ಚಿಕ್ಕಬಳ್ಳಾಪುರದ ಕಲ್ಲು ಕ್ವಾರಿಗಳಲ್ಲಿ ಜೀತ ಪದ್ಧತಿ ಇಂದಿಗೂ ಜೀವಂತವಾಗಿದೆ- ಡಾ.ಕಿರಣ್ ಕಮಲ ಪ್ರಸಾದ್
ಚಿಕ್ಕಬಳ್ಳಾಪುರ ಕಲ್ಲುಕ್ವಾರಿಗಳಲ್ಲಿ ಜೀತಗಾರಿಕೆ ಇಂದಿಗೂ ಜೀವಂತವಾಗಿದ್ದು, ಇದರ ವಿರುದ್ಧ ಹೋರಾಡಲು ಅಲ್ಲಿಗೆ ಹೋಗಲು ನಮ್ಮಿಂದ ಆಗದು ಹಾಗಾಗಿ ತಹಶೀಲ್ದಾರರು, ಶಾಸಕರು ನಮಗೆ ಸಹಕಾರ ನೀಡಬೇಕು ಎಂದು ಜೀವಿಕ ಸಂಸ್ಥಾಪಕರಾದ ಡಾ.ಕಿರಣ್ ಕಮಲ ಪ್ರಸಾದ್ ಮನವಿ ಮಾಡಿಕೊಡಿದ್ದಾರೆ
ಚಿಕ್ಕಬಳ್ಳಾಪುರ, ಜನವರಿ 28: ಜಿಲ್ಲೆಯ ಕಲ್ಲುಕ್ವಾರಿಗಳಲ್ಲಿ ಇಂದಿಗೂ ಜೀತಗಾರಿಕೆ ಶಾಶ್ವತವಾಗಿದ್ದು, ಇದರ ವಿರುದ್ಧ ಹೋರಾಡಲು ಅಲ್ಲಿಗೆ ಹೋಗಲು ನಮ್ಮಿಂದ ಆಗದು ಹಾಗಾಗಿ ತಹಶೀಲ್ದಾರರು, ಶಾಸಕರು ನಮಗೆ ಸಹಕಾರ ನೀಡಿದರೆ ಕಲ್ಲು ಕ್ವಾರಿಗಳಲ್ಲಿ ಅನಿಯಮಿತವಾಗಿ ದುಡಿಸಿಕೊಳ್ಳುತ್ತಿರುವ ಹೊರ ಭಾಗಗಳಿಂದ ಬಂದು ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವವರನ್ನು ಜೀತ ಪದ್ಧತಿಯಿಂದ ಮುಕ್ತಿಗೊಳಿಸಲು ನಮ್ಮ ಜೊತೆ ಕೈ ಜೋಡಿಸಬೇಕೆಂದು ಜೀವಿಕ ಸಂಸ್ಥಾಪಕರು ಹಾಗೂ ರಾಜ್ಯ ಸಂಚಾಲಕರಾದ ಡಾ.ಕಿರಣ್ ಕಮಲ ಪ್ರಸಾದ್ ಮನವಿ ಮಾಡಿಕೊಡಿದ್ದಾರೆ.
ಚಿಕ್ಕಬಳ್ಳಾಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜೀತ ವಿಮುಕ್ತಿ ಕರ್ನಾಟಕ, ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ, ನವಚೇತನ ಸಮೃದ್ಧಿ ಸಂಸ್ಥೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ 'ಮಿಂಚು 16' ಎಂಬ ರಾಜ್ಯ ಮಟ್ಟದ ದಲಿತ ಜಾನಪದ ಸಂಗೀತ ಕಲೋತ್ಸವ ತಮಟೆ ಹಬ್ಬದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶತಮಾನಗಳಿಂದ ಬೆಳೆದು ಬಂದಿರುವ ತಮಟೆವಾದನ ಜಾನಪದ ಕಲೆಯಲ್ಲಿ ಗಂಡು ಕಲೆ ಎನಿಸಿದೆ. ತಮಟೆ ವಾದನ ದಲಿತ ಸಮುದಾಯದ ಜನಕ್ಕೆ ಸುಪರಿಚಿತ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಅಷ್ಟೆಲ್ಲ ಯಾಕೆ ಅಂತಿಮ ಯಾತ್ರೆಯಲ್ಲಿ ಮಸಣದವರೆಗೆ ಜೊತೆ ನೀಡಿ ವಿದಾಯ ಹೇಳುವುದೂ ತಮಟೆಯಿಂದಲೇ ಆದರೆ ಇಂತಹ ತಮಟೆಗಾಗಲಿ, ದಲಿತರಿಗಾಗಲಿ ಆಳುವ ಸರಕಾರಗಳಿಂದಾಗಲಿ, ಅಧಿಕಾರ ನಡೆಸಿದ ಬ್ರಾಹ್ಮಣ, ಗೌಡ, ಲಿಂಗಾಯುತ ರಿಂದಾಗಲಿ ಈ ಕಲೆಯನ್ನು ರೂಡಿಸಿಕೊಂಡಿರುವ ದಲಿತ ಸಮಾಜಕ್ಕಾಗಲಿ ಪ್ರಾತಿನಿಧ್ಯ, ಬೆಲೆ ಮತ್ತು ಗೌರವ ದೊರೆತಿಲ್ಲ ಎಂದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಹೈಕೋರ್ಟ್ ವಕೀಲರಾದ ಹರಿರಾಮ್ ಮಾತನಾಡಿ "ತಮಟೆ ನಮ್ಮ ದೇಶದ ದೊಡ್ಡ ಸಂಸ್ಕೃತಿಯಾಗಿದೆ. ಒಂದು ಸುದ್ದಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಬ್ಬಲಿಕ್ಕೆ ಸಹಕಾರಿ ಸಾಧನವಾಗಿತ್ತು. ಇದು ಮೂಲ ನಿವಾಸಿಗಳ ಸಂಸ್ಕೃತಿ, ದುರಂತವೆಂದರೆ ತಮಟೆ ಬಾರಿಸುವವರನ್ನು ಕನಿಷ್ಠ ಮುಟ್ಟದಲ್ಲಿ ನೋಡುವ ಜನ ಇಂದಿಗೂ ಇದ್ದಾರೆ ಎಂದರು.
ವೈದಿಕ ವಾದ್ಯಗಳನ್ನು ಬಾರಿಸುವ ಮೇಲ್ವರ್ಗದ ಸಮುದಾಯದವರಿಗೆ ಅತ್ಯುನ್ನತ ಪ್ರಶಸ್ತಿಗಳನ್ನು ನೀಡು ಗೌರವಿಸಲಾಗಿದೆ, ಅವೈದಿ ವಾದ್ಯಗಳನ್ನು ವಾದ್ಯವನ್ನು ಗುರುತಿಸುವ ಕೆಲಸ ಸಹ ಮಾಡಿಲ್ಲ, ಅಂದರೆ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಈ ವ್ಯವಸ್ಥೆ ದಲಿತ ಸಮುದಾಯವನ್ನು ಮಾತ್ರವಲ್ಲ ನಮ್ಮದು ಎಂಬ ಪ್ರತಿಯೊಂದನ್ನೂ ತಿರಸ್ಕರಿಸುವಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದರು.
ನಮ್ಮ ದೇಶ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ. 1950ರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಸರ್ಕಾರ ಸಂಸ್ಥೆಗಳು ಕಾಲಕಾಲಕ್ಕೆ ಬದಲಾಗಬೇಕಿತ್ತು. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಬೇಕಿತ್ತು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ. ದೊಡ್ಡ ದೊಡ್ಡ ಭೂಮಾಲೀಕರು , ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರ ಮಾರ್ಗದರ್ಶನದಂತೆ ಈ ಸರಕಾರಗಳು ನಡೆಯುತ್ತಿರುವುದೇ ಇಂದು ನಮ್ಮ ಪರಿಸ್ಥಿತಿ ಹೀಗೆ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದೆ. ಮನುಷ್ಯನನ್ನು ಪ್ರಣಿಯಂತೆ ದುಡಿಸಿಕೊಂಡು, ನೆಮ್ಮದಿಯಿಂದ ಜೀವಿಸುವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ನಮ್ಮ, ನಮ್ಮ ಮಕ್ಕಳ ಹಾಗೂ ಸಮಾಜದ ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು, ವಿಶೇಷವಾಗಿ ತಮಟೆ ಹೊಡೆತ ಮತ್ತು ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಜೀತ ವಿಮುಕ್ತಿ ತಾಲೂಕು ಅಧ್ಯಕ್ಷ ಬೀಚಗಾನಹಳ್ಳಿ ಜೀವಿಕ ನಾರಾಯಣಸ್ವಾಮಿ, ತಹಶಿಲ್ದಾರ್ ಸಿಗ್ಬತುಲ್ಲಾ, ಸಾಮಾಜಿಕ ಹೋರಾಟಗಾರರು ಹಾಗೂ ಚಿತ್ರನಟ ಚೇತನ್, ಯುವ ಮುಖಂಡರಾದ ಮಧುಕುಮಾರ್, ಕರ್ನಾಟಕ ಜೀತದಾಳು ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯಾದ್ಯಕ್ಷ ಮಹದೇವ, ಮಧು ಪೂರ್ಣಿಮಾ, ಸಂಜೀವ್ ಮೂರ್ತಿ, ಕೆ.ಡಿ.ಎಸ್.ಎಸ್ ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ, ಬೀಚಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟನರಸಪ್ಪ, ತಾಪಂ ಇಒ ಡಾ.ಬಿಂದು, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಮುಖವೇಣಿ ಅಂಜಿನಪ್ಪ, ರೈತ ಸಂಘದ ಮುಖಂಡ ಹೆಚ್.ಪಿ.ರಾಮನಾಥ್ ರೆಡ್ಡಿ, ಡಿಎಸ್ ಎಸ್ ಜಿಲ್ಲಾ ಸಂಚಾಲಕ ವೆಂಕಟರಮಣ, ಕೆ.ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರಮಣ, ವಕೀಲ ನಾರಾಯಣಸ್ವಾಮಿ, ದಲಿತ ಮುಖಂಡ ಗಂಗಪ್ಪ, ಮುಖಂಡ ಕೆ.ಶಿವಾನಂದ, ಚನ್ನರಾಯಪ್ಪ, ಅಮರಾವತಿ , ರಾಮಾಂಜಿನೇಯ, ನೂರಾರು ದಲಿತ ಮುಖಂಡರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications