ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮುನ್ನೆಲೆಗೆ ಬಂದ #metoo: ಈ ಬಾರಿ ಚೆನ್ನೈ ವಿದ್ಯಾರ್ಥಿಗಳಿಂದ ಅಭಿಯಾನ

|
Google Oneindia Kannada News

ಚೆನ್ನೈ, ಜೂನ್ 2: ಈ ಹಿಂದೆ ವಿಶ್ವಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ ಅನೇಕ ಖ್ಯಾತನಾಮರ ಮಾನ ಹರಾಜಿಗಿಟ್ಟಿತ್ತು #metoo ಅಭಿಯಾನ. ವಿಶ್ವಾದ್ಯಂತ ಸಾಕಷ್ಟು ಸೆಲೆಬ್ರಿಟಿಗಳು ಲೈಂಗಿಕ ಶೋಷಣೆ ಮಾಡಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದರು. ದೊಡ್ಡ ಕೋಲಾಹಲಕ್ಕೆ ಈ ಸಾಮಾಜಿಕ ಜಾಲತಾಣದ ಅಭಿಯಾನ ಕಾರಣವಾಗಿತ್ತು.

ಈಗ ಮತ್ತೆ ಈ ಅಭಿಯಾನ ಮುನ್ನೆಲೆ ಬರುತ್ತಿದೆ. ಈ ಬಾರಿ ಚೆನ್ನೈನಲ್ಲಿ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶಾಲೆಯ ಕ್ಲಾಸ್‌ರೂಮ್‌ಗಳಲ್ಲಿ, ಕ್ರೀಡಾಂಗಣಗಳಲ್ಲಿ, ಆನ್‌ಲೈನ್‌ಕ್ಲಾಸ್‌ಗಳಲ್ಲಿ ಎದುರಿಸಿದ ಲೈಂಗಿಕ ಶೋಷಣೆಗಳ ಬಗ್ಗೆ ಈ ಅಭಿಯಾನದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ದೂರು ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ದೂರು

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಈ ಅಭಿಯಾನದ ಕಾರಣದಿಂದಾಗಿ ನಗರದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಒಂದು ವಾರದ ಅಂತರದಲ್ಲಿ ಈ ವಿಚಾರವಾಗಿ ಸರಿ ಸುಮಾರು 100 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಮೂವರು ವಿದ್ಯಾರ್ಥಿಗಳು ನೇರವಾಗಿಯೇ ಪ್ರಕರಣವನ್ನು ದಾಖಲಿಸಿದ್ದು ಮೂವರು ಶಿಕ್ಷಕರ ಬಂಧನಕ್ಕೂ ಕಾರಣವಾಗಿದೆ. ಇದರಲ್ಲಿ ಅತ್ಯಾಚಾರ ಪ್ರಯತ್ನ ಸಹಿತ ಸರಣಿ ಆರೋಪಗಳನ್ನು ಮಾಡಲಾಗಿದೆ.

ಆರು ಶಾಲೆಗಳಿಗೆ ಸಮನ್ಸ್

ಆರು ಶಾಲೆಗಳಿಗೆ ಸಮನ್ಸ್

ಈ ಬೆಳವಣಿಗೆಯ ನಂತರ ಮಕ್ಕಳ ಹಕ್ಕುಗಳ ರಾಜ್ಯ ಆಯೋಗ ವಿಚಾರಣೆಗೆ ಹಾಜರಾಗುವಂತೆ ಪ್ರಮುಖ 6 ಶಾಲೆಗಳ ಮ್ಯಾನೇಜ್‌ಮೆಂಟ್‌ಗೆ ಸಮನ್ಸ್ ಕಳುಹಿಸಿದೆ. ಜೂನ್ 4-10ರ ಅವಧಿಯಲ್ಲಿ ಪ್ರತ್ಯೇಕ ದಿನಾಂಕಗಳಂದು ವಿಚಾರಣೆ ನಿಗದಿಪಡಿಸಿದೆ.

ದೂರು ಬಂದಿರುವುದು ಖಚಿತ

ದೂರು ಬಂದಿರುವುದು ಖಚಿತ

ಸಮನ್ಸ್ ಕಳುಹಿಸಲಾಗಿರುವ 6 ಶಾಲೆಗಳ ಬಗ್ಗೆಯೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮುಖ್ಯಸ್ಥೆ ಸರಸ್ವತಿ ರಂಗಸ್ವಾಮಿ ಮಾಹಿತಿಯನ್ನು ನೀಡಿದ್ದಾರೆ. ಈ ಶಾಲೆಗಳಿಂದ ಹಲವು ವಿದ್ಯಾರ್ಥಿಗಳಿಂದ ದೂರು ಬಂದಿರುವುದನ್ನು ಈ ಶಾಲೆಗಳು ಖಚಿತಪಡಿಸಿವೆ ಎಂದಿದ್ದಾರೆ.

ವಾರದ ಹಿಂದೆ ಅಭಿಯಾನ ಆರಂಭ

ವಾರದ ಹಿಂದೆ ಅಭಿಯಾನ ಆರಂಭ

ಈ ಅಭಿಯಾನ ಕೇವಲ ಒಂದು ವಾರಗಳ ಹಿಂದೆಯಷ್ಟೇ ಆರಂಭವಾಯಿತು. ಚೆನ್ನೈನ ಪಿಎಸ್‌ಬಿಬಿ ಶಾಲೆಯ ಮುಂಬೈ ಮೂಲದ ಹಳೆಯ ವಿದ್ಯಾರ್ಥಿನಿ ಕೃಪಾಲಿ ಎಂಬವರು ಆ ಶಾಲೆಯ ಜೂನಿಯರ್ ವಿದ್ಯಾರ್ಥಿನಿ ಶಾಲೆಯ ಕಾಮರ್ಸ್ ಶಿಕ್ಷಕನಿಂದ ಎದುರಿಸಿದ ಲೈಂಗಿಕ ಶೋಷಣೆಯ ಬಗ್ಗೆ ಸ್ಕ್ರೀನ್‌ಶಾನ್ ಒಂದನ್ನು ಹಂಚಿಕೊಂಡಿದ್ದರು. ಇದು ಆ ಶಾಲೆಯಲ್ಲಿ ಆ ಶಿಕ್ಷಕನ ವಿರುದ್ಧ ದೊಡ್ಡ ಮಟ್ಟದ ಅಭಿಯಾನಕ್ಕೆ ಕಾರಣವಾಯಿತು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆ ಶಿಕ್ಷಕನ ವಿರುದ್ಧ ದೂರುಗಳನ್ನು ನೀಡಿದ್ದರು. ಈ ಮೂಲಕ #ಮೀಟು ಅಭಿಯಾನ ಮುನ್ನೆಲೆಗೆ ಬಂದು ಈಗ ಬೇರೆ ಬೇರೆ ಶಾಲೆಗಳ ಬೇರೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

ನೇರವಾಗಿ ದೂರು ನೀಡಲು ಮನವಿ

ನೇರವಾಗಿ ದೂರು ನೀಡಲು ಮನವಿ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಸಂಬಂಧಪಟ್ಟ ವಿದ್ಯಾರ್ಥಿಗಳಲ್ಲಿ ನೇರವಾಗಿ ದೂರು ನೀಡುವಂತೆ ಕೇಳಿಕೊಂಡಿದ್ದಾರೆ. ಚೆನ್ನೈ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಈ ಆರೋಪಗಳನ್ನು ಮಾಡುತ್ತಿದ್ದಾರೆ.

English summary
In social media plateform metoo movement started again. this time it is started Chennai’s schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X