ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ, ಬಾಯಿ ತೆವಲು ಕಡಿಮೆ ಮಾಡಬೇಕು: ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ, ಜನವರಿ 11: ಶ್ರೀರಾಮ ಹಿಂದೂಗಳ ಆರಾಧ್ಯ ದೈವ. ನಾನೂ ಕೂಡ ಶ್ರೀರಾಮನ ಭಕ್ತ. ಶ್ರೀರಾಮನನ್ನು ಆರಾಧಿಸುತ್ತೇವೆ. ಅಲ್ಲಾ, ಏಸುವನ್ನು ಗೌರಿವಿಸುತ್ತೇವೆ. ಬಿಜೆಪಿಯವರ ತರಹ ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ ತರುವ ಕೆಲಸ ಮಾಡುವುದಿಲ್ಲ. ಎಲ್ಲಾ ಧರ್ಮಗಳನ್ನು ಕಾಂಗ್ರೆಸ್ ಸಮಾನವಾಗಿ ಕಾಣುತ್ತದೆ. ಶ್ರಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರಾಗುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಶ್ರೀರಾಮಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿ ಏನೂ ಅಲ್ಲ. ನಾವೂ ಹಿಂದುಗಳೇ, ನಮಗೂ ಶ್ರೀ ರಾಮಚಂದ್ರ ಆರಾಧ್ಯ ದೇವರೇ. ನಮ್ಮಲ್ಲೂ ಶ್ರೀರಾಮನ ಭಕ್ತರಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.

ಇನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಹೀನಾಯವಾಗಿ ಕಿಡಿಕಾರಿದ ಶಾಸಕ ಪ್ರದೀಪ್ ಈಶ್ವರ್, ಸಂಸದ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ, 40-50 ವರ್ಷ ಅನುಭವ ಇರುವ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತಾನೆ. ಪ್ರತಾಪ್ ಸಿಂಹ ಸಿದ್ದರಾಮಯ್ಯ ಬಗ್ಗೆ ನಾಲಿಗೆ ಬಿಗಿಹಿಡಿದು ಮಾತಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಾಪ್ ಸಿಂಹ ಅವರೇ ಬಾಯಿ ಮುಚ್ಚುಕೊಂಡು ಇರಬೇಕು. ಬಾಯಿ ತೆವಲು ಕಡಿಮೆ ಮಾಡಿಕೊಳ್ಳಬೇಕು. ಲೋಕಸಭೆಗೆ ಪಾಸ್ ಕೊಟ್ಟ ನೀವು ದೇಶದ್ರೋಹಿಗಳಲ್ವಾ. ಉತ್ತರ ಕೊಡಿ. ಒಂದು ವೇಳೆ ನಾವ್ ಪಾಸ್ ಕೊಟ್ಟಿದ್ದರೆ ಏನು ಪಟ್ಟ ಕಟ್ಟುತಿದ್ರಿ?, ಪ್ರತಾಪ್ ಸಿಂಹ ಒಂದು ಕಲ್ಲು ಹಾಕಿದರೆ, ನಾವು ನಾಲ್ಕು ಕಲ್ಲು ಹಾಕುತ್ತೇವೆ. ಲೋಕಸಭೆ ಪ್ರವೇಶಕ್ಕೆ ಪಾಸ್ ಕೊಟ್ಟ ಪ್ರತಾಪ್ ಸಿಂಹ ದೇಶದ್ರೋಹಿ ಅಲ್ವಾ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಅಕ್ಕಿ ಹೇಗೆ ಕೊಟ್ಟಿತು ಅಂತ ಮುಟ್ಟಾಳರಿಗೆ ಜ್ಞಾನದ ಬಗ್ಗೆ ಅರಿವು ಇದೆಯಾ. ಫುಡ್ ಸೆಕ್ಯೂರಿಟಿ ಆಕ್ಟ್ ನಮ್ಮ ಮನಮೋಹನ್ ಸಿಂಗ್ ಅವಧಿಯಲ್ಲಿ ಮಾಡಿದ್ದು. ಶೇಕಡಾ 75 ರಷ್ಟು ಗ್ರಾಮೀಣ ಭಾಗಕ್ಕೆ ಶೇಕಡಾ 50 ರಷ್ಟು ಅರ್ಬನ್‌ಗೆ ಕೊಡಬೇಕು ಅಂತ ಮಾಡಿದೆ. ಬಿಜೆಪಿಯಿಂದ 25 ಜನ ಎಂಪಿಗಳಿದ್ದಾರಲ್ಲಾ ಅವರಿಗೆ ಮಾನ ಮರ್ಯಾದೆ ಇದ್ದರೆ ಬಾಯಿಬಿಚ್ಚಲಿ ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು 4 ಲಕ್ಷ ಕೋಟಿ ರೂಪಾಯಿ ಆದಾಯ ಕೊಟ್ಟರೂ ಅವರು 50 ಸಾವಿರ ಕೋಟಿ ರೂಪಾಯಿ ಕೊಡಲು ಒದ್ದಾಡುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿ ಸಂಸದರು ಯಾವತ್ತಾದರೂ ಬಾಯಿಬಿಚ್ಚಿದ್ದಾರಾ?. ಅಕ್ಕಿ ಕೊಡಲು ಕೇಂದ್ರಕ್ಕೆ ದುಡ್ಡು ಕೊಡುತ್ತೇವೆ ಅಂದರೂ ಇವರು ಬಾಯಿ ಬಿಡಲಿಲ್ಲ. ಈಗ ಚುನಾವಣೆ ಬರುತ್ತಿದೆ ಅದಕ್ಕೆ ಬಾಯಿ ಬಡ್ಕೋತಿದ್ದಾರೆ ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.












Click it and Unblock the Notifications