ಚಿಕ್ಕಬಳ್ಳಾಪುರದಲ್ಲಿ ನಾನು ಮಾಡಿದ ಅಭಿವೃದ್ಧಿ ಮಾತನಾಡುತ್ತಿದೆ-ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ, ಏಪ್ರಿಲ್‌ 28: ಕೆರೆಗಳಲ್ಲಿ ತುಂಬಿರುವ ನೀರು ನೋಡಿದರೆ ಸುಧಾಕರ್ ಕಾಣಿಸುತ್ತಾರೆ, ರೈತರು ಬೆಳೆಯುವ ಹೂವಿನಲ್ಲಿ ಸುಧಾಕರ್ ಕಾಣಿಸಲಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಸುಧಾಕರ್ ಕಾಣಿಸಲಿದ್ದು, ನಾನು ಮಾತನಾಡುತ್ತಿಲ್ಲ, ನಾನು ಮಾಡಿದ ಅಭಿವೃದ್ಧಿ ಮಾತನಾಡುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ತಾಲೂಕಿನ ಪಟ್ರೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ಪ್ರಚಾರ ನಡೆಸಿದ ಅವರು, ತಾವು ಕ್ಷೇತ್ರದ ಪ್ರತಿಯೊಂದು ಕುಟುಂಬದ ಮನೆಯ ಸದಸ್ಯ ಎಂದುತಗಳ ಅಂತರದಿಂದ ಈ ಬಾ ತೀರ್ಮಾನಿಸಿ, ಕ್ಷೇತ್ರದ ಮತದಾರರು ಮತ ನೀಡಲು ತೀರ್ಮಾನಿಸಿದ್ದು, ಕಳೆದ ಮೂರು ಬಾರಿಗಿಂತ ಹೆಚ್ಚು ಮರಿ ಗೆಲುವು ಸಾಸಲಿರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

DR. K Sudhakar Election Campaign Chikkaballapur District Patrenahalli

ಕಾಂಗ್ರೆಸ್ ಜಾತಿ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದೆ, ಆದರೆ ಕ್ಷೇತ್ರದ ಜನರು ಜಾತಿಗೆ ಮನ್ನಣೆ ನೀಡುವುದಿಲ್ಲ. ಜಾತಿಗೆ ಹೊರತಾಗಿ ಜನ ತಮಗೆ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ, ಯುವಕರಿಗೆ ಉದ್ಯೋಗ ನೀಡುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಹಾಗಾಗಿ ಯುವಪೀಳಿಗೆ ತಮ್ಮ ಪರವಾಗಿದೆ ಎಂದು ಹೇಳಿದರು.

ಮಾತುಗಳಿಂದ ಆರೋಗ್ಯ ಸಿಕ್ಕಿದೆಯಾ, ಮಾತುಗಳಿಂದ ಕೆರೆಗಳು ತುಂಬಿವೆಯಾ, ಪ್ರಸ್ತುತ ರೈತರು ಸಂತೋಷದಿಂದ ಇದ್ದಾರೆ, ಮಹಿಳೆಯರು ಮುಖ್ಯವಾಹಿನಿಗೆ ಬರುತ್ತಿದ್ದಾರೆ, ಯುವಕರಿಗೆ ಶಿಕ್ಷಣ ನೀಡಲಾಗುತ್ತಿದೆ, ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ಪ್ರಯತ್ನ ಕಳೆದ ಹತ್ತು ವರ್ಷಗಳಿಂದ ಪ್ರಾಮಾಣಿಕವಾಗಿ ಮಾಡಲಾಗಿದ್ದು, ಈ ಪ್ರಯತ್ನ ಮುಂದುವರಿಯಲಿದೆ ಎಂದರು.

ಪಟ್ರೇನಹಳ್ಳಿ ಗ್ರಾಮ ಪಂಚಾಯತ್‌ನ್ನು ನಗರದ ಮಾದರಿಯಲ್ಲಿಯೇ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಕೈಗಾರಿಕೆಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮುಂದಿನ ಐದು ವರ್ಷದಲ್ಲಿ ಮಾಡಲಾಗುವುದು. ಪ್ರಸ್ತುತ ಶೇ.80 ರಷ್ಟು ರೈತರು ಕ್ಷೇತ್ರದಲ್ಲಿ ಹೂವು ಬೆಳೆಯುತ್ತಿದ್ದಾರೆ, ನೀರು ತಂದ ಕಾರಣ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

DR. K Sudhakar Election Campaign Chikkaballapur District Patrenahalli

ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್

ಕಾಂಗ್ರೆಸ್ ಪರಿಶಿಷ್ಟರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಇವರಿಗೆ ಮೀಸಲಾತಿ ಹೆಚ್ಚಿಸಲಿಲ್ಲ, ಆದರೆ ಮೊದಲು ಇದ್ದ ಮೀಸಲಾತಿಗೆ 101 ಜಾತಿಗಳನ್ನು ಸೇರಿಸಿದ್ದು ಕಾಂಗ್ರೆಸ್. ಇದರಿಂದ ನಿಜವಾಗಿಯೂ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಅವಕಾಶಗಳು ಕಡಿಮೆ ಆಯಿತು, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಎರಡು ಬಾರಿ ಅವರನ್ನು ಸೋಲಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

ಇಡೀ ವಿಶ್ವವೇ ಅಂಬೇಡ್ಕರ್ ಅವರ ಜಯಂತಿಯನ್ನು ವಿಶ್ವ ಜ್ಞಾನದ ದಿನವಾಗಿ ಆಚರಿಸುತ್ತಿದೆ. ಅವರ ಹೆಸರಿನಲ್ಲಿ ಅವರು ಜನಿಸಿದ ಗ್ರಾಮದಿಂದ ಪುನರುತ್ಥಾನವಾದ ಸ್ಥಳದವರೆಗೂ ಐದು ಸ್ಥಳಗಳಿಗೆ ವಿಶೇಷ ಒತ್ತು ನೀಡಿದ್ದು ಬಿಜೆಪಿ. ಕಾಂಗ್ರೆಸ್‌ನವರು ಭಾರತರತ್ನ ಪ್ರಶಸ್ತಿಗಳನ್ನು ಪ್ರಧಾನಿಗಳೇ ಪಡೆದುಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬರಬೇಕಾಯಿತು ಎಂದು ತಿರುಗೇಟು ನೀಡಿದರು.

ದಲಿತರ ಬಗ್ಗೆ ಕಾಂಗ್ರೆಸ್ ನವರಿಗೆ ಕಾಳಜಿ ಇಲ್ಲ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿದ್ದು, ಒಕ್ಕಲಿಗರಿಗೆ ಮೀಸಲಾತಿ ನೀಡಿದ್ದು ಬಿಜೆಪಿ, ಅಭಿವೃದ್ಧಿಯೇ ಬಿಜೆಪಿ ಮೂಲಮಂತ್ರ. ಅಭಿವೃದ್ಧಿಗೆ ಮತ ನೀಡಬೇಕು. ಬಾಬು ಜಗಜೀವನ್ ರಾಂ ಅವರು ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಬೇಕು ಎಂದ ಕಾರಣಕ್ಕೆ ಅವರನ್ನು ಉಚ್ಚಾಟಿಸಲಾಯಿತು. ಬಾಬು ಜಗಜೀವನ್ ರಾಂ ಅವರ ಹೆಸರು ಹೇಳಲೂ ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

DR. K Sudhakar Election Campaign Chikkaballapur District Patrenahalli

ಕಾಂಗ್ರೆಸ್‌ಗೆ ಮತ ನೀಡಿದರೆ ದೇಶ ಹಾಳು

ವಿ.ಪಿ. ಸಿಂಗ್ ಅವರು ಮಂಡಲ್ ಕಮಿಷನ್‌ ಜಾರಿಗೆ ತರುವ ಪ್ರಯತ್ನ ಮಾಡಲು ಮುಂದಾದಾಗ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಉಚ್ಛಾಟಿಸಲಾಯಿತು. ಹಿಂದುಳಿದವರು, ಪರಿಶಿಷ್ಟರು, ರೈತರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ. ಇಂತಹವರಿಗೆ ಮತ ನೀಡುವುದರಿಂದ ದೇಶ ಹಾಳಾಗಲಿದೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ವಿಶ್ವದಲ್ಲಿ ದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ ಎಂದರು.

ಕೋವಿಡ್ ನಂತರದ ದಿನಗಳಲ್ಲಿ ಆರ್ಥಿಕ ಪುನಶ್ಚೇತನ ಆಗಿರುವ ದೇಶ ಭಾರತ, ಶಕ್ತಿಯುತ ಭಾರತವನ್ನು ನಿರ್ಮಾಣ ಮಾಡುವ ಕನಸು ಕಾಣುತ್ತಿರುವ ಯುವಕರು ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಮೋದಿ ಅವರ ಕೈ ಬಲಪಡಿಸಿದಂತಾಗುತ್ತದೆ. ಮೋದಿ ಅವರು ಯಾವ ರೀತಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ ಎಂದರು.

ಕೋವಿಡ್ ಲಸಿಕೆ ನೀಡಿ, ಜನರ ಜೀವ ಉಳಿಸಿದ್ದು ಬಿಜೆಪಿ ಸರ್ಕಾರ

ಕೋವಿಡ್ ಲಸಿಕೆ ನೀಡಿ, ಜನರ ಜೀವ ಉಳಿಸಿದ್ದು ಬಿಜೆಪಿ ಸರ್ಕಾರ, ಪಟ್ರೇನಹಳ್ಳಿಯಲ್ಲಿ ಸುಸಜ್ಜಿತ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಾಗುವುದು. ನಿವೇಶನಗಳನು ಉಚಿತವಾಗಿ ನೀಡಲಾಗಿದೆ. ಇದರಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಹಾಗಾಗಿ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು, ತಮ್ಮ ಗೆಲುವಿನ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರ ಮತ್ತು ನೀವು ಗೆಲ್ಲಬೇಕು ಎಂದು ಸುಧಾಕರ್‌ ಮನವಿ ಮಾಡಿದರು.

ಪ್ರಸ್ತುತ ಕ್ಷೇತ್ರದಲ್ಲಿ ಚುನಾವಣೆಗಳು ಅಭಿವೃದ್ಧಿ ಮತ್ತು ಮಾತಿನ ನಡುವೆ ನಡೆಯುತ್ತಿವೆ. ಯುವಕರು ತಮ್ಮನ್ನು ನಂಬಿ ಮತ ನೀಡುವ ವಿಶ್ವಾಸ ಇದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಿಯ ಬಗ್ಗೆ ಮಾತನಾಡಿರುವುದು ಸರಿಯಲ್ಲ. 140 ಕೋಟಿ ಭಾರತೀಯರನ್ನು ಅವಮಾನಿಸಿದ್ದಾರೆ. ವಿಶ್ವ ನಾಯಕ ಎಂಬ ಖ್ಯಾತಿಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ ಎಂದರು.

ವಿಶ್ವ ಮನ್ನಣೆ ಪಡೆದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಅವರ ರಾಜಕೀಯ ದಿವಾಳಿತನ ಮತ್ತು ಅವರ ವ್ಯಕ್ತಿತ್ವ ತೋರಿಸುತ್ತದೆ. ಇಂತಹ ಮಾತು ಖರ್ಗೆ ಅವರಿಂದ ನಿರೀಕ್ಷಿಸರಲಿಲ್ಲ. ಐದು ದಶಕದ ರಾಜಕೀಯ ಅನುಭವ ಇದ್ದು, ಇಂತಹ ಮಾತು ಸರಿಯಲ್ಲ. ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ ಸರಿಯಲ್ಲ, ವಿಷಯಾಧಾರಿತ ಟೀಕೆಗಳಿರಬೇಕು. ಇಂತಹ ಹೇಳಿಕೆಗಳು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾರಕ. ಮೋದಿ ಅವರಿಗೆ ಇದರಿಂದ ಜನಪ್ರಿಯತೆ ಆಗಲಿದೆ ಹೊರತು ಕಾಂಗ್ರೆಸ್‌ಗೆ ಉಪಯೋಗವಿಲ್ಲ. ಇದರಿಂದ ಶೇ.2ರಿಂದ ಶೇ.3 ರಷ್ಟು ಮತ ರಾಜ್ಯದಲ್ಲಿ ಹೆಚ್ಚಾಗಲಿದೆ ಎಂದು ಸುಧಾಕರ್ ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+