ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿ ವಿರುದ್ಧ ಪ್ರತಿಭಟನೆ, ಪೊಲೀಸ್ ವಶಕ್ಕೆ ಯೋಗೇಂದ್ರ ಯಾದವ್

By Mahesh
|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 08: ಹೆದ್ದಾರಿ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲ ಸೂಚಿಸಲು ಬಂದಿದ್ದ ಸ್ವರಾಜ್ ಅಭಿಯಾನ್ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ತಿರುವಣ್ಣಾಮಲೈ ಜಿಲ್ಲೆಯಲ್ಲಿ ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ವರಾಜ್‌ ಇಂಡಿಯಾ - ಹೊಸ ರಾಜಕೀಯ ಪಕ್ಷ ಉದಯ ಸ್ವರಾಜ್‌ ಇಂಡಿಯಾ - ಹೊಸ ರಾಜಕೀಯ ಪಕ್ಷ ಉದಯ

ಸುಮಾರು 10,000 ಕೋಟಿ ರೂ. ವೆಚ್ಚದ ಸೇಲಂ-ಚೆನ್ನೈ ಷಟ್ಪಥ ಗ್ರೀನ್ ಎಕ್ಸ್ ಪ್ರೆಸ್ ವೇ ವಿರುದ್ಧ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ರೈತರನ್ನು ಭೇಟಿಯಾಗಲು ಬಂದ ಯೋಗೇಂದ್ರ ಯಾದವ್ ಅವರನ್ನು ಬಂಧಿಸಿ, ಮದುವೆ ಛತ್ರವೊಂದರಲ್ಲಿ ಇರಿಸಲಾಗಿದೆ.

Yogendra Yadav detained, manhandled by cops in Tamil Nadu

'ರೈತರನ್ನು ತಾನು ಭೇಟಿಯಾಗದಂತೆ ಪೊಲೀಸರು ತಡೆದಿದ್ದಾರೆ, ತಮ್ಮನ್ನು ಬಲವಂತದಿಂದ ಪೊಲೀಸ್ ವ್ಯಾನಿಗೆ ದೂಡಲಾಗಿದೆ ಹಾಗೂ ತನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ' ಎಂದು ಯಾದವ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಆದರೆ ಪೊಲೀಸರು ಯಾದವ್ ಅವರ ಆರೋಪ ನಿರಾಕರಿಸಿದ್ದಾರಲ್ಲದೆ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ಅವರು ಅನುಮತಿ ಪಡೆದಿರಲಿಲ್ಲ ಎಂದು ಹೇಳಿದ್ದಾರೆ.

ರೈತರ ಪ್ರತಿಭಟನೆಯ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಯಾದವ್ ಹಾಗೂ ಅವರ ತಂಡಕ್ಕೆ ರಕ್ಷಣೆ ಇರಲಿಲ್ಲ ಹೀಗಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಯಿತು ಎಂದು ಚೆಂಗಮ್ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

ರೈತರ ಹಕ್ಕುಗಳ ಹೋರಾಟ ಮಾಡುತ್ತಿರುವ ಯೋಗೇಂದ್ರ ಯಾದವ್, ಕಳೆದ ವರ್ಷ ಜೈ ಕಿಸಾನ್ ಆಂದೋಲನ್ ಆರಂಭಿಸಿದ್ದರು.

ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಬಲವಂತವಾಗಿ ಭೂಸ್ವಾಧೀನ ಹಾಗೂ ಪೊಲೀಸ್ ದೌರ್ಜನ್ಯದ ಕುರಿತು ತಿರುವಣ್ಣಾಮಲೈ ಡಿಸಿ ಕಂದಸ್ವಾಮಿ ಅವರಿಗೆ ದೂರು ನೀಡಿದ ಬಳಿಕ ನನ್ನನ್ನು ಬಂಧಿಸಲಾಗಿದೆ. ನನ್ನನ್ನು ಸಂಪರ್ಕಿಸಲು ಯತ್ನಿಸಿದ 49 ರೈತರನ್ನು ವಶಕ್ಕೆ ಪಡೆಯಲಾಗಿದೆ. ಇದು ಯಾವ ರೀತಿ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ಪರಿಸರವಾದಿಗಳು ಯೋಜನೆಯಿಂದಾಗಿ ಅನೇಕ ಮರಗಳನ್ನು ಕಡಿಯುವುದನ್ನು ವಿರೋಧಿಸುತ್ತಿದ್ದಾರೆ.

English summary
Yogendra Yadav, a psephologist-turned politician on Saturday alleged that he and his team were detained and manhandled by Tamil Nadu police in Tiruvannamalai district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X