ಮತ ಎಣಿಕೆ ದಿನ ಸಮಸ್ಯೆ ಆಗದಂತೆ ಮುಂಜಾಗ್ರತೆ- ಚುನಾವಣಾ ಅಧಿಕಾರಿಗಳಿಂದ ಮತಗಟ್ಟೆಗಳ ಪರಿಶೀಲನೆ
ಚಿಕ್ಕಬಳ್ಳಾಪುರ ಜೂನ್ 3: ಲೋಕಸಭಾ ಚುನಾವಣೆ ಮತ ಎಣಿಕೆಗೆ ಇನ್ನೂ ಒಂದು ದಿನ ಮಾತ್ರ ಬಾಕಿ ಇದೆ. ರಾಜ್ಯದ ಜಿಲ್ಲೆಗಳಲ್ಲಿರುವ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆಗೆ ಬೇಕಾದ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಚಿಕ್ಕಬಳ್ಳಾಪುರದ ಮತ ಎಣಿಕೆ ಕೆಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿರುವ ಚಿಕ್ಕಬಳ್ಳಾಪುರ ಲೋಕ ಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಮುಖ್ಯ ವೀಕ್ಷಕ ನ್ಯಾಲಿ ಇಟೆ, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ. ಎನ್.ರವೀಂದ್ರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿತು.

ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯ ಜೂ.4ರಂದು ನಡೆಯುವ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಅಧಿಕಾರಿಗಳ ತಂಡ, ಮತ ಯಂತ್ರಗಳನ್ನ ಭದ್ರಪಡಿಸಿ ರುವ ಕೊಠಡಿ, ಮತ ಎಣಿಕೆ ಏಜೆಂಟ್ ರೂಂಗಳು, ತಿಂಡಿ, ಊಟ, ನೀರು ವ್ಯವಸ್ಥೆ, ಮೂಲಭೂತ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿತು.
ಮತ ಎಣಿಕೆ ವೇಳೆ ಯಾವುದೇ ಭದ್ರತಾ ಲೋಪ ಆಗದಂತೆ ಎಚ್ಚರ ವಹಿಸುವುದು. ಪಾಸ್ ಇಲ್ಲದೆ ಒಳ ಪ್ರವೇಶಿಸುವುದು ಮತ್ತಿತರ ಕುರಿತಂತೆ ಕೈಗೊಂಡಿರುವ ಕಟ್ಟೆಚ್ಚರಗಳ ಬಗ್ಗೆ ಮಾಹಿತಿ ಪಡೆದು ಹಲವು ಸಲಹೆ ಸೂಚನೆಗಳನ್ನು ನೀಡಲಾಯಿತು.
ಮತ ಎಣಿಕೆ ದಿನ ಯಾವುದೇ ಸಮಸ್ಯೆ ಯಾಗದಂತೆ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಯಿತು. ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ ಇಮಾಮ್ ಕಾಸಿಂ ಮತ್ತಿತರರು ಇದ್ದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ:-
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಜೂ.4ರಂದು ನಾಗಾ ರ್ಜುನ ಕಾಲೇಜಿನಲ್ಲಿ ನಡೆಯಲಿದ್ದು ಸುಸೂತ್ರ ವಾಗಿ ಸಕಾಲಕ್ಕೆ ಮತ ಎಣಿಕೆ ಕಾರ್ಯ ಪೂರ್ಣ ಗೊಳಿಸಿ ಫಲಿತಾಂಶ ಘೋಷಣೆಗೆ ಎಲ್ಲ ಸಿದ್ದತೆಗ ಳನ್ನು ನಡೆಸಿದ್ದೇವೆ ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತ ಎಣಿಕೆಗೆ ಕೈಗೊಂಡಿರುವ ಎಲ್ಲ ಪೂರ್ವ ಸಿದ್ದತೆಗಳ ಬಗ್ಗೆ ವಿವರ ನೀಡಿದ ಅವರು, ಬೆಳಗ್ಗೆ 7.30ಕ್ಕೆ ಸರಿಯಾಗಿ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಂ) ಯ ಬೀಗವನ್ನು ಅಭ್ಯರ್ಥಿ ಗಳು, ಏಜೆಂಟರುಗಳ ಸಮ್ಮುಖದಲ್ಲಿ ತೆಗೆಯಲಾ ಗುತ್ತದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಎವಿಎಂ ಯಂತ್ರಗಳನ್ನು ಮತ ಎಣಿಕೆ ಕೊಠ ಡಿಗಳಿಗೆ ತಂದು 8 ಗಂಟೆಗೆ ಮತ ಎಣಿಕೆ ಆರಂಭಿಸಲಾಗುತ್ತದೆ ಎಂದರು.
ಮತ ಎಣಿಕೆ ಕೇಂದ್ರದಲ್ಲಿ ಕುಡಿಯುವ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಊಟದ ವ್ಯವಸ್ಥೆ, ವಿದ್ಯುತ್ ಪೂರೈಕೆ, ವೈಫೈನಂತ ಎಲ್ಲ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಮಾಧ್ಯಮ ಕೇಂದ್ರ ತೆರೆದು ಪ್ರತಿ ಸುತ್ತಿನ ವಿವರವನ್ನೂ ಒದಗಿಸಲಾಗುತ್ತದೆ.
ಮಾಧ್ಯಮ ಕೇಂದ್ರಕ್ಕೆ ಗುರುತಿನ ಚೀಟಿ ಇರುವ ಮಾಧ್ಯಮದವರಿಗೆ ಮಾತ್ರ ಪ್ರವೇಶ ನೀಡಲಿದ್ದು, ಮೊಬೈಲ್ ಬಳಕೆಗೆ ಅಲ್ಲಿ ಅವಕಾಶ ನೀಡಲಾಗುತ್ತದೆ. ತುರ್ತು ಆರೋಗ್ಯ ಕೇಂದ್ರ ತೆರೆದು ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯರು, ಸಿಬ್ಬಂದಿಯನ್ನು ತುರ್ತು ಚಿಕಿತ್ಸೆಗಾಗಿ ನೇಮಿಸಲಾಗಿರುತ್ತದೆ ಎಂದು ಡಿಸಿ ತಿಳಿಸಿದರು. ಈ ವೇಳೆ ಕ್ಷೇತ್ರದ ಚುನಾವಣಾ ವೀಕ್ಷಕ ನ್ಯಾಲಿ ಈಟೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇ ಸ್ವಾಮಿ, ಎಎಸ್ಪಿ ಆರ್.ಐ.ಖಾಸಿಂ ಹಾಜರಿದ್ದರು.












Click it and Unblock the Notifications