ಕಿರುಕುಳಕ್ಕೆ ನೊಂದು, ಆತ್ಮಹತ್ಯೆಗೆ ಶರಣಾದ ನಿರ್ಮಾಪಕ
ಚೆನ್ನೈ, ನವೆಂಬರ್ 22: ತಮಿಳು ಚಿತ್ರರಂಗ ನಿರ್ಮಾಪಕ, ನಿರ್ದೇಶಕ ಅಶೋಕ್ ಕುಮಾರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಫಿಲಂ ಫೈನಾನ್ಶಿಯರ್ ನೀಡುತ್ತಿದ್ದ ಮಾನಸಿಕ ಕಿರುಕುಳವೇ ಕಾರಣ ಎಂದು ಬರೆದಿದ್ದಾರೆ.
ಬಡ್ಡಿ ವ್ಯವಹಾರ ನಡೆಸಸುವ ಅಂಬುಚೆಯಿನ್ ಕಿರುಕುಳದಿಂದ ಅಶೋಕ್ ಕುಮಾರ್ ನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಅಶೋಕ್ ಅವರ ಆಪ್ತರು ದೂರಿದ್ದಾರೆ. 'ಸಾಲಕ್ಕೆ ಹೆಚ್ಚು ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದ ಇದರಿಂದ ನನ್ನ ನೆಮ್ಮದಿ ಹಾಳಾಗಿದೆ' ಎಂದು ಆಪ್ತರಲ್ಲಿ ಅಶೋಕ್ ನೋವು ತೋಡಿಕೊಂಡಿದ್ದರು. ನಿರ್ಮಾಪಕ, ಕಾಲಿವುಡ್ ನಿರ್ದೇಶಕ, ನಟ ಎಂ.ಶಶಿಕುಮಾರ್ ಅವರ ಆಪ್ತ ಸಂಬಂಧಿಯಾಗಿರುವ ಅಶೋಕ್ ಆತ್ಮಹತ್ಯೆ ಪ್ರಕರಣವನ್ನು ವಲಸರವಕ್ಕಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tamil Nadu: Film producer-director B Ashok Kumar allegedly committed suicide at his residence in Chennai's Alwarthirunagar yesterday. He was allegedly being harassed and threatened by a financier with whom he was associated for more than 7 years. pic.twitter.com/EFNY4pcNok
— ANI (@ANI) November 22, 2017
ಮಧುರೈ ಮೂಲದ ಅಶೋಕ್ ಅವರು ಆರ್ಕಾಟ್ ರಸ್ತೆಯ ಅಳ್ವಾರ್ ತಿರು ನಗರದಲ್ಲಿದ್ದ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು. ಶಶಿಕುಮಾರ್ ಅಭಿನಯದ ಪೊರಾಲಿ, ಈಸನ್ ಅಲ್ಲದೆ ತೆರೆ ಕಾಣಬೇಕಿರುವ ಕೋಡಿ ವೀರನ್ ಚಿತ್ರದ ಸಹ ನಿರ್ಮಾಪಕರಾಗಿದ್ದ ಅಶೋಕ್ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ.












Click it and Unblock the Notifications