Get Updates
Get notified of breaking news, exclusive insights, and must-see stories!

ತಮಿಳುನಾಡಿಗೆ ಕಾವೇರಿ ನೀರು; ಮೆಟ್ಟೂರು ಡ್ಯಾಂ 100 ಅಡಿಗೂ ಹೆಚ್ಚು ನೀರು!

ಚೆನ್ನೈ, ಜೂನ್ 18 : ತಮಿಳುನಾಡಿಗೆ ಜೂನ್ ತಿಂಗಳ ಕಂತಿನ 9.19 ಟಿಎಂಸಿ ಅಡಿ ನೀರನ್ನು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಮತ್ತೊಂದು ಕಡೆ ಮೆಟ್ಟೂರು ಡ್ಯಾಂ ಭರ್ತಿಯಾಗಿದ್ದು, ನಾಲೆಗಳ ಮೂಲಕ ನೀರನ್ನು ಹೊರಬಿಡಲಾಗಿದೆ.

Recommended Video

      Sreesanth to make a comeback to Ranji cricket at the age of 37 | Oneindia Kannada

      ಕಾವೇರಿ ವಿವಾದದ ಅಂತಿಮ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಜೂನ್‌ನಲ್ಲಿ 9.19 ಟಿಎಂಸಿ ಅಡಿ, ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ಹರಿಸಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಈಗ ನೀರು ಹರಿಸುವಂತೆ ನಿರ್ದೇಶ ನೀಡಿದೆ.

      ತಮಿಳುನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಮೆಟ್ಟೂರು ಜಲಾಶಯ ಭರ್ತಿಯಾಗಿದೆ. 9 ವರ್ಷಗಳ ಬಳಿಕ ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಜಲಾಶಯಕ್ಕೆ ಪೂಜೆ ಸಲ್ಲಿಸಿ 3 ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡುಗಡೆ ಮಾಡಿದ್ದಾರೆ.

      ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. 120 ಅಡಿ ಎತ್ತರದ ಮೆಟ್ಟೂರು ಜಲಾಶಯದಲ್ಲಿ ಕಳೆದ 6 ತಿಂಗಳಿನಿಂದ 100 ಅಡಿಗೂ ಅಧಿಕ ನೀರಿನ ಸಂಗ್ರಹವಿದೆ. ಒಟ್ಟು 90 ದಿನಗಳ ಕಾಲ ಮೂರು ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡಲಾಗುತ್ತದೆ.

      ಕೆಆರ್‌ಎಸ್‌ನಲ್ಲಿ ಎಷ್ಟು ನೀರಿದೆ?

      ಕೆಆರ್‌ಎಸ್‌ನಲ್ಲಿ ಎಷ್ಟು ನೀರಿದೆ?

      ಕರ್ನಾಟಕದಲ್ಲಿ ಈಗ ಮಳೆ ಆರಂಭವಾಗುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ಜೋರಾಗಿ ಸುರಿದು ಇನ್ನೂ ಜಲಾಶಯಕ್ಕೆ ಒಳಹರಿವು ಬರಬೇಕಿದೆ. ತಮಿಳುನಾಡಿಗೆ ಜೂನ್ ತಿಂಗಳ ಕೋಟಾದ 9.19 ಟಿಎಂಸಿ ಅಡಿ ನೀರನ್ನು ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ಬಿಡಬೇಕು. 124.80 ಅಡಿ ಜಲಾಶಯದಲ್ಲಿ 92.87 ಅಡಿ ನೀರಿನ ಸಂಗ್ರವಿದೆ (45.05 ಟಿಎಂಸಿ ಅಡಿ).

      ಭರ್ತಿಯಾಗಿದೆ ಮೆಟ್ಟೂರು ಡ್ಯಾಂ

      ಭರ್ತಿಯಾಗಿದೆ ಮೆಟ್ಟೂರು ಡ್ಯಾಂ

      ತಮಿಳುನಾಡಿನ ಮೆಟ್ಟೂರು ಡ್ಯಾಂ ಭರ್ತಿಯಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಜಲಾಶಯದಿಂದ 3 ಸಾವಿರ ಕ್ಯೂಸೆಕ್ ನೀರನ್ನು ನಾಲೆಗಳಿಗೆ ಬಿಡುಗಡೆ ಮಾಡಿದ್ದಾರೆ. 2011ರ ಬಳಿಕ ಮೊದಲ ಬಾರಿಗೆ ನಾಲೆಗಳಿಗೆ ನೀರು ಹರಿಸಲಾಗಿದೆ. ಶುಕ್ರವಾರದಿಂದ 10 ಸಾವಿರ ಕ್ಯೂಸೆಕ್‌ ನೀರನ್ನು ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

      ರೈತರಿಗೆ ಅನುಕೂಲವಾಗಲಿದೆ

      ರೈತರಿಗೆ ಅನುಕೂಲವಾಗಲಿದೆ

      ಮೆಟ್ಟೂರು ಡ್ಯಾಂನಿಂದ ನಾಲೆಗಳಿಗೆ ನೀರನ್ನು ಬಿಟ್ಟರೆ ನಾಗಪಟ್ಟಿನಂ, ತಂಜಾವೂರು, ಪುದುಕೋಟೈ ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಜಲಾಶಯದ ಕೆಳಭಾಗದ ಸುಮಾರು 5 ಲಕ್ಷ ಎಕರೆ ಭೂಮಿಯಲ್ಲಿ ರೈತರು ಅಲ್ಪ ಅವಧಿಯ ಬೆಳೆಯನ್ನು ಬೆಳೆಯುತ್ತಾರೆ.

      ಭರ್ತಿಯಾದ ಮೆಟ್ಟೂರು ಡ್ಯಾಂ ನೋಟ

      ಭರ್ತಿಯಾಗಿರುವ ಮೆಟ್ಟೂರು ಡ್ಯಾಂನ ವಿಡಿಯೋವನ್ನು ಮುಖ್ಯಮಂತ್ರಿಗಳು ತಮ್ಮ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+