ತಮಿಳುನಾಡಿನಲ್ಲಿ 'ಅಮ್ಮ'ನ ಆಡಳಿತ ಮತ್ತೆ ಆರಂಭ
ಚೆನ್ನೈ, ಮೇ 23 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತರಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಇಂದು 5ನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಯಲಲಿತಾ ಅವರೊಂದಿಗೆ 28 ಶಾಸಕರು ಸಂಪುಟ ಸೇರಿದ್ದಾರೆ. [ಜಯಲಲಿತಾ ಪಟ್ಟಾಭಿಷೇಕದ ಚಿತ್ರಗಳು]
ಮದ್ರಾಸ್ ವಿವಿಯ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 11.07ಕ್ಕೆ ಹಸಿರು ಸೀರೆ ಉಟ್ಟಿದ್ದ 67 ವರ್ಷದ ಜೆ.ಜಯಲಲಿತಾ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಕೆ.ರೋಸಯ್ಯ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಮೂರು ಸಾವಿರಕ್ಕೂ ಅಧಿಕ ಜನರು ಜಯಲಲಿತಾ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು. [ತಮಿಳುನಾಡಿನಲ್ಲಿ ಅಮ್ಮನ ಆಡಳಿತ]
ಜಯಲಲಿತಾ ಅವರು 2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ಸಿಲುಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ 6 ತಿಂಗಳ ಮಟ್ಟಿಗೆ ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು. ಜಯ ನಿರ್ದೋಷಿಯಾದ ಬಳಿಕ ಪುನಃ ಅಧಿಕಾರ ಬಿಟ್ಟುಕೊಟ್ಟಿದ್ದರು. [ಅಕ್ರಮ ಆಸ್ತಿಗಳಿಕೆ ಪ್ರಕರಣ Timeline]
2014ರ ಸೆಪ್ಟೆಂಬರ್‌ನಲ್ಲಿ ಅಕ್ರಮ ಆಸ್ತಿಗಳಿಗೆ ಆರೋಪ ಸಾಬೀತಾಗಿದ್ದರಿಂದ ಜಯ ರಾಜೀನಾಮೆ ನೀಡಿದ್ದರು. ಆರೋಪ ಮುಕ್ತವಾದ ಬಳಿಕ ಪುನಃ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಿದ್ದಾರೆ. ಜಯಲಲಿತಾ ಅವರ ನಿಷ್ಟರಾಗಿರುವ ಪನ್ನೀರ್ ಸೆಲ್ವಂ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಸಮಯ 11.35 : ಪ್ರಮಾಣ ವಚನ ಸಮಾರಂಭದ ಬಳಿಕ ಜಯಲಲಿತಾ ಅವರು ಪೋಯಸ್ ಗಾರ್ಡನ್ ನಿವಾಸಕ್ಕೆ ವಾಪಸ್ ತೆರಳುತ್ತಿದ್ದಾರೆ.
ಸಮಯ 11.26 : ಅಚ್ಚರಿಯಾದರೂ ಇದು ಸತ್ಯ..! ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಯ 11.10 : ಹಸಿರು ಸೀರೆಯುಟ್ಟಿದ್ದ ಜಯಲಲಿತಾ ಅವರು ಹಸಿರು ಪಚ್ಚೆಯ ಉಂಗುರ, ಹಸಿರು ಬಣ್ಣದ ಪೆನ್ ಹಿಡಿದಿದ್ದರು. ಪ್ರಮಾಣ ವಚನದ ಬಳಿಕ ಹಸಿರು ಶಾಹಿಯಲ್ಲಿಯೇ ಸಹಿ ಹಾಕಿದರು.
#Jayalalithaa take oath in the name of God #JayaReturns @the_hindu @ChennaiConnect pic.twitter.com/JGhxVV6GFl
— Sruthisagar (@sruthisagar) May 23, 2015
ಸಮಯ 11.08 : ಹಸಿರು ಸೀರೆಯುಟ್ಟಿದ್ದ ಜಯಲಲಿತಾ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಯ 11.07 : ರಾಷ್ಟ್ರಗೀತೆ ಮತ್ತು ತಮಿಳುನಾಡಿನ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭ
ಸಮಯ 11.06 : ಸಂಪುಟ ಸೇರುವ ಎಲ್ಲಾ ಶಾಸಕರನ್ನು ಪರಿಚಯಿಸಿದ ಜಯಲಲಿತಾ
ಸಮಯ 11.02 : ರಾಜ್ಯಪಾಲ ಕೆ.ರೋಸಯ್ಯ ಆಗಮನ
ಸಮಯ 11 ಗಂಟೆ : ಮದ್ರಾಸ್ ವಿವಿ ಶತಮಾನೋತ್ಸವ ಭವನಕ್ಕೆ ಆಗಮಿಸಿದ ಜಯಲಲಿತಾ, ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ
ಸಮಯ 10.49 : ಪ್ರಮಾಣ ವಚನ ಸಮಾರಂಭಕ್ಕೆ 3000 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ನಟರಾದ ವಿವೇಕ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮುಂತಾದವರು ಸಮಾರಂಭಕ್ಕೆ ಆಗಮಿಸಿದ್ದಾರೆ.
ಸಮಯ 10.44 : ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್
LIVE: Here's Rajinikanth at #Jayalalithaa swearing-in ceremony http://t.co/SDC0IU4nci #JayaReturns pic.twitter.com/8NEEYX0ARZ
— The Hindu (@TheHindu) May 23, 2015
ಸಮಯ 10.40 : ಪೋಯಸ್ ಗಾರ್ಡನ್ ನಿವಾಸದಿಂದ ಮದ್ರಾಸ್ ವಿವಿಯತ್ತ ಹೊರಟ ಜಯಲಲಿತಾ, ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ
Live: Jayalalithaa to be sworn in as Tamil Nadu Chief Minister. Follow this link for updates: http://t.co/npZGbDGQ3A pic.twitter.com/V78zGYArNo
— The Hindu (@TheHindu) May 23, 2015
ಸಮಯ 10.15 : ಜಯಲಲಿತಾ ನಿವಾಸದಿಂದ ಮದ್ರಾಸ್ ವಿವಿ 3 ಕಿ.ಮೀ.ದೂರವಿದೆ. ರಸ್ತೆಯ ಎರಡೂ ಬದಿ ಎಐಎಡಿಎಂಕೆ ಕಾರ್ಯಕರ್ತರು ಜಯಲಲಿತಾ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.
ಸಮಯ 10 ಗಂಟೆ : ಜಯಲಲಿತಾ ಜೊತೆ ಮಾಜಿ ಸಿಎಂ ಪನ್ನೀರ್ ಸೆಲ್ವಂ ಸೇರಿ 28 ಜನರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಮಯ 9.30 : ಚೆನ್ನೈನಲ್ಲಿ ಭದ್ರತೆಗಾಗಿ 10 ಸಾವಿರ ಪೊಲೀಸರ ನಿಯೋಜನೆ