Get Updates
Get notified of breaking news, exclusive insights, and must-see stories!

ಕಮಲ್ -ರಮೇಶ್ ಜೋಡಿ ಉತ್ತಮ ವಿಲನ್ ನಿಷೇಧಕ್ಕೆ ಕರೆ

ಚೆನ್ನೈ, ಏ.7: ರಮೇಶ್ ಅರವಿಂದ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್ ನಿಷೇಧಕ್ಕೆ ಹಿಂದೂ ಪರ ಸಂಘಟನೆ ಕರೆ ನೀಡಿದೆ. ವಿಶ್ವ ಹಿಂದೂ ಪರಿಷತ್ ನ ತಮಿಳುನಾಡಿನ ಘಟಕ ಕಮಲ್ ಹಾಸನ್ ಅಭಿನಯದ ಸಿನಿಮಾ ನಿಷೇಧಕ್ಕೆ ಆಗ್ರಹಿಸಿದೆ.

ಉತ್ತಮ ವಿಲನ್ ಚಿತ್ರದಲ್ಲಿರುವ ಒಂದು ಹಾಡಿನ ಸಾಹಿತ್ಯ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಮಹಾ ಭಾಗವತ ಪ್ರಹ್ಲಾದ ಹಾಗೂ ಹಿರಣ್ಯಕಶಿಪು ನಡುವಿನ ಸಂಭಾಷಣೆಯನ್ನು ತಿರುಚಿ ಬರೆಯಲಾದ ಈ ಸಾಹಿತ್ಯ ತೆಗೆದು ಹಾಕಬೇಕು ಇಲ್ಲವೇ ಚಿತ್ರ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಸಂಘಟನೆ ಹೇಳಿದೆ.

ಈಗಾಗಲೇ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ವಿಎಚ್ ಪಿ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ. ಕೆಎಲ್ ಸತ್ಯಮೂರ್ತಿ ನೇತೃತ್ವದಲ್ಲಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

Vishva Hindu Parishad’s (VHP) Tamil Nadu wing has called for a ban on the Kamal Haasan-starrer Uthama Villain.

ಉತ್ತಮ ವಿಲನ್ ಚಿತ್ರದ ಹಾಡುಗಳು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಒಂದು ಹಾಡಿನಲ್ಲಿ ವಿಷ್ಣುವಿನ ಪರಮಭಕ್ತ ಪ್ರಹ್ಲಾದ ಹಾಗೂ ಆತನ ತಂದೆ ಹರಿ ವೈರಿ ಹಿರಣ್ಯಕಶಿಪು ನಡುವಿನ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ನಟ ರಮೇಶ್ ಅರವಿಂದ್ ಅವರ ನಿರ್ದೇಶನದ ಉತ್ತಮ ವಿಲನ್ ಚಿತ್ರವನ್ನು ಎನ್ ಲಿಂಗುಸ್ವಾಮಿ ಹಾಗೂ ಕಮಲ್ ನಿರ್ಮಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಅಸುನೀಗಿದ ನಿರ್ದೇಶಕ ಕೆ ಬಾಲಚಂದರ್ ಅವರು ಈ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಅವರಿಗೆ ಅರ್ಪಿಸಲಾಗುವುದು ಎಂದು ಕಮಲ್ ಹಾಗೂ ರಮೇಶ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+