ಡಿಎಂಕೆ ತೊರೆದು ಬಿಜೆಪಿ ಸೇರ್ಪಡೆಯಾದ ಮಧುರೈ ಹಾಲಿ ಶಾಸಕ
ಚೆನ್ನೈ, ಮಾರ್ಚ್ 14: ಐತಿಹಾಸಿಕ ನಗರಿ ಮಧುರೈ ಕ್ಷೇತ್ರದ ಜನಪ್ರಿಯ ಶಾಸಕ ಡಾ ಪಿ ಸರವಣನ್ ಅವರು ಭಾನುವಾರದಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ಮಧುರೈನ ತಿರುಪರಂಕುಂಡ್ರಾಂ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದರು. ಆದರೆ, ಈ ಬಾರಿ ಡಿಎಂಕೆ ಟಿಕೆಟ್ ನಿರಾಕರಿಸಿತ್ತು.
ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ತಿರುಪರಂಕುಂಡ್ರಾಂ ಕ್ಷೇತ್ರವನ್ನು ಮಿತ್ರಪಕ್ಷ ಸಿಪಿಐ (ಎಂ) ಗೆ ಡಿಎಂಕೆ ಈ ಬಾರಿ ಬಿಟ್ಟು ಕೊಟ್ಟಿದೆ. 2019ರಲ್ಲಿ ಈ ಕ್ಷೇತ್ರದಿಂದ ಸರವಣನ್ ಅವರು ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.
ಜನಪ್ರಿಯ ವೈದ್ಯ ಕಮ್ ರಾಜಕಾರಣಿ:
ಸರವಣನ್ ಅವರ ಕುಟುಂಬದಲ್ಲಿ ಅನೇಕ ಮಂದಿ ವೈದ್ಯವೃತ್ತಿಯಲ್ಲಿದ್ದು, ಸರವಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರೈ ಲಿಮಿಟೆಡ್ , ಸೂರ್ಯ ಟ್ರಸ್ಟ್ ಮೂಲಕ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ. ಡಿಎಂಕೆ ವೈದ್ಯರ ವಿಭಾಗದ ಉಪ ನಾಯಕರಾಗಿದ್ದರು.

ಸಿಪಿಐ, ಸಿಪಿಐ (ಎಂ), ವಿಡುಥಲೈ ಚಿರುತೈಗಳ್ ಕಚ್ಚಿ(ವಿಸಿಕೆ), ವೈಕೋ ಅವರ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ(ಎಂಡಿಎಂಕೆ) ಜೊತೆ ಡಿಎಂಕೆ ಮೈತ್ರಿ ಸಾಧಿಸಿದೆ.
ಏಪ್ರಿಲ್ 6ರಂದು ಒಂದೇ ಹಂತದಲ್ಲಿ ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬರಲಿದೆ. ಹಾಲಿ 15ನೇ ವಿಧಾನಸಭೆ ಅವಧಿ ಮೇ 2, 2021ರಂದು ಮುಕ್ತಾಯವಾಗಲಿದೆ.












Click it and Unblock the Notifications