ಅಮೆರಿಕ ಕ್ಯಾಸಿನೋದಲ್ಲಿ ರಜನಿ, ಸುಬ್ರಮಣಿಯನ್ ಸ್ವಾಮಿ ಟ್ವೀಟ್
ಚೆನ್ನೈ, ಜುಲೈ 6: ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ನಟ ರಜನೀಕಾಂತ್ ಗೆ ತಗುಲಿಕೊಂಡಿದ್ದಾರೆ. ಈಚೆಗೆ ಅಮೆರಿಕಕ್ಕೆ ತೆರಳಿದ್ದ ರಜನಿ ಅಲ್ಲಿನ ಜೂಜು ಅಡ್ಡೆ (ಕ್ಯಾಸಿನೋ)ಗೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
Wow! RK 420 in a US Casino gambling to improve his health!! ED must find out from where his $$ came from. pic.twitter.com/4UeUgg9yNN
— Subramanian Swamy (@Swamy39) 5 July 2017
ರಜನಿ ಅಮೆರಿಕದಲ್ಲಿ ಕ್ಯಾಸಿನೋಗೆ ತೆರಳಿದ್ದರು ಎನ್ನಲಾದ ಫೋಟೋ ಹಾಗೂ ಅದರ ಜತೆಗೆ ಒಂದು ಸಂದೇಶ ಹರಿದಾಡುತ್ತಿದೆ. "ಅವರ ಮಗಳು ವಿಚ್ಛೇದನ ಪಡೆದಿದ್ದಾರೆ ಮತ್ತು ತಮಿಳು ಸಿನಿಮಾ ಜಿಎಸ್ ಟಿಯಿಂದ ನರಳುತ್ತಿದೆ. ಈ ವ್ಯಕ್ತಿ ಅಮೆರಿಕದ ಕ್ಯಾಸಿನೋದಲ್ಲಿ ಆಟವಾಡುತ್ತಿದ್ದಾರೆ" ಎಂಬ ಸಾಲುಗಳನ್ನು ಸಂದೇಶ ಒಳಗೊಂಡಿದೆ.
ಈ ಫೋಟೋದ ಸಾಚಾತನದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. "ವಾವ್! ಆರ್ ಕೆ 420 ಅಮೆರಿಕದ ಕ್ಯಾಸಿನೋದಲ್ಲಿ ಆರೋಗ್ಯ ವೃದ್ಧಿಗಾಗಿ ಜೂಜಾಟದಲ್ಲಿ ತೊಡಗಿದ್ದಾರೆ!! ಇವರಿಗೆ ಡಾಲರ್ ಗಳು ಎಲ್ಲಿಂದ ಬಂದವು ಅನ್ನೋದನ್ನು ಜಾರಿ ನಿರ್ದೇಶನಾಲಯವು ಪತ್ತೆ ಹಚ್ಚಬೇಕು" ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆದರೆ, ಕುಟುಂಬದ ಮೂಲಗಳ ಪ್ರಕಾರ ರಜನೀಕಾಂತ್ ಅವರು ತಮ್ಮ ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಇದೇ ವೇಳೆ ನಟ ರಜನೀಕಾಂತ್ ಕಾರಿನಲ್ಲಿರುವ ಮತ್ತೊಂದು ಸೆಲ್ಫಿ ಕೂಡ ಹರಿದಾಡುತ್ತಿದೆ.












Click it and Unblock the Notifications