ನಾನೇ ಬೇರೆ ನನ್ನ ಪ್ರಚಾರದ ಸ್ಟೈಲೇ ಬೇರೆ ಎಂದ ಬಿಜೆಪಿ ಅಭ್ಯರ್ಥಿ

ಚಿಕ್ಕಬಳ್ಳಾಪುರ, ನ 20: ಉಪಚುನಾವಣೆ ನಡೆಯುವ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಡಾ.ಸುಧಾಕರ್ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಬುಧವಾರ, ತಾಲೂಕಿನ ಚೀಮನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ, ಬಿಜೆಪಿ ಶಾಲು ಹಾಕಿಕೊಂಡು, ಕಾರ್ಯಕರ್ತರ ಜೊತೆಗೆ, ರಾಗಿ ಕಟಾವ್ ಮಾಡುವ ಮೂಲಕ, ಸುಧಾಕರ್ ಪ್ರಚಾರ ಮಾಡಿದ್ದಾರೆ.

ತೆನೆ ಕಟಾವ್ ಮಾಡುತ್ತಲೇ ರೈತರ ಸಮಸ್ಯೆಯನ್ನು ಆಲಿಸಿದ ಸುಧಾಕರ್, ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ರೈತ ಮಹಿಳೆ ಮಾಡಿದ ಮನವಿಗೆ, ಡಾ. ಸುಧಾಕರ್ , ತೆಲುಗು ಮತ್ತು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Chikkaballapur BJP Candidate Dr. Sudhakar Different Style Of Campaigning

ಕೆಲವು ದಿನಗಳ ಹಿಂದೆ, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ. ಸುಧಾಕರ್ ಅವರ ಆಡಿಯೋ ಸಂದೇಶವೊಂದು ಬಹಿರಂಗಗೊಂಡಿತ್ತು. ಸುಧಾಕರ್ ಅವರು ತಮ್ಮದೇ ಆದ ಟ್ರಸ್ಟ್‌ ನ ಸದಸ್ಯರೊಬ್ಬರಿಗೆ ಕಳುಹಿಸಿರುವ ಆಡಿಯೋ ಸಂದೇಶ ಇದಾಗಿತ್ತು.

'ದೊಡ್ಡ ಉಡುಗೊರೆ ನೀಡುತ್ತೇವೆಂದು ಹೇಳಿ ಜನರ ವಿಳಾಸಗಳನ್ನು ಪಡೆಯಿರಿ' ಎಂದು ಸುಧಾಕರ್ ಸಿಬ್ಬಂದಿಗೆ, ಆ ವಿಡಿಯೋದಲ್ಲಿ ಸೂಚಿಸಿದ್ದರು. ಇದು ವೈರಲ್ ಆಗಿತ್ತು ಕೂಡಾ.

"ಟ್ರಸ್ಟ್‌ನ ಸದಸ್ಯರು, ಪದಾಧಿಕಾರಿಗಳು, ಸಿಬ್ಬಂದಿಗಳು ಜನರಿಗೆ ಉಡುಗೊರೆಗಳನ್ನು ನೀಡುವುದಾಗಿ ಹೇಳಿ, ಬಿಲ್ ಮಾಡಿಸಲು ವಿಳಾಸದ ಅವಶ್ಯಕತೆ ಇದೆ ಎಂದು ಹೇಳಿ ವಿಳಾಸಗಳನ್ನು ಪಡೆಯಬೇಕು, ನಾಮಪತ್ರ ಸಲ್ಲಿಸುವ ಎರಡು ದಿನ ಮುಂಚಿತವಾಗಿ ಈ ಕೆಲಸ ಮಾಡಬೇಕು" ಎಂದು ಸುಧಾಕರ್ ಆಡಿಯೋದಲ್ಲಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+