Get Updates
Get notified of breaking news, exclusive insights, and must-see stories!

ಗಗನಕ್ಕೇರಿದ ಕೂಲಿ ದರ: ರೈತರ ಕೃಷಿ ಕಾರ್ಯಗಳಿಗೆ ವರವಾದ ಸೈಕಲ್ ಗಾಲಿ ಎಡೆಕುಂಟೆ

ಚಿಕ್ಕಬಳ್ಳಾಪುರ, ಆಗಸ್ಟ್‌ 17: ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರನ್ನು ಹುಡುಕುವುದು ಹರಸಾಹಸ ಎನಿಸಿದೆ. ಬಾಡಿಗೆ ಎತ್ತುಗಳನ್ನು ಪಡೆದು, ಕೃಷಿ ಕೂಲಿ ಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿದೆ. ರೈತರ ಇಂತಹ ಕಷ್ಟಗಳಿಗೆ ಕೃಷಿ ಇಲಾಖೆಯ ಸೈಕಲ್ ಎಡೆ ಕುಂಟೆ ಪರಿಹಾರವಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ದುಡಿಯುವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಸದ್ಯ ಬೆರಳಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಬಾಡಿಗೆ ಎತ್ತುಗಳನ್ನು ಪಡೆದು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ದಿನಗೂಲಿ ನೀಡಿ ಎಡೆಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಬಹಳ ಕಷ್ಟಕರವಾಗಿದೆ. ಇನ್ನು ಎಡೆಕುಂಟೆ ಎಂದರೆ ಒಂದು ಸಣ್ಣ ಕೃಷಿ ಉಪಕರಣ, ಮುಖ್ಯ ಬೆಳೆಗೆ ಹಾನಿಯಾಗದಂತೆ ಹೊಲದಲ್ಲಿ ಕಳೆ ತೆಗೆಯಲು ಬಳಸಲಾಗುತ್ತದೆ.

cycle-gali-edekunte

ಎತ್ತುಗಳು ಹಾಗೂ ಕೂಲಿ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ರೈತರು ಬೆಳೆ ನಡುವಿನ ಕಳೆ ಕೀಳಲು ರೈತರಿಗಾಗಿ ಕೃಷಿ ಇಲಾಖೆಯು ಹೊಸ ಉಪಕರಣಗಳನ್ನು ತಯಾರಿಸಿದ್ದು, ಸೈಕಲ್‌ಗೆ ಎಡೆಕುಂಟೆ ಜೋಡಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.

ಆಧುನಿಕ ಕೃಷಿ ಪದ್ಧತಿಯಿಂದ ವಿರಳವಾದ ಎತ್ತುಗಳು

ಸಾಮಾನ್ಯವಾಗಿ ಶೇಂಗಾ, ಜೋಳ, ತೊಗರಿ ಸೀರಿದಂತೆ ಇನ್ನಿತರೆ ವಿವಿಧ ಬೆಳೆಗಳ ಸಾಲುಗಳಲ್ಲಿ ಕಳೆ ಸಸ್ಯ ತೆಗೆಯಲು ಎಡೆಕುಂಟೆ ಹೊಡೆಯಲು ಎತ್ತುಗಳು ಬೇಕೇ ಬೇಕು. ಆದರೆ ಹಳ್ಳಿಗಳಲ್ಲಿ ಎತ್ತುಗಳು ಸಿಗುವುದು ಕಷ್ಟವಾಗಿರುವುದರಿಂದ ಕೆಲ ರೈತರು ಹಳೆ ಸೈಕಲ್‌ನ್ನೇ ಎತ್ತುಗಳಿಗೆ ಪರ್ಯಾಯವಾಗಿ ಮಾಡಿಕೊಂಡು ಎಡೆಕುಂಟೆ ಹೊಡೆಯುತ್ತಿರುವುದನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದಾಗಿದೆ.

cycle-gali-edekunte

ಕೆಲ ವರ್ಷಗಳ ಹಿಂದೆ ಯಾವ ಹಳ್ಳಿಗೆ ಹೋದರೂ ರೈತನ ಮನೆಯೊಂದಕ್ಕೆ ಒಂದು ಜೊತೆ ಎತ್ತುಗಳು ಹಾಗೂ ಇತರೆ ದನಕರುಗಳು ಇರುತ್ತಿದ್ದವು. ಆದರೆ ಆಧುನಿಕ ಕೃಷಿ ಪದ್ಧತಿ ಹಾಗೂ ಬಗೆಬಗೆಯ ಯಂತ್ರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ನಂತರ ಯಾವ ಗ್ರಾಮದ ಯಾವ ರೈತನ ಮನೆಯಲ್ಲಿ ಎತ್ತುಗಳಿವೆ ಎಂದು ಹುಡುಕುವಂತಾಗಿದೆ. ಹೀಗಾಗಿ ಬೇಸಾಯ ಮತ್ತು ಬಿತ್ತನೆ ಟ್ರ್ಯಾಕ್ಟರ್‌ನಲ್ಲಿ ಮಾಡುತ್ತಿರುವ ರೈತರು ಬೆಳೆಗಳ ಸಾಲಿನಲ್ಲಿ ಕಳೆ ತೆಗೆಯಲು ಎತ್ತುಗಳು ಸಿಗದೇ ಪರದಾಟ ನಡೆಸುವಂತಾಗಿದೆ.

ಊರಿಗೆಲ್ಲ ಒಬ್ಬನೇ ಒಡೆಯ ಎಂಬಂತೆ ಒಂದು ಊರಿನಲ್ಲಿ ನೂರಾರು ಎಕರೆ ಜಮೀನಿದ್ದರೂ ಒಂದು ಅಥವಾ ಎರಡು ಜೊತೆ ಎತ್ತುಗಳಿರುವುದರಿಂದ ಎಲ್ಲರೂ ಕರೆಯುತ್ತಾರೆ ಹಾಗಾಗಿ ಸಮಯಕ್ಕೆ ಬರುವುದಿಲ್ಲ. ಬಂದರೂ ಒಂದು ದಿನ ಎತ್ತುಗಳು ಹಾಗೂ ಇಬ್ಬರು ಗಂಡಾಳುಗಳ ಕೂಲಿ ಸೇರಿ ಕನಿಷ್ಠ 2 ಸಾವಿರ ಕೊಡಬೇಕು. ಕಳೆ ತೆಗೆಯಲು ಹೆಣ್ಣಾಳಿಗೆ 300 ರೂ. ನೀಡಬೇಕು. ಇಷ್ಟು ದುಬಾರಿ ಕೂಲಿ ಕೊಟ್ಟು ಕಳೆ ತೆಗೆಸಿದರು ಬೆಳೆಯಲ್ಲಿ ಲಾಭ ಬರುವುದು ಕಷ್ಟ ಹಾಗಾಗಿ ರೈತರು ಸೈಕಲ್ಲಿನಲ್ಲಿ ಎಡೆಕುಂಟೆ ಹೊಡೆಯಲು ಮುಂದಾಗಿದ್ದಾರೆ.

cycle-gali-edekunte

ಕೃಷಿ ಇಲಾಖೆಯಲ್ಲಿ ಎಡಕುಂಟೆ ಉಪಕರಣ ಲಭ್ಯ

ಹೋಬಳಿ ಮತ್ತು ತಾಲೂಕು ವ್ಯಾಪ್ತಿಯ ಕೃಷಿ ಇಲಾಖೆಯ ಕಚೇರಿಗಳಲ್ಲಿ ಕಲ್ ಎಡಕುಂಟೆ ಉಪಕರಣಗಳು ಲಭ್ಯವಿದ್ದು, ರೈತರು ದಾಖಲೆಗಳನ್ನು ಹಾಗೂ ಒಂದಕ್ಕೆ 1500 ರೂಪಾಯಿ ಯಂತೆ ಹಣ ಪಾವತಿಸಿ ಪಡೆಯ ಬಹುದಾಗಿದೆ. ಅಲ್ಲದೆ ಸ್ಥಳೀಯವಾಗಿ ಬಿಲ್ಡಿಂಗ್ ಕೆಲಸ ಮಾಡುವ ಪರಿಣಿತರು ಕಡಿಮೆ ಬೆಲೆಗೆ ಹಳೆಯ ಸೈಕಲ್ ಗಳನ್ನು ಬಳಸಿ ಎಡೆಕುಂಟೆಗಳನ್ನು ತಯಾರಿಸುತ್ತಿದ್ದು ಸ್ಥಳೀಯ ಅವಶ್ಯಕತೆಯನ್ನು ಪೂರೈಸುತ್ತಿದ್ದಾರೆ.

ಕಡಿಮೆ ಖರ್ಚಿನಲ್ಲಿ ತಯಾರಿಸುವುದು ಹೇಗೆ?

ಮನೆಯಲ್ಲಿ ಬಳಸಿ ಮೂಲೆಯಲ್ಲಿ ನಿಲ್ಲಿಸಿರುವ ಹಳೆ ಸೈಕಲ್ ಹೊರ ತೆಗೆದು ಹಿಂದಿನ ಚಕ್ರ ಬಿಚ್ಚಿಸಿ ಪೇಡಲ್ ಮಾಡುವ ಸ್ಥಳದಲ್ಲಿ ಎಡೆಕುಂಟೆ ಅಳವಡಿಸಿ ಸೈಕಲ್ ಹ್ಯಾಂಡಲ್ ತೆಗೆದು ಸೀಟ್‌ಗೆ ಜೋಡಿಸಿ ಅದನ್ನೇ ಎತ್ತಿನ ನೋಗವನ್ನಾಗಿ ಮಾಡಿಕೊಂಡು ದಿನವೊಂದಕ್ಕೆ ಒಂದು ಎಕರೆ ಎಡೆಕುಂಟೆ ಹೊಡೆಯಲು ಅನುಕೂಲ ಮಾಡಿಕೊಳ್ಳಬಹುದುಎಂದು ರೈತ ನರಸಿಂಹಪ್ಪ ತಿಳಿಸಿದ್ದಾರೆ.

ಇನ್ನು ಹಳೆ ಸೈಕಲ್ ಮತ್ತು ಬಹುತೇಕ ಅದರ ಬಿಡಿ ಭಾಗಗಳನ್ನೇ ಈ ಉಪಕರಣಕ್ಕೆ ಬಳಸಿದ್ದಾರೆ. ಸೈಕಲ್‌ನ ಒಂದು ಚಕ್ರ, ಹ್ಯಾಂಡಲ್ ಮಾಡಿದ್ದಾರೆ. ಹ್ಯಾಂಡಲ್‌ ಶೀಟಿನ ಜಾಗದಲ್ಲಿ ವೆಲ್ಡಿಂಗ್ ಮಾಡಿ ಎರಡು ರೆಕ್ಕೆ ಕುಳ್ಳಿರಿಸಿ, ಪೈಪ್‌ಗೆ ಕುಂಟೆ ಅಳವಡಿಸುತ್ತಾರೆ. ಹಲಗು, ವೆಲ್ಡಿಂಗ್ ಮಿಷನ್, ಕರೆಂಟ್‌ ಎಲ್ಲ ಸೇರಿ ಸ್ವಲ್ಪ ಹಣ ಖರ್ಚು ಆಗುತ್ತದೆ. ಒಂಟಿ ಗಾಲಿ ದಾರಿ ತೋರಿಸಲಿಕ್ಕೆ ಬಳಸುತ್ತಾರೆ. ಹ್ಯಾಂಡಲ್ ಹಿಡಿದು ಮುಂದೆ ಸಾಗಿದರೆ, ಕೆಳಗೆ ಫಿಕ್ಸ್‌ ಮಾಡಿರುವ ಕುಂಟೆ ಭೂಮಿಯೊಳಗೆ ಹೋಗಿ ಜೋಳ, ನೆಲಗಡಲೆ , ರಾಗಿ, ತೊಗರಿ ಸೇರಿದಂತೆ ಇನ್ನಿತರ ಸಾಲು ಸಾಲು ಇರುವ ಬೆಳೆಗಳಲ್ಲಿರುವ ಕಳೆಯನ್ನು ತೆಗೆಯಲು ಸಹಕಾರಿಯಾಗುತ್ತದೆ.

ಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿರುತ್ತವೆ ಸರಿಯಾದ ಸಮಯಕ್ಕೆ ಕೂಲಿಯಾಳುಗಳು ಸಹ ಲಭ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರವು ನೂತನ ತಂತ್ರಜ್ಞಾನವನ್ನು ಬಳಸಿ ಸೈಕಲ್ ಎಡೆ ಕುಂಟೆಯನ್ನು ಹೊರತಂದಿದ್ದು, 1,500 ರೂಪಾಯಿಗೆ ಒಂದರಂತೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಬಳಸಿ ಹೊಲದಲ್ಲಿನ ಬೆಳೆಗಳ ನಡುವೆ ಇರುವ ಕಳೆಯನ್ನು ತೆಗೆಯಬಹುದು. ಈ ಕುಂಟೆ ಹಗುರವಾಗಿದ್ದು, ಒಬ್ಬರೆ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳವಾಗಿ, ಸುಲಭವಾಗಿ ಇದರಿಂದ ಕಳೆ ತೆಗೆಯಬಹುದಾಗಿದೆ ಎಂದು ಕೃಷಿ ಅಧಿಕಾರಿ ಶಂಕರಯ್ಯ ತಿಳಿಸಿದ್ದಾರೆ.

ಸಣ್ಣ ಹಾಗೂ ಅತೀ ಸಣ್ಣ ರೈತರು ಸ್ವತಃ ತಾವೇ ಸೈಕಲ್‌ನಲ್ಲಿ ಎಡೆಕುಂಟೆ ಹಾಕಿಕೊಂಡರೆ ದುಬಾರಿ ಕೂಲಿ ಕೊಡುವುದು ತಪ್ಪುತ್ತದೆ. ಸಮಯಕ್ಕೆ ಎತ್ತುಗಳು ಸಿಗದೆ ಕಳೆ ಜಾಸ್ತಿ ಬೆಳೆಯುವುದು ತಪ್ಪುತ್ತದೆ. ಜೊತೆಗೆ ಎತ್ತಿನ ಎಡೆಕುಂಟೆ ಹೊಡೆಯುವಾಗ ಕೆಲ ಸಸಿಗಳು, ಗಿಡಗಳು ಕಿತ್ತು ಬರುವುದು, ಚಿಕ್ಕ ಗಿಡಗಳು ಮಣ್ಣಿನಿಂದ ಮುಚ್ಚುವುದು ತಪ್ಪುತ್ತದೆ. ಆದರೆ, ಸೈಕಲ್ ಕುಂಟೆಯಲ್ಲಿ ಗಿಡಗಳು ಕಿತ್ತು ಬರುವುದಿಲ್ಲ. ಗಿಡಗಳು ಮಣ್ಣಿನಿಂದ ಮುಚ್ಚುವುದಿಲ್ಲ ಎಂದು ಗವಿಗುಂಟಹಳ್ಳಿ ರೈತ ಬೈಯ್ಯಣ್ಣ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+