಮುಂದೆ ಸಾಂಪ್ರಾದಾಯಿಕ ಉಡುಪುಗಳಿದ್ದರೆ ಮಾತ್ರ ದರ್ಶನಕ್ಕೆ ಅವಕಾಶ ಯಾರೇ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕು. ದರ್ಶನಕ್ಕೆ ಬಂದು ದೇವಾಲಯದ ಆವರಣದೊಳಗೆ ಪ್ರೀವೆಡ್ಡಿಂಗ್ ಶೂಟ್, ರೀಲ್ಸ್ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

A Dress Code Order Has Been Enforced At The Deviramma Temple

ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು: ಗಿರಿಜಾದೇವಿಗೆ ಭಕ್ತನ ಕೋರಿಕೆ

ಚಿಕ್ಕಮಗಳೂರು: ಭಕ್ತರು ದೇವಸ್ಥಾನದ ಹುಂಡಿಗಳಿಗೆ ಚೀಟಿಯಲ್ಲಿ ನಮ್ಮ ಇಷ್ಟಾರ್ಥವನ್ನು ಬರೆದು ನೆರವೇರಿಸುವಂತೆ ಕೇಳಿಕೊಂಡಿರುತ್ತಾರೆ. ಆದರಂತೆ ಇಲ್ಲೊಬ್ಬ ಭಕ್ತ. ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕೆಂದು ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.

ಚಿಕ್ಕಮಗಳೂರಿನ ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ರಕ್ಷಿತ್ ಎಂಬ ಭಕ್ತ, 'ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು.

ಹೀಗಾಗಿ ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ ಎಂದು ಬರೆದಿದ್ದಾನೆ. ಭಕ್ತನ ವಿಚಿತ್ರ ಬೇಡಿಕೆಯನ್ನು ನೋಡಿ ಹುಂಡಿ ಹಣ ಎಣಿಕೆ ಅಧಿಕಾರಿಗಳು ನಗೆ ಕಡಲಲ್ಲಿ ತೇಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+