ನಾನು ಈಗಲೂ ಸಿದ್ದರಾಮಯ್ಯ ಬೆಂಬಲಿಗ: ಅನರ್ಹ ಶಾಸಕ
ಚಿಕ್ಕಬಳ್ಳಾಪುರ, ಅಕ್ಟೋಬರ್ 02: ಸಿದ್ದರಾಮಯ್ಯ ಮನವಿಗೆ ವ್ಯತಿರಿಕ್ತವಾಗಿ ರಾಜೀನಾಮೆ ನೀಡಿದ್ದ ಅನರ್ಹ ಶಾಸಕ ಡಾ.ಕೆ.ಸುಧಾಕರ್, 'ನಾನು ಈಗಲೂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ' ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಭಾ ಕ್ಷೇತ್ರ ಉಪಚುನಾವಣೆ ನಿಮಿತ್ತ ಪ್ರಚಾರ ನಡೆಸಿದ ಅವರು, 'ಸಿದ್ದರಾಮಯ್ಯ ಬೆಂಬಲಿಗನಾಗಿದ್ದೆ, ಈಗಲೂ ಸಿದ್ದರಾಮಯ್ಯ ಬೆಂಬಲಿಗನೇ ಆದರೆ ಮೈತ್ರಿ ಸರ್ಕಾರದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದ ಕಾರಣ ರಾಜೀನಾಮೆ ನೀಡಿದೆ' ಎಂದು ರಾಜೀನಾಮೆಗೆ ಕಾರಣ ನೀಡಿದ್ದಾರೆ.
37 ಸ್ಥಾನ ಗೆದ್ದಿದ್ದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ತಪ್ಪು ಮಾಡಿದೆವು, ಕಾಂಗ್ರೆಸ್ಗೆ ಸಿಎಂ ಸ್ಥಾನ ಸಿಗಬೇಕಿತ್ತು, ಸಿಎಂ ಸ್ಥಾನ ಕೊಟ್ಟ ಕಾಂಗ್ರೆಸ್ಗೆ ಋಣವಾಗಿ ಇರುವ ಬದಲಿಗೆ, ಕಾಂಗ್ರೆಸ್ ಶಾಸಕರನ್ನೇ ಕುಮಾರಸ್ವಾಮಿ ಟಾರ್ಗೆಟ್ ಮಾಡಿದರು ಎಂದು ಸುಧಾಕರ್ ಹೇಳಿದರು.

ಮೈತ್ರಿ ಸರ್ಕಾರದ ಆಡಳಿತ ವಿಫಲತೆ ಮತ್ತು ಅಭಿವೃದ್ಧಿಯ ವಿಫಲತೆಯಿಂದಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆ ಆಗಿದ್ದ ಸುಧಾಕರ್ ಅವರು ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಕ್ಷಾಂತರ ತಡೆ ಕಾಯ್ದೆ ಅಡಿ ಅವರನ್ನು ಅನರ್ಹಗೊಳಿಸಲಾಗಿದೆ. ಪ್ರಸ್ತುತ ಅವರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ.
-
ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ -
ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ -
Mohsina Kidwai: ಕೇಂದ್ರ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನ, ಗಣ್ಯರ ಸಂತಾಪ -
ಉಪಚುನಾವಣೆ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರಕ್ಕೆ ಜನ ಹೇಳುವ 'ಟಾಟಾ..ಟಾಟಾ..ಬೈ ಬೈ ಎಲೆಕ್ಷನ್': ಆರ್.ಅಶೋಕ್ ಭವಿಷ್ಯ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka Bypolls: ಇಂದು ದಾವಣಗೆರೆ ದಕ್ಷಿಣ-ಬಾಗಲಕೋಟೆ ಉಪಚುನಾವಣೆ ಮತದಾನ: ಪ್ರತಿಷ್ಠೆಯ ಕಣದಲ್ಲಿ ಗೆಲುವು ಯಾರಿಗೆ? -
ವಿಶ್ವ ಆರೋಗ್ಯ ದಿನ 2026: ಸ್ವಸ್ಥ ಕರ್ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ನೀಡಿದ 'ಆರೋಗ್ಯ ಭಾಗ್ಯ'ಗಳ ಪಟ್ಟಿ ಇಲ್ಲಿದೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ












Click it and Unblock the Notifications