ನಟ ಆರ್ಯ, ನಿರ್ದೇಶಕ ಬಾಲ ವಿರುದ್ಧ ಬಂಧನ ವಾರೆಂಟ್

ತಿರುನಲ್ವೇಲಿ, ಜುಲೈ 02: ತಮಿಳು ಚಿತ್ರರಂಗ ಜನಪ್ರಿಯ ತಾರೆ ಆರ್ಯ ಹಾಗೂ ಸದಭಿರುಚಿ ಚಿತ್ರಗಳ ನಿರ್ದೇಶಕ ಬಾಲ ವಿರುದ್ದ ಇಲ್ಲಿನ ಅಂಬಸಮುದ್ರಂ ನ್ಯಾಯಪೀಠವು ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ.

2011ರಲ್ಲಿ "ಅವನ್ ಇವನ್" ಎನ್ನುವ ತಮಿಳು ಚಿತ್ರ ತೆರೆ ಕಂಡು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು.ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಬಂದರೂ, ಸಾರ್ವಜನಿಕರಿಂದ ಆಕ್ರೋಶವ್ಯಕ್ತವಾಗಿತ್ತು.

'ಅವನ್ ಇವನ್' ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ನಟರಾದ ಆರ್ಯ ಹಾಗು ವಿಶಾಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಾಲ ನಿರ್ದೇಶನದಲ್ಲಿ ಮೂಡಿ ಬಂದ 'ಅವನ್ ಇವನ್' ಸಿನಿಮಾದಲ್ಲಿ ಸಿಂಗಂಪಟ್ಟಿ ಜಮೀನ್ದಾರರನ್ನು ತಪ್ಪಾಗಿ ಚಿತ್ರೀಕರಿಸಿಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ನಟ ಆರ್ಯ ಹಾಗೂ ನಿರ್ದೇಶಕ ಬಾಲಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗಿತ್ತು.

Arya

ಈಗ ತಿರುನೆಲ್ವೇಲಿ ಅಂಬಸಮುದ್ರಂ ನ್ಯಾಯಪೀಠವು ವಿಚಾರಣೆ ನಡೆಸಿ, ಈ ಮೊಕದ್ದಮೆಗೆ ಸಂಭಂದಿಸಿದಂತೆ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿ ನಂತರ ನಟ ಆರ್ಯ ಹಾಗು ನಿರ್ದೇಶಕ ಬಾಲಾ ಅವರು ತಪ್ಪು ಮಾಡಿದ್ದಾರೆಂದು ನಿರ್ಧರಿಸಿ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ.

'ಅವನ್ ಇವನ್' ಚಿತ್ರ 2011 ರಲ್ಲಿ ತೆರೆ ಕಂಡಿತ್ತು. ಸದ್ಯ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದ್ದು ಜುಲೈ 13 ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+