ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರದ ಭಾಗವೇ ಐಟಿ ದಾಳಿ: ದಿನಕರನ್

Posted By:
Subscribe to Oneindia Kannada

ಚೆನ್ನೈ, ನವೆಂಬರ್ 09: "ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರದ ಭಾಗ ಈ ಐಟಿ ದಾಳಿ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ, ಎಐಎಡಿಎಂಕೆಯಿಂದ ಮೂಲೆಗುಂಪಾಗಿರುವ ಟಿಟಿವಿ ದಿನಕರನ್!

ಎಂಕೆ, ಕನ್ನಿಮೋಳಿ ಮೇಲೆ ಏಕೆ ದಾಳಿಯಿಲ್ಲ : ಸ್ವಾಮಿ ಪ್ರಶ್ನೆ

ಇಂದು(ನ.09) ಬೆಳಿಗ್ಗೆ ಚೆನ್ನೈನ ಜಯಾ ಟಿವಿ ಕಚೇರಿ ಸೇರಿದಂತೆ 187 ಕಡೆಗಳಲ್ಲಿ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು.

This is a political conspiracy: Dinakaran on IT raid

"ನನ್ನ ಮನೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ. ಪಾಂಡಿಚೇರಿಯಲ್ಲಿರುವ ನನ್ನ ಪಾರ್ಮ್ ಹೌಸ್ ವೊಂದರಲ್ಲಿ ದಾಳಿ ನಡೆದಿದೆ. ಇವೆಲ್ಲವೂ ನನ್ನನ್ನು ಮತ್ತು ಶಶಿಕಲಾ ನಟರಾಜನ್ ಅವರನ್ನು ರಾಜಕೀಯದಿಂದ ಕಿತ್ತೆಸೆಯುವ ಷಡ್ಯಂತ್ರದ ಭಾಗವಷ್ಟೆ" ಎಂದಿದ್ದಾರೆ.

ಶಶಿಕಲಾ ಸಾಮ್ರಾಜ್ಯದ ಮೇಲೆ ಐಟಿ ಕಣ್ಣು: ಚೆನ್ನೈನ 187 ಕಡೆ ಐಟಿ ದಾಳಿ

ಇಂದು ಬೆಳಿಗ್ಗೆ 6 ಗಂಟೆಗೆ ಜಯಾ ಟಿವಿ ಕಚೇರಿ ಸೇರಿದಂತೆ 187 ಕಡೆಗಳಲ್ಲಿ ಐಟಿ ದಾಳಿ ನಡೆದಿದ್ದು, ಶಶಿಕಲಾ ನಟರಾಜನ್ ಅವರ ಒಡೆತನದ ಸ್ಥಳಗಳಲ್ಲೇ ದಾಳಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಡಿಎಂಕೆ ನಾಯಕ ಕರುಣಾನಿಧಿಯವರನ್ನು ಭೇಟಿ ಮಾಡಿದ ಎರಡು ದಿನಗಳ ನಂತರ ನಡೆದ ಈ ಬೆಳವಣಿಗೆ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಅಪನಗದೀಕರಣದ ಮೊದಲ ವರ್ಷವನ್ನು ಕರಾಳ ದಿನವನ್ನಾಗಿ ಆಅಚರಿಸಲು ಸಿದ್ಧವಾಗಿದ್ದ ಡಿಎಂಕೆ ಮೋದಿ ಭೇಟಿಯ ನಂತರ ತನ್ನ ನಿರ್ಧಾರವನ್ನು ಬದಲಿಸಿಕೊಂಡಿತ್ತು. ಈ ಎಲ್ಲ ಹಠಾತ್ ಬೆಳವಣಿಗೆಗಳು ತಮಿಳುನಾಡಿನ ರಾಜಕೀಯದ ಕುರಿತು ಮತ್ತಷ್ಟು ಕುತೂಹಲವನ್ನುಂಟುಮಾಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"There is no searches in my house. My farm house at Pondicherry is being searched. This is a conspiracy to remove me and Sasikala from politics. The central government has sent IT department after me" side-lined AIADMK leader TTV Dinakaran told about the IT raid, which took place this morning(Nov.9th)

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ