ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ 600 ಕೋಟಿ ರೂ. ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ

|
Google Oneindia Kannada News

ಚೆನ್ನೈ, ಜನವರಿ 03: ತಮಿಳುನಾಡಿನಲ್ಲಿ ಚಂಡಮಾರುತಗಳಿಂದಾಗಿ ಹಾನಿಯಾಗಿರುವ ಪ್ರದೇಶಗಳಿಗೆ ಪರಿಹಾರವಾಗಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸುಮಾರು ಐದು ಲಕ್ಷ ರೈತರಿಗೆ 600 ಕೋಟಿ ಪರಿಹಾರ ನೆರವು ಘೋಷಿಸಿದ್ದಾರೆ.

3.10 ಲಕ್ಷ ಪ್ಲಸ್ ಹೆಕ್ಟೇರ್ ಬೆಳೆಗಳಿಗೆ ಚಂಡಮಾರುತದಿಂದಾಗಿ ಹಾನಿಯಾಗಿದ್ದು, ಗರಿಷ್ಠ ಎರಡು ಹೆಕ್ಟೇರ್ ವರೆಗೆ ಮಾತ್ರ ಪರಿಹಾರವನ್ನು ಅನುಮತಿಸಲಾಗಿದೆ ಮತ್ತು ನೆರವು ಯಾವುದೇ ಮೇಲಿನ ಮಿತಿಯಿಲ್ಲದೆ ಸಂಪೂರ್ಣ ನಷ್ಟವನ್ನು ಭರಿಸಲಿದೆ ಎಂದು ಶ್ರೀ ಪಳನಿಸ್ವಾಮಿ ಹೇಳಿದ್ದಾರೆ.

ರೈತರಿಗೆ ಘೋಷಣೆಯಾಗಿರುವ ಪರಿಹಾರದ ನೆರವು ಜನವರಿ 7 ರಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

TN
ಕಳೆದ ವರ್ಷ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಸಾಕ್ಷಿಯಾದ ನಿವಾರ್ ಮತ್ತು ಬುರೆವಿ ಚಂಡಮಾರುತಗಳಿಂದಾಗಿ ತಮಿಳುನಾಡಿನಲ್ಲಿ 3,10,589.63 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ. ಬೃಹತ್ ಉತ್ಪಾದನಾ ವೆಚ್ಚವನ್ನು ಭರಿಸಿರುವ ರೈತರು ಬಿರುಗಾಳಿಯಿಂದಾಗಿ ತೀವ್ರವಾಗಿ ಹಾನಿಗೊಳಗಾಗಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಇನ್ಪುಟ್ ಸಬ್ಸಿಡಿ ಹೆಡ್ ಅಡಿಯಲ್ಲಿ ಬರುವ ಸಹಾಯವನ್ನು ಮಳೆಗಾಲ ಮತ್ತು ನೀರಾವರಿ ಭತ್ತಕ್ಕಾಗಿ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ಇತರ ಬೆಳೆಗಳಿಗೆ ಹೆಕ್ಟೇರಿಗೆ, 13,500 ರಿಂದ 20,000 ರೂಪಾಯಿಗೆ ಹೆಚ್ಚಿಸಿದರು.

ಇನ್ನು ಎಲ್ಲಾ ಮಳೆಯಾಶ್ರಿತ ಬೆಳೆಗಳಿಗೆ, ಭತ್ತವನ್ನು ಹೊರತುಪಡಿಸಿ, ಹೆಕ್ಟೇರ್‌ಗೆ ಪರಿಹಾರ ಸಹಾಯವನ್ನು ಪ್ರಸ್ತುತ 7,410 ರೂಪಾಯಿನಿಂದ 10,000 ಕ್ಕೆ ಏರಿಸಲಾಗುತ್ತದೆ ಎಂದು ಅವರು ಘೋಷಿಸಿದರು.

English summary
Chief Minister K Palaniswami on Saturday announced Rs 600 crore relief assistance to about five lakh farmers whose crops on 3.10 lakh plus hectare
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X