ವಿಜಯ್ 'ಮೆರ್ಸಲ್' ಚಿತ್ರದ ವಿರುದ್ಧ ಕೇಸು ದಾಖಲಿಸಿದ ಹಿಂದೂಗಳು

Posted By:
Subscribe to Oneindia Kannada

ಚೆನ್ನೈ, ಅಕ್ಟೋಬರ್ 23: ಕೇಂದ್ರ ಸರ್ಕಾರದ ಯೋಜನೆಯನ್ನು ತಪ್ಪಾಗಿ ತೋರಿಸಿದ್ದಕ್ಕೆ ವಿಜಯ್ ಅವರ 'ಮೆರ್ಸೆಲ್' ಚಿತ್ರದ ವಿರುದ್ಧ ದೂರು ದಾಖಲಾಗಿದೆ. ಇದಲ್ಲದೆ, ಈ ಚಿತ್ರದ ಡೈಲಾಗ್ ನಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಮಧುರೈ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ.

'ಮೆರ್ಸಲ್‌' ಚಿತ್ರದ ಬಗ್ಗೆ ರಜನಿ ಮೆಚ್ಚುಗೆ, ಬಿಜೆಪಿ ಪೇಚಿಗೆ

'ನಮಗೆ ದೇಗುಲಗಳು ಬೇಕಾಗಿಲ್ಲ, ನಮಗೆ ಆಸ್ಪತ್ರೆಗಳು ಬೇಕು' ಎಂಬರ್ಥ ಬರುವ ಡೈಲಾಗ್ ನಿಂದಾಗಿ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಧುರೈ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.

Vijay Mersal in trouble : A complaint filed against film for hurting Hindu sentiments

ಅಕ್ಟೋಬರ್ 18ರಂದು ತೆರೆಗೆ ಬಂದ ಈ ಚಿತ್ರದಲ್ಲಿ ವಿಜಯ್ ಅಲ್ಲದೆ ಸಮಂತಾ, ನಿತ್ಯಾ ಮೆನನ್, ಕಾಜಲ್ ಅಗರವಾಲ್ ಮುಂತಾದವರಿದ್ದಾರೆ. ಈಗಾಗಲೇ ನೂರು ಕೋಟಿ ಕಲೆಕ್ಷನ್ ಮಾಡಿದೆ.

ಬಿಜೆಪಿ ನಾಯಕರಾದ ರಾಜ, ತಮಿಳ್ ಇಸೈ ಸೌಂದರರಾಜನ್, ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಈಗಾಗಲೇ ವಿಜಯ್ ಚಿತ್ರದ ವಿರುದ್ಧ ಕಿಡಿಕಾರಿದ್ದು, ಮೋದಿ ಸರ್ಕಾರದ ಯೋಜನೆಗಳಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾವನ್ನು ತಪ್ಪಾಗಿ ತೋರಿಸಲಾಗಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಆಗ್ರಹಿಸಿದ್ದಾರೆ.

ಈ ನಡುವೆ ಕಲಾವಿದರು, ಸಮಾಜವನ್ನು ಬೆದರಿಸುವ ಮೂಲಕ ಹತೋಟಿಯಲ್ಲಿಟ್ಟುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂದು ಡಿ ವೈ ಎಫ್ ಐ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijay’s new film Mersal has involved itself in a fresh controversy as a police complaint has been filed against the Tamil actor in Madurai for allegedly hurting Hindu sentiments in the movie. An advocate in Madurai has objected to a particular dialogue in Mersal, where Vijay says: “We don't need to build temples. We want hospitals.”

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ