ಆರ್ ಕೆ ನಗರ ಉಪಚುನಾವಣೆ: ಶೇ.77.60 ದಾಖಲೆ ಮತದಾನ

ಚೆನೈ, ಡಿಸೆಂಬರ್ 21: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣಾನಂತರ ತೆರವಾದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮತದಾನ ಆರಂಭವಾಗಿದೆ.

ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಒಟ್ಟು 59 ಜನ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಮತಚಲಾಯಿಸಿದ ಡಿಎಂಕೆ ಅಭ್ಯರ್ಥಿ ಎನ್ ಮರುಧು ಗಣೇಶ್, 'ಅದು 6000 ರೂಪಾಯಿಯೇ ಇರಲಿ, 60000 ರೂಪಾಯಿಯೇ ಇರಲಿ, ಗೆಲ್ಲುವುದು ನಾನೇ' ಎಂದರು.

RK Nagar by election: people casting their votes

ಬಿಜೆಪಿ ಅಭ್ಯರ್ಥಿ ಕಾರು ನಾಗರಾಜನ್ ಸಹ ಮತ ಚಲಾಯಿಸಿದರು.

ಒಟ್ಟು ಶೇ.77.60 ರಷ್ಟು ಮತದಾನವಾಗಿದ್ದು, ದಾಖಲೆ ನಿರ್ಮಿಸಿದೆ. ಮತದಾನದ ಸಮಯದಲ್ಲಿ ಯಾವುದೇ ರೀತಿಯ ಹಿಂಸೆ ನಡೆಯದೆ, ಶಾಮತಿಯುತ ಮತದಾನ ನಡೆದಿದೆ.

ಆರ್ ಕೆ ನಗರದಲ್ಲಿ ಒಟ್ಟು 256 ಮತಗಟ್ಟೆಗಳಿದ್ದು, 310 ಕ್ಕೂ ಹೆಚ್ಚು ವಿವಿಪಿಎಟಿ (Voter Verifiable Paper Audit Trail System) ಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದ್ದು, ಡಿ.24 ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+