ಚಿಕ್ಕಬಳ್ಳಾಪುರ; ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ಕಾನ್ ಸ್ಟೆಬಲ್ ಬಂಧನ

ಚಿಕ್ಕಬಳ್ಳಾಪುರ, ಅಕ್ಟೋಬರ್ 30: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ಪೊಲೀಸ್ ಕಾನ್​ಸ್ಟೆಬಲ್​ ಒಬ್ಬರನ್ನು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾನ್ ಸ್ಟೆಬಲ್ ನನ್ನು ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿಂತಾಮಣಿ ನಗರ ಠಾಣೆ ಪೊಲೀಸ್ ಕಾನ್​ಸ್ಟೆಬಲ್​ ಎಂ.ಕೆ ಮಂಜುನಾಥ್ ಬಂಧಿತ ಎಂದು ತಿಳಿದು ಬಂದಿದೆ.

ಅಕ್ಟೋಬರ್​ 1ರಂದು ನಗರದ ಗಜಾನಾನ ಸರ್ಕಲ್ ಸಮೀಪ ಐದು ಜನರ ಗುಂಪೊಂದು ಪಂಜಾಬ್ ಹಾಗೂ ಮುಂಬೈ ತಂಡಗಳ ನಡುವೆ ಬೆಟ್ಟಿಂಗ್ ನಡೆಸುತ್ತಿತ್ತು. ಈ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದ್ದು, ಇನ್ಸ್‌ಪೆಕ್ಟರ್ ಆನಂದ್ ಕುಮಾರ್​ ದಾಳಿ ನಡೆಸಿದ್ದರು. ಈ ಸಂದರ್ಭ ನವೀನ್, ಸುಲೈಮಾನ್, ಶ್ರೀನಿವಾಸ್, ಮಾರುತಿ, ಮನೋಹರ್ ಎಂಬುವವರನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ ಐದು ಮೊಬೈಲ್‌ ಗಳು ಹಾಗೂ 6,970 ರೂ. ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

 Chikkaballapur: Police Constable Involved In IPL Cricket Betting Arrested

Recommended Video

      ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada

      ನಂತರ, ಈ ಬೆಟ್ಟಿಂಗ್ ನಲ್ಲಿ ಪೊಲೀಸ್ ಹೆಡ್‌ ಕಾನ್​ ಸ್ಟೆಬಲ್​ ಮಂಜುನಾಥ್ ಕೂಡ ತೊಡಗಿಕೊಂಡಿದ್ದು ತಿಳಿದುಬಂದಿದೆ. ಎಸ್ಪಿ ಮಿಥುನ್ ಕುಮಾರ್‌ಗೆ ಅವರಿಗೆ ಈ ವಿಷಯ ತಿಳಿದುಬಂದಿದ್ದು, 10 ದಿನಗಳ ಹಿಂದೆ ಮಂಜುನಾಥ್ ನನ್ನು ಅಮಾನತು ಮಾಡಲಾಗಿತ್ತು. ಆರೋಪಿ ಮಂಜುನಾಥ್​ನನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+