ವಿಡಿಯೋ : ಚೆನ್ನೈನಲ್ಲಿ ಮಳೆ ಅವಾಂತರ, ಟ್ರಾಫಿಕ್ ಜಾಮ್
ಬೆಂಗಳೂರು, ನ.25: ಮಳೆ ಕಾಣದ ಊರಲ್ಲಿ ಈಗ ನಿತ್ಯ ಮಳೆಯ ಆರ್ಭಟ. ಕಚೇರಿ ಹೋಗಲು ದೋಣಿ ಬಳಸುವಂಥ ಪರಿಸ್ಥಿತಿ. ಅತ್ಯಂತ ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಒಂದೆನಿಸಿರುವ ಚೆನ್ನೈನಲ್ಲಿ ಟ್ರಾಫಿಕ್ ಜಾಮ್ ಆಗಲು ಮಳೆ ಬಿಟ್ಟರೆ ಬೇರೆ ಕಾರಣವಿಲ್ಲ. ಟ್ರಾಫಿಕ್ ಜಾಮ್ ಬಗ್ಗೆ ವಿಡಿಯೋ ಇಲ್ಲಿದೆ.
ಇನ್ನೂ ನಾಲ್ಕು ದಿನಗಳ ಕಾಲ ಮಳೆ ತಮಿಳುನಾಡು ಸೇರಿದಂತೆ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡುತ್ತಿದೆ. ಅದರೆ, ಚೆನ್ನೈಗೆ ಈಗ ಬೇಕಾಗಿರುವುದು ಇಂಗು ಗುಂಡಿಗಳು, ಮಳೆ ಕೊಯ್ಲು ತಜ್ಞರು, ಜಲ ಸಂಗ್ರಹ ಯೋಜನೆಗಳು. [ತಮಿಳುನಾಡಲ್ಲಿ ಕುಂಭದ್ರೋಣ ಮಳೆ, ಜನಜೀವನ ಚಿತ್ರಾನ್ನ]
ಪಕ್ಕದಲ್ಲೇ ಸಮುದ್ರ ಇಟ್ಟುಕೊಂಡು ಸರಿಯಾದ ಯೋಜನೆ ಇಲ್ಲದೆ ಇಕ್ಕಟ್ಟಾದ ಪ್ರದೇಶದಲ್ಲೇ ಎತ್ತರೆತ್ತರಕ್ಕೆ ಕಟ್ಟಡಗಳನ್ನು ಏರಿಸುತ್ತಾ ಹೋದರೆ ಮುಂದೊಂದು ದಿನ ಸುನಾಮಿ ಹಾಗಿರಲಿ, ಸಾಧಾರಣ ಮಳೆಗೆ ಚೆನ್ನೈ ಮುಳುಗಿಬಿಡುವ ಆತಂಕ ಎದುರಾಗಿದೆ. ಇದು ಪಕ್ಕದ ಬೆಂಗಳೂರಿಗೂ ಪಾಠವಾಗಲಿದೆ. ಭಾರಿ ಮಳೆ ಬಿದ್ದರೂ ಬಚಾವಾಗುವ ಮುಂಬೈನಿಂದ ಒಂದಿಷ್ಟು ವಿಷಯ ಕಲಿಯಬೇಕಿದೆ.

ಮಳೆ ನೀರು ಸರಿಯಾಗಿ ಸಾಗಲು ಹಾದಿ ಸಿಗದೆ ಮನೆ ಮಠವಲ್ಲದೆ ಸರ್ಕಾರಿ ಆಸ್ಪತ್ರೆ, ರಾಜಭವನಕ್ಕೂ ನೀರು ನುಗ್ಗಿದೆ. ಮಳೆ ನಿಂತ ಮೇಲೆ ರೋಗ ರುಜಿನಗಳು ಹಬ್ಬಿದರೆ ಏನು ಗತಿ ಎಂಬ ಪ್ರಶ್ನೆ ಕಾಡುತ್ತಿದೆ. [ಮಳೆ ಆರ್ಭಟಕ್ಕೆ 15ಕ್ಕೂ ಅಧಿಕ ರೈಲು ಸಂಚಾರ ರದ್ದು]
ಅಭಿವೃದ್ಧಿಯ ಹೆಸರಿನಲ್ಲಿ ಶ್ರೀಪೆರಂಬದೂರಿನ ತನಕ ಚೆನ್ನೈ ನಗರವನ್ನು ವಿಸ್ತರಿಸಿರುವ ತಮಿಳುನಾಡು ಸರ್ಕಾರಕ್ಕೆ ಮಳೆ ಸರಿಯಾದ ಪಾಠ ಕಲಿಸುತ್ತಿದೆ. ಸದ್ಯಕ್ಕೆ ಬೆಂಗಳೂರಿನ ಟ್ರಾಫಿಕ್ ಜಾಮ್ ಮೀರಿಸುವಂತೆ ಚೆನ್ನೈನಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿ...












Click it and Unblock the Notifications