ಚೆನ್ನೈನಲ್ಲಿ ಸಿಲಿಂಡರ್ ಸ್ಪೋಟಕ್ಕೆ ಓರ್ವ ಬಲಿ, 48 ಜನರಿಗೆ ಗಾಯ
ಚೆನ್ನೈ, ಜುಲೈ 16: ಇಲ್ಲಿನ ಕೊಡುಂಗೈಯೂರ್ ನಲ್ಲಿ ಬೇಕರಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ಪರಿಣಾಮ ಬೇಕರಿಗೆ ಬೆಂಕಿ ಹತ್ತಿಕೊಂಡು ಒಬ್ಬರು ಸಾವನ್ನಪ್ಪಿದ್ದಾರೆ. 48 ಜನರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ. ಜೆ ರಾಧಕೃಷ್ಣನ್ ಹೇಳಿದ್ದಾರೆ.

ಭಾನುವಾರ ಬೆಳ್ಳಂಬೆಳಗ್ಗೆ ನಡೆದ ಭೀಕರ ಸಿಲಿಂಡರ್ ಸ್ಪೋಟಕ್ಕೆ ಚೆನ್ನೈ ಬೆಚ್ಚಿ ಬಿದ್ದಿದ್ದು ಗಾಯಾಳುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಲವರು ಗಂಭೀರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.













Click it and Unblock the Notifications