ಹವಾಮಾನ ವೈಪರೀತ್ಯ: ಮಾವಿನ ಇಳುವರಿ ಕುಸಿತ, ಹಣ್ಣು ದುಬಾರಿ
ಚಿಕ್ಕಬಳ್ಳಾಪುರ, ಮೇ 15: ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ಹವಾಮಾನ ದಲ್ಲಿ ಉಂಟಾಗಿರುವ ವೈಪರೀತ್ಯದಿಂದಾಗಿ ಮಾವಿನ ಇಳುವರಿ ಕುಸಿತ ಕಂಡಿದೆ. ಇದರಿಂದಾಗಿ ಗ್ರಾಹಕರಿಗೆ ಮಾವಿನ ಹಣ್ಣು ದುಬಾರಿಯಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಲ್ಲಿ ಮಾವು ಮಾರುಕಟ್ಟೆಗೆ ಬರಲಿದೆ. ಇದಕ್ಕೂ ಮೊದಲು ರಾಮನಗರ ಮಾವಿನ ಹಣ್ಣು ಮಾರುಕಟ್ಟೆಗೆ ಕಾಲಿಟ್ಟಿದ್ದು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಮಳೆ, ಗಾಳಿ ಹೆಚ್ಚಿದ್ದು ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ.

ಮಾರುಕಟ್ಟೆಯಲ್ಲಿ ರಾಮನಗರ ಹಣ್ಣಿಗೆ ಹೆಚ್ಚು ಬೆಲೆ ಇರುವುದನ್ನು ಕಂಡ ರೈತರು ಈ ಬಾರಿ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಹವಾಮಾನದ ವೈಪರೀತ್ಯದಿಂದ ಮಾವು ಬೆಳೆಗಾರರು ಈಗ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಬದಾಮಿ, ರಸಪುರಿ, ಸೇಂದೂರ, ಮಲ್ಲಿಕ, ನೀಲಂ ಹಾಗೂ ತೋತಾಪುರಿ ತಳಿಯ ಮಾವು ಹೆಚ್ಚು ಅವಕ ಆಗುತ್ತಿದೆ. ಬೈಗನ್‌ಪಲ್ಲಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.
ಮಲ್ಲಿಕ, ಮಲಗೋವ ಮತ್ತಿತರ ತಳಿಗಳ ಮಾವು ನಂತರದಲ್ಲಿ ಇಳುವರಿ ಆಗಲಿವೆ. ಬದಾಮಿ, ರಸಪುರಿ, ಸೇಂದೂರ, ಬೇನಿಶ ಹೆಚ್ಚಾಗಿ ಹೊರ ರಾಜ್ಯ ಹಾಗೂ ವಿದೇಶಗಳಿಗೂ ರಫ್ತು ಆಗುತ್ತದೆ. ಹಿಂದಿನ ವರ್ಷ ಸಹ ಮಾವಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದ ಕಾರಣ ಬೆಲೆ ಸಹ ಅಧಿಕವಾಗಿತ್ತು.
ಕಾಯಿ ಗುಣಮಟ್ಟ ಹೆಚ್ಚಿಸಲು ಕವರ್ ಅಳವಡಿಕೆ
ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಮಾವನ್ನು ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಬೆಳೆಗಾರರು ಗಿಡದಲ್ಲೇ ಗುಣಮಟ್ಟ ಹೊಂದಿದೆ. ಕಾಯಿಯನ್ನು ರಕ್ಷಣೆ ಮಾಡಲು ಪ್ರೋಟ್ ಕವರ್ ಅಳವಡಿಸುವ ಮೂಲಕ ಗುಣಮಟ್ಟದ ಫಸಲು ಬೆಳೆಯಲು ಒತ್ತು ನೀಡಿದ್ದಾರೆ. ಕವರ್ ಕಟ್ಟುವುದರಿಂದ ಕಾಯಿಯ ಮೇಲೆ ಮಚ್ಚೆ, ಹೂಜಿ ರೋಗ ನಿಯಂತ್ರಿಸಬಹುದಾಗಿದೆ.

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
ಮಾರಕಟ್ಟೆಯಲ್ಲಿ ಬದಾಮಿ ಕೆಜಿಗೆ 200 ರಿಂದ 250ರೂ ರಾಜಗಿರ ಕೆಜಿ 70ರಿಂದ 150, ತೋತಪುರಿ ಕೆಜಿ 100 ರೂಪಾಯಿಗೆ ಮಾರಾಟವಾಗುತ್ತಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಬೆಳೆಯುವ ಬದಾಮಿ, ಮಲ್ಲಿಕ, ರಸಪುರಿಗೆ ಬೇಡಿಕೆ ಹೆಚ್ಚಿರುತ್ತದೆ. ಇದರಿಂದಾಗಿ ರಫ್ತು ಗುಣಮಟ್ಟ ಹೊಂದಿದೆ.
ಈ ಬಾರಿ ಹೊರ ರಾಜ್ಯದ ವ್ಯಾಪಾರಸ್ಥರು ಹೆಚ್ಚಾಗಿ ಆಗಮಿಸಲಿದ್ದು ಹೆಚ್ಚು ಬೆಲೆ ಸಿಗಲಿದೆ. ತೋತಮರಿ ತಳಿಯು ಹೆಚ್ಚಾಗಿ ಜ್ಯೂಸ್ ಹಾಗೂ ತಿರುಳು ತೆಗೆಯುವುದಕ್ಕೆ ಹೋಗುವುದರಿಂದ ಜ್ಯೂಸ್ ಫ್ಯಾಕ್ಟರಿ ಮಾಲೀಕರು ಜುಲೈ ತಿಂಗಳಿಂದ ಮಾವು ಖರೀದಿಗೆ ಮಾರುಕಟ್ಟೆಗೆ ಆಗಮಿಸಲಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಂತರ ಅತಿ ಹೆಚ್ಚು ಮಾವು ಬೆಳೆಯನ್ನು ಚಿಕ್ಕಬಳ್ಳಾಪುರದಲ್ಲಿ ಬೆಳೆಯುತ್ತಾರೆ. ಪ್ರತಿ ವರ್ಷ 14 ಸಾವಿರ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು 10ರಿಂದ 15 ಲಕ್ಷ ಟನ್‌ನಷ್ಟು ಮಾವು ಉತ್ಪಾದನೆಯಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಇಳುವರಿ ಕುಸಿಯುವ ಆತಂಕ ಬೆಳೆಗಾರರಲ್ಲಿದೆ. ಈ ಬಾರಿ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಮಾರುಕಟ್ಟೆಗೆ ಬದಾಮಿ, ರಸಪುರಿ, ಸೇಂದೂರ ಹಾಗೂ ತೋತಾಪುರಿ ತಳಿಯ ಮಾವು ಹೆಚ್ಚು ಅವಕ ಆಗುತ್ತಿದೆ. ಬೈಗನ್‌ಪಲ್ಲಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಮಲ್ಲಿಕ, ಮಲಗೋವ ಮತ್ತಿತರ ತಳಿಗಳ ಮಾವು ನಂತರದಲ್ಲಿ ಅವಕ ಆಗಲಿವೆ. ಇವುಗಳ ಆವಕ ಹೆಚ್ಚಾದರೂ ಗ್ರಾಹಕರಿಗೆ ಸಿಗುವ ಹಣ್ಣಿನ ಬೆಲೆ ಇಳಿಯುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವರ್ತಕರು.
ಮಾವಿನ ಗಿಡಗಳಲ್ಲಿ ಹೂವು ಬಿಡುವ ಸಮಯದಲ್ಲೂ ಸಹ ಹವಾಮಾನ ಬದಲಾವಣೆಯಿಂದ ಮಳೆ ಹೆಚ್ಚಾಯಿತು. ಇದರಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೂದಿ ರೋಗ, ಕೀಟ ಬಾಧೆ ಕಾಣಿಸಿಕೊಂಡಿತು. ನಂತರ ಹವಾಮಾನದಲ್ಲಿ ಉಂಟಾದ ವೈಪರೀತ್ಯದಿಂದಾಗಿ ಮಚ್ಚೆರೋಗ ಕಾಣಿಸಿಕೊಂಡಿದೆ ಎಂದು ಮಾವು ಬೆಳೆಗಾರ ಬೊಮ್ಮಗಾನಹಳ್ಳಿ ಬಿ.ಪಿ.ಎಲ್. ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮಾವಿನ ಇಳುವರಿ ಕಡಿಮೆಯಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗಲಿದ್ದು ರೈತರ ಆದಾಯ ಹೆಚ್ಚಾಗುತ್ತದೆ. ಹೊರ ರಾಜ್ಯಗಳ ವ್ಯಾಪಾರಿಗಳು ಈಗಾಗಲೇ ನಮ್ಮನ್ನು ಸಂಪರ್ಕಿಸಿ ಮಾವಿನ ಹಣ್ಣಿಗಾಗಿ ಬೇಡಿಕೆಯಿಟ್ಟಿದ್ದಾರೆ. ರಾಮನಗರ ಜಿಲ್ಲೆಯ ಹಣ ಈ ಕಡೆಗೆ ಬರುವುದರಿಂದ ಈ ಭಾಗದ ಹಣ್ಣಿಗೆ ಬೇಡಿಕೆ ಇದ್ದೆ ಇರುತ್ತದೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications