ಅಮೆರಿಕ ವೀಸಾ ಅರ್ಜಿ ಸಂದರ್ಶನ ಸದ್ಯಕ್ಕಿಲ್ಲ: ರಾಯಭಾರ ಕಚೇರಿ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 05: ತಮಿಳುನಾಡಿನಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಅಮೆರಿಕ ರಾಯಭಾರಿ ಕಚೇರಿ ಸೂಚಿಸಿದೆ. ತಮಿಳುನಾಡಿನ ಸಿಎಂ ಜೆ ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ವಿಷಮಗೊಂಡಿರುವುದರಿಂದ ತನ್ನ ನಾಗರಿಕರಿಗೆ, ಪ್ರವಾಸಿಗರಿಗೆ ಸೂಚನೆ ನೀಡಿದೆ.

ಜತೆಗೆ ತಾತ್ಕಾಲಿಕವಾಗಿ ವೀಸಾ ಅರ್ಜಿ ವಿಚಾರಣೆ ಮುಂತಾದ ಪ್ರಕ್ರಿಯೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಜಯಾ ಅವರ ಆರೋಗ್ಯದಲ್ಲಿ ಏರುಪೇರಾದರೆ ಸಂಭವಿಸಬಹುದಾದ ಗಲಭೆ, ಘರ್ಷಣೆಯಿಂದ ದೂರವಿರಿ. ಗಾಳಿಸುದ್ದಿಗೆ ಕಿವಿಗೊಡಬೇಡಿ. ಸರ್ಕಾರಿ ಸುತ್ತೋಲೆ ಬರುವ ತನಕ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಅಡ್ಡಾಡಬೇಡಿ ಎಂದು ಸೂಚನೆ ನೀಡಲಾಗಿದೆ. [ಮುಂಬೈನಿಂದ ಮದುರೈ ತನಕ 'ಅಮ್ಮ'ನಿಗಾಗಿ ಪ್ರಾರ್ಥನೆ]

US issues advisory to citizens in TN following Jayalalithaa's health row

ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈಗಾಗಲೇ ತನ್ನ ಕಾರ್ಯವನ್ನು ಬಹುತೇಕ ಸ್ಥಗಿತಗೊಳಿಸಿದ್ದು, ತಮಿಳುನಾಡಿನಲ್ಲಿ ಪರಿಸ್ಥಿತಿ ತಿಳಿಗೊಂಡ ಬಳಿಕ ವೀಸಾ ಅರ್ಜಿ ಸಂದರ್ಶನ ಪ್ರಕ್ರಿಯೆ ಎಂದಿನಂತೆ ನಡೆಸಲು ನಿರ್ಧರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The US Consulate in Chennai has issued an advisory to all its citizens in Tamil Nadu following unrest over Jayalalithaa's health condition. The US Consulate has temporarily suspended appointments for routine services to its citizens and visa applications.
Please Wait while comments are loading...