Chikkaballapur: ಚಿಕ್ಕಬಳ್ಳಾಪುರದ 28 ಜೋಡಿ ಗ್ರಾಮಗಳ ಪಹಣಿ ವಿತರಣೆ: ದಶಕಗಳ ಕನಸು ನನಸು

ಚಿಕ್ಕಬಳ್ಳಾಪುರ ಸೆಪ್ಟೆಂಬರ್ 20: ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ವತಿಯಿಂದ "ಜೋಡಿ ಗ್ರಾಮಗಳ" ಪಹಣಿ ವಿತರಣಾ ಸಮಾರಂಭವನ್ನು ಇಂದು ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಹಲವು ದಶಕಗಳ ಕನಸು ಇಂದು ನನಸಾಗುತ್ತಿದೆ.

ಜಿಲ್ಲೆಯ 28 ಜೋಡಿ ಗ್ರಾಮ ಗಳಲ್ಲಿನ ಜಮೀನಿನ ಮಾಲೀಕರು ಎದುರಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗುತ್ತಿದೆ. ಒಂದು ವರ್ಷದ ಹಿಂದೆ ಜೋಡಿ ಗ್ರಾಮಗಳ ಸಮಸ್ಯೆ ಕಂಡು ಪರಿಹಾರಕ್ಕೆ ಸೂಚಿಸಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೆ.20ರಂದು ಆ ಜೋಡಿ ಗ್ರಾಮಗಳ ಪಹಣಿ ವಿತರಣೆ ಮಾಡುತ್ತಿದ್ದಾರೆ.

Distribution of Pahani to 28 pairs of villages in Chikkaballapur A decades long dream come true

ಕಾರ್ಯಕ್ರಮದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಸುಧಾಕರ್ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉಪಸ್ಥಿತಿಯನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ಇ. ಪ್ರದೀಪ್ ಈಶ್ವರ್ ಅವರು ವಹಿಸಲಿದ್ದಾರೆ.

ಜಿಲ್ಲೆಯ ಕಂದಾಯ ಶಾಖೆಯಲ್ಲಿ ಬಾಕಿ ಇದ್ದ ಎಲ್ಲ 28 ಜೋಡಿ ಗ್ರಾಮಗಳ ಹಕ್ಕು ದಾಖ ಲೆಗಳನ್ನು ಪರಿಶೀಲಿಸಿ ಪರಸ್ಪರ ಸಂಬಂಧಪಟ್ಟ ನೋಂದಣಿಯನ್ನು ಸೃಜನೆ ಮಾಡಲಾಗಿದ್ದು, ಆ ಗ್ರಾಮಗಳ ಒಟ್ಟು 5812 ಪಹಣಿಗಳ ಪೈಕಿ 1879 ಪಹಣಿ ಗಳನ್ನು ಇಂಡೀಕರಿಸಲಾಗಿದೆ. ಬಹು ಮಾಲೀ ಕತ್ವ ಹೊಂದಿರುವ ಹಾಗೂ ವಿಸ್ತೀರ್ಣ ವ್ಯತ್ಯಾಸ ಹೊಂದಿರುವ ಹಿಡುವಳಿದಾರರಗಳಿಂದ ಒಪ್ಪಿಗೆ ಪತ್ರ, ವಿಚಾರಣೆ ಕೈಗೊಂಡು ಪಹಣಿಗಳ ಸೃಜನೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ.ಸುಧಾಕರ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಂ. ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ವಿಧಾನ ಪರಿಷತ್ತಿನ ಶಾಸಕರಾದ ಚಿದಾನಂದ ಎಂ. ಗೌಡ, ಎಂ.ಎಲ್. ಅನಿಲ್ ಕುಮಾರ್, ಡಿ.ಟಿ. ಶ್ರೀನಿವಾಸ್, ಚಿಕ್ಕಬಳ್ಳಾಪು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಿ.ಬೃಂದಾ ರವರು ಭಾಗವಹಿಸಲಿದ್ದಾರೆ.

Distribution of Pahani to 28 pairs of villages in Chikkaballapur A decades long dream come true

ವರ್ಷದ ಹಿಂದೆ ಸೂಚನೆ: ಸೆ.20, 2023ರಲ್ಲಿ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ಕಂದಾಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಆ ಸಂದರ್ಭದಲ್ಲಿ ಜಿಲ್ಲೆ ಯಲ್ಲಿ ಸಮಸ್ಯೆಯಿರುವ ಜೋಡಿ ಗ್ರಾಮ ಗಳನ್ನು ಗುರುತಿಸಿ, ಅತಿ ಶೀಘ್ರವಾಗಿ ಅವಶ್ಯಕ ದಾಖಲೆಗಳನ್ನು ಪರಿಶೀಲಿಸಿ ರೈತರಿಗೆ ಪಹಣಿಗೆ ಳನ್ನು ಸೃಜನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ಪರಸ್ಪರ ಸಂಬಂಧ ನೋಂದಣಿ ಇಲ್ಲದ ಗ್ರಾಮಗಳಿಗೆ ಗೋಲ್ ನಕ್ಷೆ, ಟಿಪ್ಪಣಿ ಪುಸ್ತಕ, ಪ್ರಸ್ತುತ ಚಾಲ್ತಿಯಲ್ಲಿನ ಗ್ರಾಮ ನಕಾಶೆ, ಇತರೆ ಕಂದಾಯ ಮತ್ತು ಸರ್ವೆ ದಾಖಲೆ ಹಾಗೂ ಅವಶ್ಯವಿದ್ದಲ್ಲಿ ಸ್ಥಳ ಪರಿಶೀಲನೆ ಮಾಡಿ ಕೊರಿ ಲೇಷನ್ ರಿಜಿಸ್ಟರ್ ತಯಾರಿಸಲು ಭೂಮಾಪಕ ರನ್ನು ನಿಯೋಜಿಸಲಾಗಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯ 28 ಜೋಡಿ ಗ್ರಾಮಗಳ ಸುಮಾರು 12,503 ಎಕರೆ ಜಮೀನಿಗೆ ಸಂಬಂಧಿಸಿದಂತೆ 5812 ಪಹಣಿಗಳನ್ನು ಸೃಜನೆ ಮಾಡುವ ಕೆಲಸಗಳು ಆಗುತ್ತಿವೆ. ಜೋಡಿ ಗ್ರಾಮಗಳಲ್ಲಿ ಕೊರಿಲೇಷನ್ ರಿಜಿಸ್ಟರ್ ಲಭ್ಯವಿಲ್ಲದ ಕಾರಣ ಗ್ರಾಮಸ್ಥರಿಗೆ ಜಮೀನಿನ ದಾಖಲೆಗಳು ಸಿಗದೆ ಅನಾನುಕೂಲ ವಾಗಿತ್ತು. ಈ ಸಂಬಂಧ ವರ್ಷದ ಹಿಂದೆ ಕಂದಾಯ ಸಚಿವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದರು. ಈಗ ಪಹಣಿಗಳು ಸೃಜನೆಯಾಗಿದ್ದು, ಜಮೀನಿನ ಮಾಲೀಕರು 11ಇ ಸ್ಕೆಚ್, ಕ್ರಯ ಸೇರಿದಂತೆ ಇನ್ನಿತರ ಪ್ರಕ್ರಿಯೆ ನಡೆಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ ಅಭಿಪ್ರಾಯ ಪಟ್ಟಿದ್ದಾರೆ.

ಏನಿದು ಜೋಡಿ ಗ್ರಾಮ?

ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ರಾಜರು ಗ್ರಾಮದಲ್ಲಿ ಉನ್ನತ ಸೇವೆ ಸಲ್ಲಿಸಿದವರಿಗೆ ಬಳುವಳಿಯಾಗಿ ಇಡೀ ಗ್ರಾಮಗಳನ್ನು ಉಚಿತವಾಗಿ ನೀಡಿರು ತ್ತಾರೆ. ಇನಾಂ ಗ್ರಾಮಗಳನ್ನು ಜೋಡಿ ಗ್ರಾಮ ಗಳೆಂದು ಕರೆಯುತ್ತಾರೆ.

ಸ್ವಾತಂತ್ರ್ಯಾ ನಂತರ ಇನಾಂ ಅಬಾಲಿಷನ್ ಕಾಯಿದೆ 1954ರಂತೆ ಉಳುಮೆ ಮಾಡುತ್ತಿದ್ದ ರೈತರಿಗೆ ಜಮೀನು ಮಂಜೂರು ಮಾಡಿ, ಅಳತೆ ಕಾರ್ಯ ಮಾಡಿ ಹಳೆ ಸರ್ವೆ ನಂಬ‌ರ್ ಗಳಿಗೆ ಹೊಸ ಸರ್ವೆ ನಂಬರ್ಗಳನ್ನು ಒಳಗೊಂಡಂತೆ ಕೊರಿಲೇಷನ್ ರಿಜಿಸ್ಟರ್ ನಿರ್ವಹಿಸಿ, ಅದರಂತೆ ಪಹಣಿ ಇಂಡೀಕರಣ ಮಾಡಲಾಗಿದೆ.

ಕೆಲವು ಗ್ರಾಮಗಳ ಕೊರಿಲೇಷನ್ ರಿಜಿಸ್ಟರ್ ಅಲಭ್ಯತೆಯಿಂದಾಗಿ ಸುಮಾರು 60 ವರ್ಷ ಗಳಿಂದಲೂ ಪಹಣಿಗಳಲ್ಲಿ ಹಳೇ ಸರ್ವೆ ನಂಬರ್‌ಗಳೇ ಇದ್ದು, ಸರ್ವೆ ದಾಖಲೆಗಳಾದ ಆಕಾರಬಂದ್, ಟಿಪ್ಪಣಿಗಳಲ್ಲಿ ಹೊಸ ಸರ್ವೆ ನಂಬರ್ ಇರುತ್ತದೆ.

ಇದರಿಂದಾಗಿ ಆ ಗ್ರಾಮ ಗಳ ರೈತರಿಗೆ 11ಇ ನಕ್ಷೆ ಪಡೆಯಲು, ವಿಭಾಗ ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ ಜಿಲ್ಲೆಗೆ ಸಂಬಂಧಿಸಿದಂತೆ 28 ಜೋಡಿ ಗ್ರಾಮಗಳಿಗೆ ಕೊರಿಲೇಷನ್ ರಿಜಿ ಸ್ಟರ್ ಲಭ್ಯವಿಲ್ಲದ ಕಾರಣ ಪಹಣಿಗಳಲ್ಲಿ ಹಳೇ ಸರ್ವೆನಂಬರ್ಗಳೇ ಮುಂದುವರಿದಿದ್ದವು.

ಯಾವುವು ಆ ಜೋಡಿ ಗ್ರಾಮಗಳು?

* ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ ಮುತ್ತೂರು, ತೊಟ್ಲಗಾನಹಳ್ಳಿ, ಫಕೀರನಹೊಸಹಳ್ಳಿ, ಕಸಬಾ ಹೋಬಳಿಯ ಚಾಗೆ. ಚನ್ನಹಳ್ಳಿ

* ಚಿಂತಾಮಣಿ ತಾಲೂಕು ಚಿಲಕಲನೇರ್ಪು ಹೋಬಳಿಯ ಮರಬಹಳ್ಳಿ, ಗಾಜಲವಾರಹಳ್ಳಿ, ಗುಂಪಲ್ಲಿ, ರಂಗೇನಹಳ್ಳಿ, ಚಿಕ್ಕಕುರುಬರಹಳ್ಳಿ, ಅಗ್ರಹಾರಹಳ್ಳಿ ಹಾಗೂ ಕೈವಾರ ಹೋಬಳಿಯ ಹೊಸಹಳ್ಳಿ ಹಾಗೂ ಸುಬ್ಬರಾಯನಪೇಟೆ.

* ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಮನ್ನಾರಪುರ, ಗೊಲ್ಲಪಡೆ, ನಶಿಕುಂಟೆ ಹೊಸೂರು. ಅಂದಾರ್ಲಹಳ್ಳಿ, ಬಂಡಹಳ್ಳಿ, ಚಿಕ್ಕಮುದ್ದೇನಹಳ್ಳಿ, ಸೊಣ್ಣಾಪುರ, ಕಣಿವೆನಾರಾಯಣಪುರ.

* ಗೌರಿಬಿದನೂರು ತಾಲೂಕು

ನಗರಗೆರೆ ಹೋಬಳಿಯ ಕೃಷ್ಣರಾಜಪುರ, ಮುದ್ದಲಹಳ್ಳಿ, ಕೋಡಿಹಳ್ಳಿ ಹುಣಸೇನಹಳ್ಳಿ ಹಾಗೂ ಕಸಬಾ ಹೋಬಳಿಯ ಕೋನಾಪುರ,

*ಬಾಗೇಪಲ್ಲಿ ತಾಲೂಕು:- ಮಿಟ್ಟೇಮರಿ ಹೋಬಳಿಯ ಕನ್ನಂಪಲ್ಲಿ, ಚೇಳೂರು ಹೋಬಳಿಯ ಮುದ್ದಲಪಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+