ಅವಕಾಶಕೊಟ್ಟರೆ ಅಭಿವೃದ್ಧಿಗೆ ಶ್ರಮಿಸುವೆ: ಅಲೋಕ್ ವಿಶ್ವನಾಥ್ ಅಭಿಮತ
ಚಿಕ್ಕಾಬಳ್ಳಾಪುರ ಮಾರ್ಚ್ 12: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ನನಗೆ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದರೆ ಗೆಲ್ಲುವುದು ಖಚಿತ. ಅದೇ ರೀತಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಪುತ್ರ ಆಲೋಕ್ ವಿಶ್ವನಾಥ್ ಹೇಳಿದರು.
ಶ್ರೀ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸಮ್ಮುಖದಲ್ಲಿ ಏರ್ಪಡಿಸಿದ್ದ ವಿಶೇಷ ಹೋಮ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗೆ ನನಗೆ ಒಂದು ಅವಕಾಶ ನೀಡಿ ಪಕ್ಷದ ಹೈಕಮಾಂಡ್ ಬಳಿ ನಾನೊಂದು ಮನವಿ ಇಟ್ಟಿದ್ದೇನೆ. ಆ ಮನವಿ ಪುರಸ್ಕರಿಸಿ ನನಗೆ ಟಿಕೆಟ್ ನೀಡಿ ರೆಡ್ಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನಿಚ್ಚಳ ಬಹುಮತ ದೊಂದಿಗೆ ಅಭೂತಪೂರ್ವ ಗೆಲುವಾಗ ಲಿದೆ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗು ತ್ತೇನೆ ಎಂದು ಹೇಳಿದರು.
ದಶಕಗಳ ಕಾಲದಿಂದ ಭಾರತೀಯ ಜನತಾ ಪಕ್ಷದಲ್ಲಿಯೇ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ. ಈ ಕಾರಣದಿಂದ ಬಿಜೆಪಿ ಪಕ್ಷದಿಂದ ಲೋಕಸಭೆ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಲು ಇಚ್ಛೆಪಟ್ಟಿದ್ದೇನೆ. ಅದೇ ರೀತಿ ಪಕ್ಷ ಸೂಚಿಸುವ ಕಾರ್ಯಕ್ಕೆ ನಾನು ಬದ್ಧನಾಗಿ ಕಾರ್ಯನಿರ್ವಹಿಸುವೆ ಪಕ್ಷದ ಯಾವ ತೀರ್ಮಾನಕ್ಕೂ ನಾನು ಬದ್ಧನಾಗಿದ್ದೇನೆ ಎಂದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾ ನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ನಡೆಸಿದ ಪೂಜಾ ಕಾರ್ಯಕ್ರಮ ಗಳಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ ಬಿ. ರೆಡ್ಡಿ , ರಂಜಿತ್‌ಕುಮಾರ್, ಆನಂದ್ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications