ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ; ಅಕಾಲಿಕ ಮಳೆ, ರೈತರಿಗೆ ದ್ರಾಕ್ಷಿ ಬೆಳೆಯ ಚಿಂತೆ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಮಾರ್ಚ್ 23; ಕಳೆದ ವರ್ಷ ರಾಜ್ಯದಲ್ಲಿ ಸುರಿದ ಮಳೆ ರೈತರಿಗೆಗ ಸಂತಸ ಉಂಟು ಮಾಡಿದೆ. ಹಲವು ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೂ ಸಿಲುಕಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಂತರ್ಜಲ ವೃದ್ಧಿಯಾಗಿದ್ದು ಬೋರ್‌ವೆಲ್‌ಗಳಲ್ಲಿ ನೀರು ಬಂದಿತ್ತು.

ಬೇಸಾಯಕ್ಕೆ ಬೆನ್ನು ತೋರಿಸಿದ್ದ ಜಿಲ್ಲೆಯ ಹಲವು ರೈತರು ಮಳೆಯ ಅಬ್ಬರ ನೋಡಿ ಮತ್ತೆ ಬೇಸಾಯದತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಪ್ರಸಿದ್ಧಿ ಪಡೆದಿದೆ. ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಉತ್ತಮ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.

Asani Cyclone: ಚಂಡಮಾರುತ 'ಅಸನಿ' ಇದೀಗ ಎಲ್ಲಿದೆ? Asani Cyclone: ಚಂಡಮಾರುತ 'ಅಸನಿ' ಇದೀಗ ಎಲ್ಲಿದೆ?

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಅಸನಿ' ಚಂಡಮರುತದ ಪರಿಣಾಮ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ರೈತರು ಕಂಗಾಲಾಗುವಂತೆ ಮಾಡಿದೆ. ದ್ರಾಕ್ಷಿ ಬೆಳೆದಿರುವ ರೈತರು ನಷ್ಟದ ಹಾದಿಗೆ ಬೀಳುವ ಆತಂಕದಲ್ಲಿದ್ದಾರೆ.

ಮಳೆ; ಬೆಂಗಳೂರಲ್ಲಿ 48 ಗಂಟೆಗಳ ಕಾಲ ಯೆಲ್ಲೊ ಅಲರ್ಟ್ ಮಳೆ; ಬೆಂಗಳೂರಲ್ಲಿ 48 ಗಂಟೆಗಳ ಕಾಲ ಯೆಲ್ಲೊ ಅಲರ್ಟ್

Rain Due To Cyclone Asani Grape Crop Damage

ಬೇಸಿಗೆ ಆರಂಭದಲ್ಲಿ ಗಾಳಿಯೊಂದಿಗೆ ಸುರಿದ ಮಳೆಯಿಂದ ದ್ರಾಕ್ಷಿ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ಗಾಳಿಗೆ ಸಿಲುಕಿದ ದ್ರಾಕ್ಷಿ ಉದುರುತ್ತಿದ್ದು, ಇದೇ ರೀತಿ ಅಕಾಲಿಕ ಮಳೆ ಮುಂದುವರೆದರೆ ಮುಂದಿನ ದಿನಗಳಲ್ಲಿ ದ್ರಾಕ್ಷಿ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಲಿದ್ದಾರೆ.

Inforgraphics: ಮಾ.22ರಂದು ರಾಜ್ಯ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ Inforgraphics: ಮಾ.22ರಂದು ರಾಜ್ಯ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ

ಈಗ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ದ್ರಾಕ್ಷಿ ಬೆಳೆ ಒಡೆಯುವುದರಿಂದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಉತ್ತಮ ಬೆಳೆ ಬಂದರೂ ನಷ್ಟ ಉಂಟಾಗುವ ಭೀತಿ ರೈತರನ್ನು ಆವರಿಸಿದೆ.

Rain Due To Cyclone Asani Grape Crop Damage

ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಸ್ಥಿತಿಯಿಂದಾಗಿ ರೈತರು ಬೆಳೆಗೆ ಸೂಕ್ತ ಬೆಲೆ ಸಿಗದೆ ಪರದಾಡಿದರು. ಈ ಬಾರಿ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದ್ರಾಕ್ಷಿ ಫಸಲು ಉತ್ತಮವಾಗಿದೆ. ರೈತರು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಬೆಂಗಳೂರು ಬ್ಲೂ ಒಂದು ಕೆಜಿ ದ್ರಾಕ್ಷಿಗೆ 80 ರೂಪಾಯಿ ಬೆಲೆ ಸಿಗುತ್ತಿದೆ. ಸೀಡ್​ ಲೆಸ್​ ದ್ರಾಕ್ಷಿಗೆ ಬೆಂಗಳೂರು ಬ್ಲೂ ದ್ರಾಕ್ಷಿಗಿಂತ ಸ್ವಲ್ಪ ಜಾಸ್ತಿ ಬೆಲೆ ಸಿಗುತ್ತಿದ್ದು, ಇದು ಕೋವಿಡ್​ ಅಲೆಯ ನಂತರ ಸಿಗುತ್ತಿರುವ ಉತ್ತಮ ಬೆಲೆ ಎನ್ನುತ್ತಿದ್ದಾರೆ ರೈತರು. ಇದರ ನಡುವೆ ಅಕಾಲಿಕ ಮಳೆ ರೃತರ ಚಿಂತೆಗೆ ಕಾರಣವಾಗಿದೆ.

ಸಂಜೆಯಾಗುತ್ತಿದ್ದಂತೆ ಮಳೆ; ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಸಂಜೆಯಾಗುತ್ತಿದ್ದಂತೆ ಗಾಳಿ ಸಹಿತ ಮಳೆ ಬೀಳುತ್ತಿದ್ದು, ಮಾರ್ಚ್​ 18ರಿಂದ ಸತತವಾಗಿ ಮಳೆಯಾಗುತ್ತಿದೆ.

ಒಂದು ತಾಸು ಸುರಿಯುವ ಮಳೆ ರೈತರಿಗೆ ನಷ್ಟ ಉಂಟು ಮಾಡುವ ಜೊತೆಗೆ ಸಾಂಕ್ರಾಮಿಕ ರೋಗದ ಭೀತಿಯನ್ನು ತಂದಿದೆ. ಕೇವಲ ದ್ರಾಕ್ಷಿ ಬೆಳೆ ಮಾತ್ರವಲ್ಲ ಸಾಕಷ್ಟು ಬೆಳೆಗಳು ಹಾನಿಗೊಳಗಾಗುತ್ತಿದ್ದು ಅಕಾಲಿಕ ಮಳೆಗೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

English summary
Rain due to cyclone Asani destroyed Grape crop at Chikkaballapur district. District witnessing rain from March 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X