ತಮಿಳುನಾಡಿನಲ್ಲಿಯೂ ಜೂನ್‌ನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆ

ಚೆನ್ನೈ, ಮೇ 19: ಕರ್ನಾಟಕದ ನಂತರ ತಮಿಳುನಾಡಿನಲ್ಲಿಯೂ ಎಸ್ಎಸ್‌ಎಲ್‌ಸಿ ಪರೀಕ್ಷೆ ದಿನಾಂಕವನ್ನು ಪ್ರಕರಣ ಮಾಡಲಾಗಿದೆ. ಜೂನ್ 15 ರಂದು ಪರೀಕ್ಷೆಗಳು ಪ್ರಾರಂಭವಾಗಲಿವೆ.

ಈ ಮೊದಲು ಜೂನ್ ಒಂದರಿಂದ ಪರೀಕ್ಷೆಗಳು ಶುರು ಆಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾದ ಕಾರಣ ಪರೀಕ್ಷೆ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು. ಹೊಸದಾಗಿ ಪ್ರಕಟವಾದ ವೇಳಾಪಟ್ಟಿಯಂತೆ ಜೂನ್ 15 ರಿಂದ 25ರ ವರೆಗೆ ಪರೀಕ್ಷೆಗಳು ನಡೆಯಲಿದೆ.

ಜೂನ್ ಮಧ್ಯದ ವೇಳೆಗೆ ಕೆಂಪು ವಲಯಗಳ ಸಂಖ್ಯೆ ಕಡಿಮೆಯಾಗಿ, ಹಸಿರು ವಲಯಗಳ ಸಂಖ್ಯೆ ಹೆಚ್ಚಾಗಲಿದ್ದು, ಜೂನ್ ಕೊನೆಯಲ್ಲಿ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ ಎಂದು ತಮಿಳುನಾಡು ಶಿಕ್ಷಣ ಇಲಾಖೆ ತಿಳಿಸಿದ್ದಾರೆ.

Tamil Nadu State Board Exams For SSLC Students Will Be Conducted From June

ಪರೀಕ್ಷೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕಿದ್ದು, ಒಂದು ಕೊಠಡಿಯಲ್ಲಿ 10 ವಿದ್ಯಾರ್ಥಿಗಳು ಮಾತ್ರ ಕೂರಿಸಲಾಗುತ್ತದೆ. ಹೀಗಾಗಿ, ಪರೀಕ್ಷೆ ಕೇಂದ್ರಗಳ ಸಂಖ್ಯೆ ಹೆಚ್ಚಾಗಿದ್ದು, 3,825 ಕೇಂದ್ರಗಳಿಂದ 12,690ಕ್ಕೆ ಏರಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಜರಾಗಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ.

ಈಗಾಗಲೇ, ತಮಿಳುನಾಡಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದು, ಮೇ 27ರಿಂದ ಮೌಲ್ಯಮಾಪನ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+