ಗಿಡಮೂಲಿಕೆಯಿಂದ ಕೊರೊನಾಗೆ ಔಷಧಿ: ನಕಲಿ ವೈದ್ಯನ ಸೆರೆ

ಚೆನ್ನೈ, ಮೇ 7: ಗಿಡಮೂಲಿಕೆಯಿಂದ ಕೊರೊನಾಗೆ ಔಷಧ ಕಂಡುಹಿಡಿದಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ನಕಲಿ ವೈದ್ಯನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಬಳಿಕ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.

ಇಂಡಿಯನ್ ಮೆಡಿಸಿನ್ ಆಂಡ್ ಹೋಮಿಯೋಪಥಿ ನಿರ್ದೇಶಕ ಪೊಲೀಸರಿಗೆ ದೂರು ನೀಡಿದ್ದು, ಯಾರೋ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಹೇಳಿದ್ದರು. ವೈದ್ಯಕೀಯದ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ, ಪರವಾನಗಿ ಕೂಡ ಇಲ್ಲದೆ ಕೊಯಂಬೀಡು ಬಳಿ ಸಿದ್ಧ ಆಸ್ಪತ್ರೆಯೊಂದನ್ನು ಥಣಿಕಾಸಲಂ ನಡೆಸುತ್ತಿದ್ದ ಎಂದು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಆತ 70ಕ್ಕಿಂತಲೂ ಹೆಚ್ಚು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಪ್‌ಲೋಡ್ ಮಾಡಿದ್ದ, ಈ ಔಷಧ ಸ್ವೀಕರಿಸಿದರೆ 48 ಗಂಟೆಗಳೊಳಗಾಗಿ ಕೊವಿಡ್ ರೋಗ ಗುಣವಾಗುತ್ತದೆ ಎಂದು ಹೇಳಿಕೊಂಡಿದ್ದ.

Man Who Claimed To Have Found Herbal Cure For Covid-19 Arrested

ಲಂಡನ್ ವೈದ್ಯರೊಬ್ಬರಿಗೆ ಗುಣಮುಖರನ್ನಾಗಿ ಮಾಡಲು ಸಾಧ್ಯವಾಗದ ರೋಗಿಯನ್ನು ತಾನು ಗುಣಪಡಿಸಿರುವುದಾಗಿ ಸುಳ್ಳು ಹೇಳಿದ್ದ. ಫೇಸ್‌ಬುಕ್‌ನಲ್ಲಿ ಯಾವುದೇ ಔಷಧ ಕಂಡುಹಿಡಿಯಲು ಪದವಿ, ಡಿಗ್ರಿಯ ಅಗತ್ಯವಿಲ್ಲ, ಮಾಸ್ಕ್ ಧರಿಸಿದ್ದರೂ ಕೂಡ ಎಷ್ಟೋ ಮಂದಿಗೆ ಕೊರೊನಾ ತಗುಲಿದೆ ಎಂದು ಸಮರ್ಥಿಸಿಕೊಂಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+