Chikkaballapura: ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿಯ ದರ್ಶನಕ್ಕೆ ಪ್ರಾಯೋಗಿಕ ಹಾರಾಟ
ಚಿಕ್ಕಬಳ್ಳಾಪುರ ನವೆಂಬರ್ 30: ಇಶಾ ಫೌಂಡೇಶನ್'ನಿಂದ ಚಿಕ್ಕಬಳ್ಳಾಪುರದ ಬಳಿ ಆದಿಯೋಗಿ ಪ್ರತಿಮೆ ಸ್ಥಾಪನೆಯಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಬೆಂಗಳೂರಿನ ಸ್ಕೈಬರ್ಡ್ ಅಡ್ವೆಂಚರಸ್ ಸಂಸ್ಥೆ ಇಶಾ ಫೌಂಡೇಶನ್ ಸಮೀಪ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ಯಾರಾಗ್ಲೆಡಿಂಗ್ ಮಾಡುವಾಗ ಆದಿಯೋಗಿ ಪ್ರತಿಮೆಯನ್ನು ಮೇಲಿನಿಂದ ಪಕ್ಷಿಯಂತೆ ಹಾರಿ ವೀಕ್ಷಿಸಬಹುದಾಗಿದೆ. ಈಗ ಮೊದಲ ಹಂತದ ಪ್ರಾಯೋಗಿಕ ಹಾರಾಟ ಚಿಕ್ಕಬಳ್ಳಾಪುರದಲ್ಲಿ ಯಶಸ್ವಿಯಾಗಿದೆ.

ಬುಧವಾರ ಪ್ರಾಯೋಗಿಕವಾಗಿ ಪ್ಯಾರಾಗ್ರೇಡಿಂಗ್ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದು, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಕಾಣುತ್ತಿದ್ದ ಪ್ಯಾರಾಗ್ಲೆಡಿಂಗ್ ಸಾಹಸ ಕ್ರೀಡೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿಯೂ ಕಾಣಬಹುದಾಗಿದೆ. ಜೊತೆಗೆ ಹಾರಾಟ ಕೂಡ ಮಾಡಿ ಪ್ರವಾಸಿಗರು ಆನಂದಿಸಬಹುದಾಗಿದೆ.
ಪ್ಯಾರಾಗ್ಲೈಡಿಂಗ್ ಮಾಡುವಾಗ ಆದಿಯೋಗಿ ಪ್ರತಿಮೆಯನ್ನು ಮೇಲಿನಿಂದ ಪಕ್ಷಿಯಂತೆ ಹಾರಿ ಜನ ಕಣ್ತುಂಬಿಕೊಳ್ಳಬಹುದು. ಈಗ ಮೊದಲ ಹಂತದ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಹಾರಾಟಕ್ಕೂ ಇದರಿಂದ
ಚಿಕ್ಕಬಳ್ಳಾಪುರ ಆದಿಯೋಗಿ ಪ್ರತಿಮೆ
ಚಿಕ್ಕಬಳ್ಳಾಪುರ ಸಮೀಪದ ಅವಲಗುರ್ಕಿ ಗ್ರಾಮದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಸ್ಥಾಪಿಸಲಾಗಿದೆ. 2023 ರ ಜನವರಿ ತಿಂಗಳಲ್ಲಿ ಪ್ರತಿಮೆಯನ್ನು ಅಂದಿನ ಬಿಜೆಪಿ ಸರಕಾರದ ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು.

ಹೋಗುವುದು ಹೇಗೆ?
112 ಅಡಿ ಎತ್ತರದ ಆದಿಯೋಗಿಯ ದರ್ಶನ ಪಡೆಯಲು ನೀವು ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ಪ್ರಯಾಣಿಸಬೇಕು. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಸ್ಟ್ 45 ಕಿಲೋ ಮೀಟರ್, ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಲೋ ಮೀಟರ್ ಪಯಣಿಸಿದರೆ ನೀವು ಆದಿಯೋಗಿ ದರ್ಶನ ಮಾಡಬಹುದು. ಸದ್ಯ ಈ ಆದಿಯೋಗಿ ಮೂರ್ತಿಯ ಹತ್ತಿರ ಇಶಾ ಫೌಂಡೇಶನ್ನ ಚಿಕ್ಕ ಕ್ಯಾಂಟೀನ್ ಇದೆ ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಇಲ್ಲ.
ಬಸ್ ಮೂಲಕ ತೆರಳುವುದಾದರೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿದರೆ ದೇವನಹಳ್ಳಿ ರಾಣಿ ಸರ್ಕಲ್ ಬಳಿ ನಿಮಗೆ ಆದಿಯೋಗಿ ಬಳಿ ತಲುಪಲು ಬಸ್ ಸಿಗುವ ಸಾಧ್ಯತೆಯಿದೆ. ಅದಕ್ಕಿಂತ ಬೆಂಗಳೂರಿನಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿಂದ ದೊಡ್ಡಬಳ್ಳಾಪುರ ಬಸ್ ಹತ್ತಿದರೆ ಮಧ್ಯೆ ನಂದಿ ಬಸ್ ಸ್ಟಾಪ್ ಸಿಗುತ್ತೆ. ಹೀಗೂ ನೀವು ಆದಿಯೋಗಿ ಶಿವನ ಮೂರ್ತಿ ತಲುಪಬಹುದು. ಚಿಕ್ಕಬಳ್ಳಾಪುರದಿಂದಲೂ ಕೇವಲ 9 ಕಿಲೋ ಮೀಟರ್ ದೂರಕ್ಕೆ ಈ ಕ್ಷೇತ್ರ ದೊರೆಯುತ್ತದೆ.












Click it and Unblock the Notifications