ಪಳನಿಸ್ವಾಮಿ ಬಹುಮತ ಸಾಬೀತಿಗೆ ಇಲ್ಲ ಚಿನ್ನಮ್ಮನ ಆಶಿರ್ವಾದ!
ತಮಿಳುನಾಡು ಸಿಎಂ ಪಳನಿಸ್ವಾಮಿ ನಾಳೆ (ಫೆ 18) ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದು ಶುಕ್ರವಾರ ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶಶಿಕಲಾ ಆಶಿರ್ವಾದ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಬರುತ್ತಿಲ್ಲ.
ಚೆನ್ನೈ, ಫೆಬ್ರವರಿ 17: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಬಹುಮತ ಸಾಬೀತಿಗೂ ಮುನ್ನ ಶಶಿಕಲಾರನ್ನು ಭೇಟಿಯಾಗುತ್ತಿಲ್ಲ. ಪಳನಿಸ್ವಾಮಿ ನಾಳೆ (ಫೆ 18) ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದು ಶುಕ್ರವಾರ ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶಶಿಕಲಾ ಆಶಿರ್ವಾದ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಬರುತ್ತಿಲ್ಲ.
ಹೀಗಾಗಿ ಚಿನ್ನಮ್ಮ ಆಶೀರ್ವಾದ ಇಲ್ಲದೆ ಕೆ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸಲು ಹೊರಟಿದ್ದಾರೆ. ಬಹುಮತ ಸಾಬೀತು ಪಡಿಸಲೆಂದೇ ಶನಿವಾರ ವಿಶೇಷ ಅಧಿವೇಶನ ಕರೆಯಲಾಗಿದ್ದು ಪಳನಿಸ್ವಾಮಿ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ.[ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲು ಮುಹೂರ್ತ ನಿಗದಿ!]

ಒಂದೊಮ್ಮೆ ಜೈಲಿನಲ್ಲಿರುವ ಶಶಿಕಲಾರನ್ನು ಭೇಟಿಯಾದರೆ ಬಹುಮತ ಸಾಬೀತಿಗೂ ಮುನ್ನ ಡಿಎಂಕೆ ಮತ್ತು ಒ ಪನ್ನೀರ್ ಸೆಲ್ವಂ ಬಣಕ್ಕೆ ಸರಕಾರದ ವಿರುದ್ಧ ಮುಗಿಬೀಳಲು ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ ಶಶಿಕಲಾರನ್ನು ಭೇಟಿಯಾಗದೇ ಇರಲು ತೀರ್ಮಾನಿಸಲಾಗಿದೆ.[ಎಡಪ್ಪಾಡಿ ಪಳನಿಸ್ವಾಮಿ, ಜಯಲಲಿತಾ ಆಪ್ತ ವಲಯಕ್ಕೆ ಲಗ್ಗೆ ಇಟ್ಟಿದ್ದು ಹೀಗೆ!]












Click it and Unblock the Notifications